ಮೊಹಾಲಿ(ಜ.04): ಭಾರತ ಕ್ರಿಕೆಟ್‌ ತಂಡದ ಯುವ ಪ್ರತಿಭೆ ಶುಭ್‌ಮನ್‌ ಗಿಲ್‌, ಇಲ್ಲಿ ಶುಕ್ರವಾರದಿಂದ ಆರಂಭಗೊಂಡ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಅಂಪೈರ್‌ ಜತೆ ವಾಗ್ವಾದ ನಡೆಸಿ ವಿವಾದಕ್ಕೆ ಕಾರಣರಾಗಿದ್ದಾರೆ. ಈ ಪ್ರಸಂಗದಿಂದಾಗಿ ಪಂದ್ಯ 10 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: ರಣಜಿ ಟ್ರೋಫಿ: ಬೌಲಿಂಗ್‌ನಲ್ಲಿ ಮಿಂಚಿ ಬ್ಯಾಟಿಂಗ್‌ನಲ್ಲಿ ಎಡವಿದ ಕರ್ನಾಟಕ

ಭಾರತ ‘ಎ’ ತಂಡದ ನಾಯಕರಾಗಿರುವ ಗಿಲ್‌, 10 ರನ್‌ ಗಳಿಸಿದ್ದಾಗ ಸುಬೋಧ್‌ ಭಾಟಿ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್‌ ನೀಡಿ ಔಟಾದರು ಎಂದು ಅಂಪೈರ್‌ ಘೋಷಿಸಿದರು. ನೇರವಾಗಿ ಅಂಪೈರ್‌ ಮೊಹಮದ್‌ ರಫಿ ಬಳಿಗೆ ತೆರಳಿದ ಗಿಲ್‌, ತಾವು ಚೆಂಡು ತಮ್ಮ ಬ್ಯಾಟ್‌ಗೆ ತಗುಲಿಯೇ ಇಲ್ಲ ಹೇಗೆ ಔಟ್‌ ನೀಡಿದಿರಿ ಎಂದು ವಾದಕ್ಕಿಳಿದರು. ಬಳಿಕ ಸ್ಕೆ$್ವೕರ್‌ ಲೆಗ್‌ ಅಂಪೈರ್‌ ಪಶ್ಚಿಮ್‌ ಪಾಠಕ್‌ರನ್ನು ಸಂಪರ್ಕಿಸಿದ ರಫಿ, ಕೆಲ ಕಾಲ ಚರ್ಚಿಸಿ ಗಿಲ್‌ ಔಟ್‌ ಇಲ್ಲ ಎಂದು ತೀರ್ಪು ಬದಲಿಸಿದರು. ಆದರೆ ಗಿಲ್‌ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. 23 ರನ್‌ ಗಳಿಸಿ ಔಟಾದರು.

ಇದನ್ನೂ ಓದಿ: ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ!.

ಗಿಲ್‌ ಔಟಾಗಿದ್ದರು ಎಂದು ದೆಹಲಿ ತಂಡದ ಆಟಗಾರರು ಬಲವಾಗಿ ನಂಬಿದ್ದರು. ಇದೇ ಕಾರಣ ಉಪನಾಯಕ ನಿತೀಶ್‌ ರಾಣಾ, ತೀರ್ಪು ಬದಲಿಸಲು ಹೇಗೆ ಸಾಧ್ಯ ಎಂದು ಅಂಪೈರ್‌ಗಳನ್ನು ಪ್ರಶ್ನಿಸಿದರು. ಅಂಪೈರ್‌ ತೀರ್ಪು ಪ್ರಶ್ನಿಸಿ ಅನುಚಿತವಾಗಿ ವರ್ತಸಿದ ಕಾರಣ, ಗಿಲ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.