ಮೆಲ್ಬರ್ನ್‌[ಡಿ.09]: ಆಸ್ಪ್ರೇ​ಲಿ​ಯಾದ ಮಾಜಿ ಕ್ರಿಕೆಟರ್‌, ಅಮೆ​ರಿ​ಕ ಮಹಿಳಾ ತಂಡದ ಮಾಜಿ ಕೋಚ್‌ ಜೂಲಿಯಾ ಪ್ರೈಸ್‌ ಬಿಗ್‌ಬ್ಯಾಶ್‌ನ ಬ್ರಿಸ್ಬೇನ್‌ ಹೀಟ್‌ ತಂಡದ ಸಹಾ​ಯಕ ಕೋಚ್‌ ಆಗಿ ನೇಮ​ಕ​ಗೊಂಡಿ​ದ್ದಾರೆ. 

ಇಂದಿ​ನಿಂದ ಕರ್ನಾ​ಟ​ಕಕ್ಕೆ ತಮಿ​ಳು​ನಾಡು ಸವಾ​ಲು

ಪುರು​ಷರ ತಂಡಕ್ಕೆ ಮಹಿಳಾ ಕೋಚ್‌ ಒಬ್ಬರು ನೇಮಕ​ಗೊಂಡಿ​ರು​ವುದು ಕ್ರಿಕೆಟ್‌ನಲ್ಲಿ ಅಪ​ರೂ​ಪದ ಬೆಳ​ವ​ಣಿಗೆ ಎನಿ​ಸಿದೆ. ಜತೆಗೆ ಬಿಗ್‌ಬ್ಯಾಶ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕೋಚ್‌ನ ನೇಮ​ಕ​ವಾ​ಗಿದೆ. ಜೂಲಿಯಾ, ಈ ಮೊದಲು 3 ವರ್ಷಗಳ ಕಾಲ ಮಹಿಳಾ ಬಿಗ್‌ಬ್ಯಾಶ್‌ನಲ್ಲಿ ಹೊಬಾರ್ಟ್‌ ಹರಿ​ಕೇನ್ಸ್‌ ತಂಡದ ಕೋಚ್‌ ಆಗಿ​ದ್ದರು. ಬ್ರಿಸ್ಬೇನ್‌ ತಂಡ​ದಲ್ಲಿ ಆಸ್ಪ್ರೇ​ಲಿ​ಯಾದ ಮಾಜಿ ಕೋಚ್‌ ಡರೆನ್‌ ಲೆಹ್ಮನ್‌ ಜತೆ ಜೂಲಿಯಾ ಕಾರ್ಯ​ನಿ​ರ್ವ​ಹಿ​ಸ​ಲಿ​ದ್ದಾರೆ.

ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಮಿಕಿ ಆರ್ಥರ್‌ ಕೋಚ್‌!

‘ನನಗೆ ಬಹಳ ಸಂತೋಷವಾಗು​ತ್ತಿದೆ. ಈ ಹುದ್ದೆ ಸಿಗ​ಲಿದೆ ಎಂದು ನಿರೀಕ್ಷೆ ಮಾಡಿ​ರ​ಲಿಲ್ಲ. ಈ ಅವ​ಕಾಶವನ್ನು ಸದು​ಪ​ಯೋಗ ಪಡಿ​ಸಿ​ಕೊ​ಳ್ಳಲು ಕಾಯುತ್ತಿದ್ದೇನೆ. ವಿಶ್ವ​ದಾ​ದ್ಯಂತ ಮಹಿಳಾ ಕೋಚ್‌ಗಳಿಗೆ ನನ್ನಂತೆಯೇ ಅವ​ಕಾಶಗಳು ಸಿಗ​ಬೇ​ಕೆಂದು ಆಶಿ​ಸು​ತ್ತೇನೆ’ ಎಂದು ಜೂಲಿಯಾ ಹೇಳಿ​ದ್ದಾರೆ.