ನವದೆಹಲಿ(ಮೇ.17): ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್ 3.0 ಅಂತ್ಯವಾಗುತ್ತಿದ್ದು, ಇದೀಗ ಕೇಂದ್ರ ಸರ್ಕಾರ ಲಾಕ್‌ಡೌನ್ 4.0 ಹೇರಲಾಗಿದೆ. ಮೇ.18 ರಿಂದ ಮೇ.31ರ ವರೆಗೆ ಲಾಕ್‌ಡೌನ್ 4.0 ಜಾರಿಯಲ್ಲಿರಲಿದೆ. ನೂತನ ಲಾಕ್‌ಡೌನ್ ನಿಯಮದಲ್ಲಿ ಕ್ರೀಡಾ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.

1 ಓವರ್ ಎಂದು ಒಂದು ದಿನ ಬ್ಯಾಟಿಂಗ್; ದ್ರಾವಿಡ್ ಜೊತೆಗಿನ ಜೊತೆಯಾಟ ನೆನಪಿಸಿದ ಲಕ್ಷ್ಮಣ್!.

ಕ್ರೀಡಾಪಟುಗಳ ತರಬೇತಿ, ಕ್ರಿಕೆಟಿಗರ ಅಭ್ಯಾಸ, ನೆಟ್ ಪ್ರಾಕ್ಟೀಸ್‌ಗೆ ಕ್ರೀಡಾಂಗಣಗಳನ್ನು, ಕ್ರೀಡಾ ಕಾಂಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಪ್ರೇಕ್ಷರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರಮುಖವಾಗಿ SAI(ಕ್ರೀಡಾ ಪ್ರಾಧಿಕಾರ)ಅಧೀನದಲ್ಲಿರುವ ಕ್ರೀಡಾ ಕಾಂಪ್ಲೆಕ್ಸ್‌ಗಳಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತದೆ. ಅದರಲ್ಲೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕೆ ಅವಕಾಶ ನೀಡಲಾಗಿದೆ.

ಮೋದಿ ಹೇಳಿದಂತೆ ಮೇ.31ರ ವರೆಗೆ ಲಾಕ್‌ಡೌನ್ ವಿಸ್ತರಣೆ‌: ಏನಿರುತ್ತೆ? ಏನಿರಲ್ಲ?.

ಸಾಯಿ ಸೆಂಟರ್‌ ಬೆಂಗಳೂರು ಹಾಗೂ ಪಟಿಯಾಲದ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗಳು ಕ್ರೀಡಾಪಟುಗಳ ತರಬೇತಿಗಾಗಿ ತೆರೆಯಲಾಗುತ್ತಿದೆ. ಆರಂಭಿಕ ಹಂತದಲ್ಲಿ ಕೇವಲ 2 ಕ್ರೀಡಾ ತರಬೇತಿ ಸೆಂಟರ್ ಹಾಗೂ ಕ್ರೀಡಾ ಕಾಂಪ್ಲೆಕ್ಸ್ ತೆರೆಯಲಾಗುತ್ತಿದೆ. ಕಳೆದ ವಾರ ಕೇಂದ್ರ ಕ್ರೀಡಾ ಮಂತ್ರಿ ಕಿರಣ್ ರಿಜಿಜು ಈ ಕುರಿತು ಸುಳಿವು ನೀಡಿದ್ದರು. ಇದೀಗ ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿರುವ ಲಾಕ್‌ಡೌನ್ 4.0 ಮಾರ್ಗಸೂಚಿಯಲ್ಲಿ ಈ ಕುರಿತು ಹೇಳಲಾಗಿದೆ.