Asianet Suvarna News Asianet Suvarna News

204 ರನ್ ಚೇಸ್ ಮಾಡಿ ದಾಖಲೆ; ಟೀಂ ಇಂಡಿಯಾಗೆ ಯಾರೂ ಇಲ್ಲ ಸರಿಸಾಟಿ!

ನ್ಯೂಜಿಲೆಂಡ್ ಪ್ರವಾಸದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಆಕ್ಲೆಂಡ್‌ನಲ್ಲಿನ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಬೆನ್ನಟ್ಟೋ ಮೂಲಕ ಕೊಹ್ಲಿ ಸೈನ್ಯ ದಾಖಲೆ ಬರೆದಿದೆ. 204ರನ್ ಗುರಿ ಬೆನ್ನಟ್ಟಿ ಟೀಂ ಇಂಡಿಯಾ ಬರೆದ ದಾಖಲೆ ವಿವರ ಇಲ್ಲಿದೆ. 
 

List of teams with most 200 plus run chase in t20i
Author
Bengaluru, First Published Jan 24, 2020, 5:33 PM IST
  • Facebook
  • Twitter
  • Whatsapp

ಆಕ್ಲೆಂಡ್(ಜ.24): ವರ್ಷದ ಮೊದಲ ವಿದೇಶಿ ಪ್ರವಾಸದಲ್ಲಿ ಭಾರತ ಶುಭಾರಂಭ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ರೋಚಕ ಗೆಲುವು ಸಾಧಿಸಿತು. 204ರನ್ ಚೇಸ್ ಮಾಡಿದ ಭಾರತ  ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವು ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಗೆಲುವಿನೊಂದಿಗೆ ಭಾರತ ಹಲವು ದಾಖಲೆ ಬರೆದಿದೆ.

ಇದನ್ನೂ ಓದಿ: ಇಂಡೋ-ಕಿವೀಸ್ ಟಿ20: ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಬಾರಿ  200 ರನ್ ಟಾರ್ಗೆಟ್ ಚೇಸ್ ಮಾಡಿದ ತಂಡಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಭಾರತ ಟಿ20 ಕ್ರಿಕೆಟ್‌ನಲ್ಲಿ 4 ಬಾರಿ 200 ರನ್ ಟಾರ್ಗೆಟ್ ಚೇಸ್ ಮಾಡಿದೆ. ಇನ್ನು 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 2 ಬಾರಿ 200 ರನ್ ಚೇಸ್ ಮಾಡಿದೆ.

ಇದನ್ನೂ ಓದಿ: ಟೀಂ ಇಂಡಿಯಾದ 27 ಆಟಗಾರರಲ್ಲಿ ಯಾರಿಗೆಷ್ಟು ಸಂಬಳ..?

ಗರಿಷ್ಠ ಬಾರಿ 200 ರನ್ ಟಾರ್ಗೆಟ್ ಚೇಸ್ ಮಾಡಿದ ತಂಡ(t20)
ಭಾರತ (4)
ಆಸ್ಟ್ರೇಲಿಯಾ(2)
ಸೌತ್ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ, ಖತಾರ್(1)

ಟಿ20 ಕ್ರಿಕೆಟ್‌ನಲ್ಲಿ ಭಾರತದ ಗರಿಷ್ಠ ರನ್ ಚೇಸ್
208 v WI (ಹೈದರಾಬಾದ್) 2019
207 v SL (ಮೊಹಾಲಿ) 2009
204 v NZ (ಆಕ್ಲೆಂಡ್) 2020 *
202 v Aus (ರಾಜ್‌ಕೋಟ್) 2013
199 v Eng (ಬ್ರಿಸ್ಟೂಲ್) 2018
198 v Aus (ಸಿಡ್ನಿ) 2016
 

Follow Us:
Download App:
  • android
  • ios