Asianet Suvarna News Asianet Suvarna News

ವೈಷ್ಣೋ ದೇವಿ ಮಂದಿರಕ್ಕೆ ತೆರಳುತ್ತಿದ ಯಾತ್ರಿಕರ ಬಸ್ ಪಲ್ಟಿ, ಓರ್ವ ಸಾವು, 24 ಮಂದಿಗೆ ಗಾಯ!

ಮಾತಾ ವೈಷ್ಣೋ ದೇವಿ ದರ್ಶನಕ್ಕೆ ತೆರಳಿದ್ದ ಭಕ್ತರ ಬಸ್ ಪಲ್ಟಿಯಾದ ಘಟನೆ ನಡೆದಿದೆ. 28 ಯಾತ್ರಾರ್ಥಿಕರ ಪೈಕಿ ಓರ್ವ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ

Mata vaishno devi pilgrims bus accident at Jammu and Kashmir 24 sustained Injuries ckm
Author
First Published May 21, 2023, 8:49 PM IST

ಜಮ್ಮು(ಮೇ.21): ಮಾತಾ ವೈಷ್ಣೋ ದೇವಿ ಮಂದಿರಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ರೆಯಾಸಿ ಜಿಲ್ಲೆಯಲ್ಲಿ ನಡೆದಿದೆ. ಈ ಅಪಘಾತದಲ್ಲಿ ಓರ್ವ ಭಕ್ತ ಮೃತಪಟ್ಟಿದ್ದರೆ, 24 ಮಂದಿ ಗಾಯಗೊಂಡಿದ್ದಾರೆ. 28 ಯಾತ್ರಾರ್ಥಿಕರು ಕಾಶ್ಮೀರದ ಕತ್ರಾ ಪಟ್ಟಣದಿಂದ ಮಾತಾ ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಣಿವೆ ಪ್ರದೇಶದಲ್ಲಿನ ಕಡಿದಾದ ತಿರುವಿನಲ್ಲಿ ಬಸ್ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ ಬಸ್ ಪ್ರಪಾತಕ್ಕೆ ಉರುಳಿದೆ. 24 ಗಾಯಾಳುಗಳ ಪೈಕಿ 16 ಮಂದಿ ಗಾಯಾಳುಗಳನ್ನು ಕತ್ರಾದ ಸಿಎಸ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 8 ಮಂದಿಯನ್ನು ದನ್ಸಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರು ಪರಿಸ್ಥಿತಿ ಗಂಭೀರವಾಗಿದೆ. ಈ ಗಾಯಳುಗಳನ್ನು ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಎಸ್ಸೆಸ್ಸೆಲ್ಸಿ ಟಾಪರ್‌ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು, ಅಂಗಾಂಗ ದಾನ ಮಾಡಿ 6 ಜನರ ಜೀವಕ್ಕೆ ಬೆಳಕಾದ!

ಬಸ್ ಪ್ರಪಾತಕ್ಕೆ ಉರುಳಿದ ಬೆನ್ನಲ್ಲೇ ಇತರ ವಾಹನ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಹೀಗಾಗಿ ಅಪಘಾತವಾದ ಬೆನ್ನಲ್ಲೇ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲು ಸಾಧ್ಯವಾಗಿದೆ. 

ಕಳೆದೆರಡು ತಿಂಗಳ ಹಿಂದೆ ಕರ್ನಾಟಕದ ಪ್ರಸಿದ್ಧ ದೇಗುಲ ಸವದತ್ತಿ ಶ್ರೀ ಯಲ್ಲಮ್ಮ ದೇವಿ ದರ್ಶನಕ್ಕೆ ಹೊರಟ್ಟಿದ್ದ ಭಕ್ತರ ವಾಹನ ಅಪಘಾತಕ್ಕೀಡಾಗಿ ಸ್ಥಳದಲ್ಲೇ 6 ಮಂದಿ ಮೃತಪಟ್ಟ ಘಟನೆ ನಡೆದಿತ್ತು. 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಹತ್ತಿರ ನಡೆದಿತ್ತು.  

Road Accident: ಗೂಡ್ಸ್-ಕಾರು ನಡುವೆ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು!

ಮಹಿಂದ್ರಾ ಬುಲೇರೊ ಗೂಡ್‌್ಸ ವಾಹನದ ಮೂಲಕ ಹುಲಕುಂದ ಗ್ರಾಮದಿಂದ ರಾಮದುರ್ಗ ಮಾರ್ಗವಾಗಿ ಸವದತ್ತಿಯ ಶ್ರೀ ಯಲ್ಲಮ್ಮನ ದರ್ಶನಕ್ಕೆಂದು ಹೊರಟಿದ್ದರು. ನಿದ್ದೆ ಮಂಪರಿನಲ್ಲಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ರಾಮದುರ್ಗ ತಾಲೂಕಿನ ಚುಂಚನೂರ ಹತ್ತಿರ ವಿಠಲ… ರುಕ್ಮಿಣಿ ದೇವಸ್ಥಾನದ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಐದು ಜನರು ಮೃತಪಟ್ಟಿದ್ದರೇ, ಮತ್ತೋರ್ವನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಪಕ್ಷಿ ಹಾರಿಹೋಗಿದೆ. ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದೇ ಮಾರ್ಗದಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಇತರ ವಾಹನಗಳ ಸವಾರರು, ಗ್ರಾಮಸ್ಥರು ಸಹಾಯಕ್ಕೆ ಧಾವಿಸಿ, ರಕ್ಷಣಾ ಕಾರ್ಯ ಮಾಡಿದರು. ಸ್ಥಳಕ್ಕೆ ಬಂದ ಕಟಕೋಳ ಪೊಲೀಸರೂ ಆಂಬ್ಯುಲೆನ್ಸ್‌ ಮೂಲಕ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. 

Follow Us:
Download App:
  • android
  • ios