Asianet Suvarna News Asianet Suvarna News

Ajinkya Rahane Birthday: ರಹಾನೆ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಸೆಹ್ವಾಗ್..!

* 34ನೇ ವಸಂತಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ

* ರಹಾನೆ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಸೆಹ್ವಾಗ್

* ಅಜಿಂಕ್ಯ ರಹಾನೆ ಓರ್ವ ಅಂಡರೇಟೆಡ್ ಕ್ರಿಕೆಟಿಗ ಎಂದು ಬಣ್ಣಿಸಿದ ಸೆಹ್ವಾಗ್

Legendary Cricketer Virender Sehwag Leads Birthday Wishes For Ajinkya Rahane kvn
Author
Bengaluru, First Published Jun 6, 2022, 1:50 PM IST

ಮುಂಬೈ(ಜೂ.06): ಟೀಂ ಅನುಭವಿ ಬ್ಯಾಟರ್‌ ಅಜಿಂಕ್ಯ ರಹಾನೆ ಸೋಮವಾರ(ಜೂ.06)ರಂದು ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂಬೈ ಮೂಲದ ಬಲಗೈ ಬ್ಯಾಟರ್‌ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಟೀಂ ಪ್ಲೇಯರ್ ಆಗಿ ಗುರುತಿಸಿಕೊಂಡಿರುವ ಅಜಿಂಕ್ಯ ರಹಾನೆ (Ajinkya Rahane), ಭಾರತ ಟೆಸ್ಟ್ ತಂಡದ ನಾಯಕರಾಗಿಯೂ ಸೈ ಎನಿಸಿಕೊಂಡಿದ್ದರು. ಕಳೆದ ವರ್ಷ ಟೀಂ ಇಂಡಿಯಾ (Team India), ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಅಡಿಲೇಡ್‌ ಟೆಸ್ಟ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಅಗಿ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ವೈಯುಕ್ತಿಕ ಕಾರಣ ನೀಡಿ ನಾಯಕರಾಗಿದ್ದ ವಿರಾಟ್ ಕೊಹ್ಲಿ ತವರಿಗೆ ವಾಪಾಸ್ಸಾಗಿದ್ದರು. ಇದಾದ ಬಳಿಕ ನಾಯಕರಾಗಿ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅಜಿಂಕ್ಯ ರಹಾನೆ 2-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು

ಅಡಿಲೇಡ್ ಟೆಸ್ಟ್  ಸೋಲಿನ ಬಳಿಕ ಟೀಂ ಇಂಡಿಯಾ ಮೈಕೊಡವಿಕೊಂಡು ಮೆಲ್ಬೊರ್ನ್‌ ಟೆಸ್ಟ್‌ನಲ್ಲಿ ಕಣಕ್ಕಿಳಿದಿತ್ತು. ಮೆಲ್ಬೊರ್ನ್‌ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಶತಕ ಬಾರಿಸುವ ಮೂಲಕ ನಾಯಕನ ಆಟವಾಡಿದ್ದರು. ಇದಾದ ಬಳಿಕ ಇನ್ನುಳಿದ 3 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡು ಚಾರಿತ್ರ್ಯಿಕ ಸಾಧನೆ ಮಾಡಿತ್ತು. ಇದೀಗ ಅಜಿಂಕ್ಯ ರಹಾನೆ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ವಿನೂತನವಾಗಿ ಶುಭಕೋರಿದ್ದಾರೆ.

ಅಂಡರೇಟೆಡ್ ಕ್ರಿಕೆಟಿಗ, ವಿದೇಶಿ ನೆಲದಲ್ಲಿ ಭಾರತಕ್ಕೆ ಅತ್ಯಂತ ಪ್ರಖ್ಯಾತ ಟೆಸ್ಟ್ ಸರಣಿ ಗೆದ್ದುಕೊಟ್ಟ ಆಟಗಾರ ಅಜಿಂಕ್ಯ ರಹಾನೆಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಗೆಲ್ಲುವ ಶಕ್ತಿ ನೀಡಲಿ ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಅಜಿಂಕ್ಯ ರಹಾನೆ 2011ರಲ್ಲಿ ಭಾರತ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ಇಂಗ್ಲೆಂಡ್ ವಿರುದ್ದ ಪಾದಾರ್ಪಣೆ ಮಾಡಿದ್ದರು. ಇನ್ನು 2013ರಲ್ಲಿ ಡೆಲ್ಲಿಯಲ್ಲಿ ಆಸ್ಟ್ರೇಲಿಯಾ ಎದುರು ಅಜಿಂಕ್ಯ ರಹಾನೆ ಮೊದಲ ಟೆಸ್ಟ್‌ ಪಂದ್ಯವನ್ನಾಡಿದ್ದರು. ಇದುವರೆಗೂ ಅಜಿಂಕ್ಯ ರಹಾನೆ ಭಾರತ ಪರ 82 ಟೆಸ್ಟ್, 90 ಏಕದಿನ ಹಾಗೂ 20 ಪಂದ್ಯಗಳನ್ನಾಡಿದ್ದು, ಮೂರು ಮಾದರಿಯ ಕ್ರಿಕೆಟ್‌ನಿಂದ ಒಟ್ಟಾರೆ 8,268 ರನ್ ಬಾರಿಸಿದ್ದಾರೆ.

IPL Slapgate ನಾನು ತಪ್ಪು ಮಾಡಿದೆ, ಶ್ರೀಶಾಂತ್ ಕಪಾಳಮೊಕ್ಷ ಕುರಿತು ಮೊದಲ ಬಾರಿಗೆ ಹರ್ಭಜನ್ ಮಾತು!

ಅಜಿಂಕ್ಯ ರಹಾನೆ ಭಾರತ ಪರ ಇದೇ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಅಜಿಂಕ್ಯ ರಹಾನೆ ಅವರನ್ನು ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಿಂದ ಕೈಬಿಡಲಾಗಿತ್ತು. ರಣಜಿ ಟೂರ್ನಿಯಲ್ಲಿ ಮುಂಬೈ ಪರ ಕಣಕ್ಕಿಳಿಯುವ ರಹಾನೆ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ದುರಾದೃಷ್ಟವಶಾತ್ ಐಪಿಎಲ್ ಟೂರ್ನಿಯ ಮಧ್ಯದಲ್ಲೇ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು.

ವಿರೇಂದ್ರ ಸೆಹ್ವಾಗ್ ಮಾತ್ರವಲ್ಲದೇ ಟೀಂ ಇಂಡಿಯಾದ ಹಿರಿ-ಕಿರಿಯ ಆಟಗಾರರು ಸಹಾ ಮುಂಬೈ ಮೂಲದ ಅಜಿಂಕ್ಯ ರಹಾನೆಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

Follow Us:
Download App:
  • android
  • ios