ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದ ಮೈಸೂರು ವಾರಿಯರ್ಸ್‌ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಹುಬ್ಬಳ್ಳಿ ಟೈಗರ್ಸ್‌ಮೈಸೂರು ವಾರಿಯರ್ಸ್‌ಗೆ 10 ವಿಕೆಟ್‌ಗಳ ಭರ್ಜರಿ ಜಯಭೇರಿ
ಮೈಸೂರು (ಆ.11): ನಾಯಕ ಕರುಣ್ ನಾಯರ್ ಅಬ್ಬರದ ನೆರವಿನಿಂದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆತಿಥೇಯ ಮೈಸೂರು ವಾರಿಯರ್ಸ್ ತಂಡ 2ನೇ ಗೆಲುವು ಸಾಧಿಸಿದೆ. ಬುಧವಾರ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಮೈಸೂರು ತಂಡ 10 ವಿಕೆಟ್ ಭರ್ಜರಿ ಜಯ ಪಡೆಯಿತು.
ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ 6 ವಿಕೆಟ್‌ಗೆ 140 ರನ್ ಕಲೆ ಹಾಕಿತು. ಲುವ್‌ನಿತ್ ಸಿಸೋಡಿಯಾ 38(23 ಎಸೆತ), ತುಷಾರ್ ಸಿಂಗ್ 36(18 ಎಸೆತ) ರನ್ ಗಳಿಸಿದರು. ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು. ಸುಲಭ ಗುರಿ ಬೆನ್ನತ್ತಿದ ಮೈಸೂರು 15.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಜಯಗಳಿಸಿತು. ಕರುಣ್ 52 ಎಸೆತಗಳಲ್ಲಿ 91 ರನ್ ಸಿಡಿಸಿದರೆ, ನಿಹಾಲ್ ಉಳ್ಳಾಲ್ 48(43 ಎಸೆತ) ರನ್ ಬಾರಿಸಿದರು. ಹುಬ್ಬಳ್ಳಿಗೆ ಇದು ಟೂರ್ನಿಯಲ್ಲಿ 2ನೇ ಸೋಲು. ತಂಡ 3 ಪಂದ್ಯಗಳಲ್ಲಿ 1ರಲ್ಲಿ ಗೆದ್ದು 2 ಅಂಕ ಗಳಿಸಿದೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ವಿರುದ್ಧ ಹುಬ್ಬಳ್ಳಿ ವಿಜೆಡಿ ನಿಯಮದ ಪ್ರಕಾರ 4 ವಿಕೆಟ್ ಗೆಲುವು ಸಾಧಿಸಿತ್ತು. ಬೆಂಗಳೂರು ಮೊದಲು ಬ್ಯಾಟ್ ಮಾಡಿ ನಿಗದಿತ 16 ಓವರಲ್ಲಿ 6 ವಿಕೆಟ್‌ಗೆ 119 ರನ್ ಗಳಿಸಿದರೆ, ಹುಬ್ಬಳ್ಳಿ 15.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ನಾಯಕ ಅಭಿಮನ್ಯು ಮಿಥುನ್ ಕೇವಲ 22 ಎಸೆತದಲ್ಲಿ 51 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
Google CEO ಸುಂದರ್ ಪಿಚೈ, ಮುಕೇಶ್ ಅಂಬಾನಿ ಜತೆ ಕ್ರಿಕೆಟ್ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ
ಸ್ಕೋರ್:
ಹುಬ್ಬಳ್ಳಿ ಟೈಗರ್ಸ್20 ಓವರಲ್ಲಿ 140/6(ಲುವ್‌ನಿತ್ 38, ತುಷಾರ್ 36, ಶ್ರೇಯಸ್ 2-22)
ಮೈಸೂರು ವಾರಿಯರ್ಸ್: 15.5 ಓವರಲ್ಲಿ 141/0(ಕರುಣ್ 91*, ನಿಹಾಲ್ 48*)
ಏಷ್ಯಾಕಪ್‌ಗೂ ಮುನ್ನ ರಾಹುಲ್‌ಗೆ ಫಿಟ್ನೆಸ್ ಟೆಸ್ಟ್?
ನವದೆಹಲಿ: 2022ರ ಐಪಿಎಲ್ ಬಳಿಕ ಗಾಯದಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಕರ್ನಾಟಕದ ಕೆ.ಎಲ್.ರಾಹುಲ್ ಏಷ್ಯಾ ಕಪ್ ಮೂಲಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳುವ ಕಾತರದಲ್ಲಿದ್ದಾರೆ. ಆದರೆ ಅದಕ್ಕೂ ಮುನ್ನ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಬೇಕಿದ್ದು, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಹುಲ್ ಇತ್ತೀಚೆಗಷ್ಟೇ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಳಿಕ ವೆಸ್ಟ್‌ಇಂಡೀಸ್ ಸರಣಿಗೆ ಆಯ್ಕೆಯಾಗಿದ್ದರೂ ಮತ್ತೆ ಗಾಯಗೊಂಡು ಸರಣಿಗೆ ಗೈರಾಗಿದ್ದರು.
