manish pandey ashrita shetty separated ಹಾರ್ದಿಕ್‌ ಪಾಂಡ್ಯ ಬಳಿಕ ಟೀಮ್‌ ಇಂಡಿಯಾದ ಮತ್ತೊಬ್ಬ ಪ್ಲೇಯರ್‌ ಜೀವನದಲ್ಲಿ ಬಿರುಕು ಉಂಟಾಗಿದೆ ಮೂಲಗಳ ಪ್ರಕಾರ, ಟೀಮ್‌ ಇಂಡಿಯಾ ಪ್ಲೇಯರ್‌ ಹಾಗೂ ಕರ್ನಾಟಕ ರಣಜಿ ತಂಡದ ನಾಯಕ ಮನೀಷ್‌ ಪಾಂಡೆ ಪತ್ನಿ ಆಶ್ರಿತಾ ಶೆಟ್ಟಿಯಿಂದ ದೂರವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಬೆಂಗಳೂರು (ಜೂ.20): ಹಾರ್ದಿಕ್‌ ಪಾಂಡ್ಯ-ನತಾಶಾ ಸ್ಟಾಂಕೋವಿಕ್‌, ಚಂದನ್‌ ಶೆಟ್ಟಿ-ನಿವೇದಿತಾ ಗೌಡ, ಯುವ ರಾಜ್‌ಕುಮಾರ್‌-ಶ್ರೀದೇವಿ ಭೈರಪ್ಪ ವಿಚ್ಛೇದನ ಸುದ್ದಿಗಳ ನಡುವೆ ಮತ್ತೊಬ್ಬ ಟೀಮ್‌ ಇಂಡಿಯಾ ಪ್ಲೇಯರ್‌ ಬಾಳಿನಲ್ಲಿ ಬಿರುಕು ಮೂಡಿರುವ ಸಂಶಯ ಮೂಡಿದೆ. ಅದಕ್ಕೆ ಕಾರಣ ಇನ್ಸ್‌ಟಾಗ್ರಾಮ್‌. ಹಾರ್ದಿಕ್‌ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್‌ ನಡುವಿನ ವಿಚ್ಛೇದನ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದರೂ, ಹಾಗೆ ತಣ್ಣಗಾಗಿ ಹೋಯಿತು. ಈಗ ಟೀಮ್‌ ಇಂಡಿಯಾ ಆಟಗಾರ ಹಾಗೂ ಕರ್ನಾಟಕ ರಣಜಿ ತಂಡದ ನಾಯಕ ಮನೀಷ್‌ ಪಾಂಡೆ ಅವರ ಜೀವನದಲ್ಲೂ ವಿಚ್ಛೇದನದ ಬಿರುಗಾಳಿ ಎದ್ದಿರುವ ಸಾಧ್ಯತೆ ಇದೆ. ಇನ್ಸ್‌ಟಾಗ್ರಾಮ್‌ನಲ್ಲಿ ಮನೀಷ್‌ ಪಾಂಡೆ ಪತ್ನಿ ಆಶ್ರಿತಾ ಶೆಟ್ಟಿ ಜೊತೆಗೆ ಇದ್ದ ಎಲ್ಲಾ ಫೋಟೋಗಳನ್ನೂ ಡಿಲೀಟ್‌ ಮಾಡಿದ್ದಾರೆ. ಇನ್ನೊಂದೆಡೆ ಆಶ್ರಿತಾ ಶೆಟ್ಟಿ ಕೂಡ ಮನೀಷ್‌ ಪಾಂಡೆ ಜೊತೆಗೆ ಇರುವ ಎಲ್ಲಾ ಚಿತ್ರಗಳನ್ನು ತಮ್ಮ ಹ್ಯಾಂಡಲ್‌ನಿಂದ ಡಿಲೀಟ್‌ ಮಾಡಿದ್ದಾರೆ.

2019ರಲ್ಲಿ ಮನೀಷ್‌ ಪಾಂಡೆ ಹಾಗೂ ಕರಾವಳಿ ಮೂಲದ ನಟಿ ಆಶ್ರಿತಾ ಶೆಟ್ಟಿ ಅದ್ದೂರಿಯಾಗಿ ವಿವಾಹವಾಗಿದ್ದರು. ಅದಾದ ಬಳಿಕ ಅವರು ಜೊತೆಯಲ್ಲಿದ್ದ ಸಾಕಷ್ಟು ಫೋಟೋಗಳು, ವಿಹಾರದ ಚಿತ್ರಗಳು, ಮ್ಯಾಚ್‌ನ ಸಮಯದ ಚಿತ್ರಗಳನ್ನು ಮನೀಷ್‌ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ಇಬ್ಬರೂ ಹಂಚಿಕೊಂಡಿದ್ದರು. ಆದರೆ, ಈಗ ಅಂಥ ಯಾವುದೇ ಫೋಟೋಗಳೂ ಕಾಣಿಸುತ್ತಿಲ್ಲ. ಇದೆಲ್ಲದರ ನಡುವೆ ಮನೀಷ್‌ ಪಾಂಡೆ ಕೂಡ ಇತ್ತೀಚೆಗೆ ಪತ್ನಿಯ ಜೊತೆಗಿನ ಯಾವುದೇ ಫೋಟೋಗಳನ್ನೂ ಹಂಚಿಕೊಂಡಿಲ್ಲ.

ಐಪಿಎಲ್‌ಗೂ ಮುನ್ನ ಕುಕ್ಕೆ ಸುಬ್ರಹ್ಮಣ್ಯ ಮೊರೆ ಹೋದ ಮನೀಶ್ ಪಾಂಡೆ ದಂಪತಿ

ಮುಖ್ಯವಾಗಿ ಇಬ್ಬರೂ ಕೂಡ ತಮ್ಮ ಮದುವೆಯ ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈಗ ಆ ಚಿತ್ರಗಳನ್ನೂ ತೆಗೆದುಹಾಕಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಬದುಕಲು ಆರಂಭ ಮಾಡಿ ವರ್ಷಗಳೇ ಕಳೆದಿವೆ ಎನ್ನುವ ವದಂತಿಗಳೂ ಇವೆ. ಬುಧವಾರ ಐಪಿಎಲ್‌ ಟ್ರೋಫಿ ಜೊತೆ ಫೋಟೋ ಪೋಸ್ಟ್‌ ಮಾಡಿರುವ ಮನೀಷ್‌ ಪಾಂಡೆಗೆ ಅಭಿಮಾನಿಯೊಬ್ಬರು ಕೂಡ ಇದೇ ಪ್ರಶ್ನೆ ಕೇಳಿದ್ದಾರೆ. ಇನ್ನೂ ಕೆಲವರು ಮನೀಷ್‌ ಪಾಂಡೆ ಹಾಗೂ ಆಶ್ರಿತಾ ಈಗಾಗಲೇ ವಿಚ್ಛೇದನ ಪಡೆದುಕೊಂಡು, ಬೇರೆ ಬೇರೆಯಾಗಿ ವಾಸ ಮಾಡಲು ಆರಂಭ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕುಡ್ಲದ ಕುವರಿಗೆ ಮನೀಶ್ ಪಾಂಡೆ ಕ್ಲೀನ್ ಬೋಲ್ಡ್!