ಟೀಂ ಇಂಡಿಯಾದ 27 ಆಟಗಾರರಲ್ಲಿ ಯಾರಿಗೆಷ್ಟು ಸಂಬಳ..?

First Published Jan 24, 2020, 5:13 PM IST

ಕೆಲದಿನಗಳ ಹಿಂದಷ್ಟೇ ಬಿಸಿಸಿಐ ಕೇಂದ್ರಿಯ ಗುತ್ತಿಗೆ ಪ್ರಕಟಿಸಲಾಗಿದ್ದು, ಈ ಬಾರಿ 27 ಆಟಗಾರರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಕೇಂದ್ರ ಗುತ್ತಿಗೆಯನ್ನು A+,A,B ಹಾಗೂ C ವಿಭಾಗಳೆಂದು ಗುರುತಿಸಲಾಗಿದೆ.

ಬಿಸಿಸಿಐ ಗುತ್ತಿಗೆ ಅವಧಿಯು ಅಕ್ಟೋಬರ್ 2019ರಿಂದ ಸೆಪ್ಟೆಂಬರ್ 2020ರವರೆಗೆ ಇರಲಿದೆ. A+ ಗುತ್ತಿಗೆ ಹೊಂದಿದವರು 7 ಕೋಟಿ ರುಪಾಯಿ ವಾರ್ಷಿಕ ಸಂಬಳ ಪಡೆಯಲಿದ್ದಾರೆ. ಇನ್ನು A ಗ್ರೇಡ್ ಹೊಂದಿರುವವರು 5 ಕೋಟಿ ರುಪಾಯಿ, B ಗ್ರೇಡ್‌ಗೆ 3 ಕೋಟಿ ಹಾಗೂ C ಗ್ರೇಡ್ ಹೊಂದಿರುವವರು ಒಂದು ಕೋಟಿ ರುಪಾಯಿ ಸಂಬಳವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ. ಇನ್ನು ಧೋನಿ ಈ ಬಾರಿಯ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದಾರೆ. ಕಳೆದ ಬಾರಿ ಧೋನಿ  'A'ಗ್ರೇಡ್ ಪಡೆದಿದ್ದರು.