IPL 2023: ಎಂಎಸ್‌ ಧೋನಿಗೆ ಮೊಣಕಾಲಿನ ಯಶಸ್ವಿ ಶಸ್ತ್ರಚಿಕಿತ್ಸೆ!

ಐಪಿಎಲ್‌ ವೇಳೆ ಸಾಕಷ್ಟು ಸಮಸ್ಯೆ ನೀಡಿದ್ದ ಮೊಣಕಾಲು ನೋವಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್‌ ಧೋನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತಿಳಿಸಿದೆ.
 

Mahendra Singh Dhoni's knee surgery has been successful says Chennai Super Kings CEO san

ಮುಂಬೈ (ಜೂ.1): ಭಾರಿ ಸಮಸ್ಯೆ ನೀಡಿದ್ದ ಮೊಣಕಾಲು ಸಮಸ್ಯೆಗೆ ಎಂಎಸ್‌ ಧೋನಿ ತಜ್ಞರ ಸಲಹೆ ಪಡೆಯಲಿದ್ದಾರೆ ಎಂದು ಸುದ್ದಿಯಾದ ನಡುವೆಯೇ ಅವರು ಮೊಣಕಾಲು ಗಾಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಿಳಿಸಿದೆ. ಗುರುವಾರ ಈ ಕುರಿತಾಗಿ ಟ್ವೀಟ್‌ ಮಾಡಿರುವ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಿಇಒ ಕಾಶಿ ವಿಶ್ವನಾಥನ್, ಎಂಎಸ್‌ ಧೋನಿ ಅವರಿಗೆ ನಡೆಸಿರುವ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ತಿಳಿಸಿದ್ದಾರೆ. ಐಪಿಎಲ್‌ ಸಮಯದಲ್ಲಿ ಎಂಎಸ್‌ ಧೋನಿ ತಮ್ಮ ಎಡ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಇದಕ್ಕೆ ಮುಂಬೈನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಚಾಂಪಿಯನ್‌ ಆದ ಎರಡೇ ದಿನಕ್ಕೆ ಧೋನಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಿರ್ಧಾರ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಇನ್ನೊಂದೆಡೆ, ಅವರು ಮುಂದಿನ ಐಪಿಎಲ್‌ ಆಡುವ ಬಗ್ಗೆ ನಿರ್ಧಾರ ಮಾಡುವ ಮುನ್ನ ದೊಡ್ಡ ಮುಟ್ಟದ ಪುನಃಶ್ಚೇತನ ಶಿಬಿರದಲ್ಲಿ ಭಾಗಿಯಾಗಬೇಕಿದೆ.

ಲಭ್ಯ ಮಾಹಿತಿಯ ಪ್ರಕಾರ ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಯಲ್ಲಿ ಎಂಎಸ್‌ ಧೋನಿಯವರಿಗೆ ಶಸ್ತ್ರಚಿಕಿತ್ಸೆಯಾಗಿದೆ. ಡಾ.ದಿನ್‌ ಶಾ ಪರ್ದಿವಾಲಾ ಶಸ್ತ್ರಚಿಕಿತ್ಸೆ ನಡೆಸಿಕೊಟ್ಟಿದ್ದಾರೆ. ಡಾ.ಪರ್ದಿವಾಲಾ ಅವರು ಸೆಂಟರ್ ಫಾರ್ ಸ್ಪೋರ್ಟ್ಸ್ ಮೆಡಿಸಿನ್ ಮುಖ್ಯಸ್ಥರಾಗಿದ್ದು, ರಿಷಬ್ ಪಂತ್ ಅವರ ಶಸ್ತ್ರಚಿಕಿತ್ಸೆಯನ್ನೂ ಇವರಿ ಮಾಡಿದ್ದರು. ಪ್ರಸ್ತುತ ಧೋನಿ ಆಸ್ಪತ್ರೆಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ.

ಇಡೀ ಐಪಿಎಲ್‌ಅನ್ನು ಮೊಣಕಾಲು ನೋವಿನೊಂದಿಗೆ ಧೋನಿ ಆಟವಾಡಿದ್ದರು. ಮೇ. 31 ರ ರಾತ್ರಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವರದಿಯಾಗಿದೆ. ಐಪಿಎಲ್‌ ಫೈನಲ್‌ ಮುಗಿದ ಬೆನ್ನಲ್ಲಿಯೇ ಇಡೀ ತಂಡ ಚೆನ್ನೈಗೆ ಹೋಗಿದ್ದರೆ, ಧೋನಿ ಮಾತ್ರ ಮುಂಬೈಗೆ ತೆರಳಿದ್ದರು. ಶಸ್ತ್ರಚಿಕಿತ್ಸೆಗೆ ತೆರಳುವ ಮುನ್ನ ಎಂಎಸ್‌ ಧೋನಿ ಭಗವದ್ಗೀತೆ ಹಿಡಿದುಕೊಂಡು ಕಾರ್‌ನಲ್ಲಿ ಕುಳಿತುಕೊಂಡಿರುವ ಚಿತ್ರ ಕೂಡ ವೈರಲ್‌ ಆಗಿದ್ದವು.

ಐಪಿಎಲ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಆಸ್ಪತ್ರೆ ದಾಖಲಾಗಲಿದ್ದಾರೆ ಧೋನಿ, ಮೊಣಕಾಲು ಸರ್ಜರಿ!

ಮಾರ್ಚ್ 31 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಲೀಗ್‌ನ ಮೊದಲ ಪಂದ್ಯದಲ್ಲಿ ಧೋನಿ ಈ ಗಾಯಕ್ಕೆ ಒಳಗಾಗಿದ್ದರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡುವ ಇರಾದೆಯಲ್ಲಿದ್ದ ಧೋನಿ ವೈದ್ಯರ ಸಲಹೆಯನ್ನೂ ಲೆಕ್ಕಿಸದೇ ಮೈದಾನಕ್ಕೆ ಇಳಿದಿದ್ದರು. ಮೈದಾನದಲ್ಲಿಯೂ ಧೋನಿ ಕುಂಟುತ್ತಲೇ ಆಡಿದ ಫೋಟೋ ಹಾಗೂ ವಿಡಿಯೋಗಳು ವೈರಲ್‌ ಆಗಿದ್ದವು. ರನ್‌ ಓಡಲು ಧೋನಿ ಹೆಚ್ಚಿನ ಆದ್ಯತೆಯನ್ನೂ ನೀಡುತ್ತಿರಲಿಲ್ಲ. ಆಟಗಾರರಿಗೂ ಸಹ ತಮ್ಮನ್ನು ಹೆಚ್ಚು ಓಡಿಸಿದೇ ಇರುವಂತೆಯೂ ಧೋನಿ ಹೇಳಿದ್ದರು.
ಧೋನಿಗೆ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಇನ್ನೂ ಕೆಲವು ತಿಂಗಳು ಹಿಡಿಯಲಿದೆ ಎಂದು ವರದಿಯಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಫಿಟ್‌ ಆದಲ್ಲಿ ಮಾತ್ರವೇ ಮುಂದಿನ ಋತುವಿನ ಐಪಿಎಲ್‌ ಆಡುವುದಾಗಿ ಧೋನಿ ಈಗಾಗಲೇ ತಿಳಿಸಿದ್ದಾರೆ.

ಗಿಲ್-ರಿಂಕು: ಐಪಿಎಲ್‌-16ರಲ್ಲಿ ಉದಯಿಸಿದ 11 ನವತಾರೆಯರು!

Latest Videos
Follow Us:
Download App:
  • android
  • ios