Asianet Suvarna News Asianet Suvarna News

Road Accident: ಗೂಡ್ಸ್-ಕಾರು ನಡುವೆ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು!

ಟಾಟಾ ಗೂಡ್ಸ್ ವಾಹನ ಮತ್ತು ಕಾರು ಮಧ್ಯೆ ಡಿಕ್ಕಿಯಾಗಿ  ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ನಡೆದಿದೆ.

terrible accident between goods and car in hubballi gow
Author
First Published May 19, 2023, 10:18 PM IST

ಹುಬ್ಬಳ್ಳಿ (ಮೇ.19):  ಭೀಕರ ರಸ್ತೆ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ನಡೆದಿದೆ. ಟಾಟಾ ಗೂಡ್ಸ್ ವಾಹನ ಮತ್ತು ಕಾರು ಮಧ್ಯೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಹುಬ್ಬಳ್ಳಿ ನಿವಾಸಿಗಳಾದ ಫ್ರಾನ್ಸಿಸ್ ಗೊನ್ಸಾಲ್ವಿಜ್(73),  ಓಲಿವಿಯಾ ಕ್ಯಾಥರೀನ್(36) ಮೃತ ದುರ್ದೈವಿಗಳಾಗಿದ್ದು, ಇಬ್ಬರು ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯವಾಗಿದೆ. ಫ್ರಾನ್ಸಿಸ್ ಪತ್ನಿ ಲೀನಾ, ಪುತ್ರ ಏಲೆನ್, ಮೊಮ್ಮಕ್ಕಳಾದ ವರ್ಷದ ಜೋರ್ಡನ್, ಶುವಾ ಹಾಗೂ ಗೂಡ್ಸ್ ವಾಹನ ಚಾಲಕ ಗಣೇಶ ಖನ್ನಾಗೌಡಾಗೆ ಗಂಭೀರ ಗಾಯವಾಗಿದೆ. ಹುಬ್ಬಳ್ಳಿಯಿಂದ ಕಲಘಟಗಿಯತ್ತ ಹೊರಟಿದ್ದ ಕಾರು ಪ್ರಯಾಣಿಸುತಿತ್ತು ಎಂದು ತಿಳಿದುಬಂದಿದೆ. ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಟಾಟಾ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೈಕ್‌ ಅಪಘಾತ, ಇಬ್ಬರು ಅಪ್ರಾಪ್ತರ ಸಾವು
ರೋಣ: ಬೈಕ್‌ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಅಪ್ರಾಪ್ತರು ಸ್ಥಳದಲ್ಲೇ ಸಾವಿಗೀಡಾದ ಘಟನೆ ರೋಣ-ಅಬ್ಬಿಗೇರ ರಸ್ತೆ ಮಧ್ಯೆ ಶುಕ್ರವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ ಇನ್ನೊಬ್ಬನಿಗೆ ಗಂಭೀರ ಗಾಯಗಳಾಗಿವೆ.

ಅಬ್ಬಿಗೇರಿ ಕಡೆಯಿಂದ ರೋಣಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಒಂದೇ ಬೈಕ್‌ನಲ್ಲಿ ಮೂವರು ಬರುತ್ತಿದ್ದ ವೇಳೆ ಬೈಕ್‌ ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಸ್ಥಳದಲ್ಲಿಯೇ ಅನುಪ ಇಟಗಿ (16), ಶ್ರೀಕಾಂತ ಗಡಗಿ (15) ಮರಣ ಹೊಂದಿದ್ದಾರೆ. ಇನ್ನೋರ್ವ ಅಪ್ರಾಪ್ತ ಮನೋಜ ಕಂಬಾರಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಈ ಮೂವರು ಬಾಲಕರು ರೋಣ ಪಟ್ಟಣದರು.

FIRE ACCIDENT: ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಭೀಕರ ದುರಂತಕ್ಕೆ ಯುವತಿ ಬಲಿ!

ಗಾಯಾಳು ಮನೋಜನನ್ನು ರೋಣ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಸ್ಥಳಕ್ಕೆ ಸಿಪಿಐ ಶಿವಾನಂದ ಓಲೇಕಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MYSURU: ಜೈಲಿನಿಂದ ಬಂದಿದ್ದ ರೌಡಿಶೀಟರ್ ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿ

ಮಗಿಲು ಮುಟ್ಟಿದ ಆಕ್ರಂದನ:
ಇನ್ನೂ ಬಾಳಿ ಬದುಕಬೇಕಿದ್ದ ಕಂದಮ್ಮಗಳು ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದು ಕುಟುಂಬದವರಿಗೆ ಆಘಾತ ಉಂಟುಮಾಡಿದೆ. ಅವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆಗೆ ಸಾರ್ವಜನಿಕರೂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios