Asianet Suvarna News Asianet Suvarna News

ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಕ್ರಿಕೆಟಿಗ ಸಚಿನ್ ತೆಂಡುಲ್ಕರ್

* ರಕ್ತದಾನ ಮಾಡಿ ಜಾಗೃತಿ ಮೂಡಿಸಿದ ಸಚಿನ್ ತೆಂಡುಲ್ಕರ್

* ಸಚಿನ್ ತೆಂಡುಲ್ಕರ್ ಭಾರತದ ದಿಗ್ಗಜ ಕ್ರಿಕೆಟಿಗ

* ನಮಗೆಲ್ಲ ಜೀವ ಉಳಿಸುವ ಶಕ್ತಿ ಇದೆ. ಅದನ್ನು ಬಳಸೋಣ ಎಂದು ಕರೆ ಕೊಟ್ಟ ಸಚಿನ್

Legendary Cricketer Sachin Tendulkar donates blood kvn
Author
Mumbai, First Published Jun 15, 2021, 6:56 PM IST

ಮುಂಬೈ(ಜೂ.15): ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ.

ಇದೇ ವೇಳೆ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು, ಅದರಲ್ಲೂ ಕೋವಿಡ್ 19 ಪಿಡುಗಿನ ಸಂದರ್ಭದಲ್ಲಂತೂ ಎಲ್ಲರೂ ದಯವಿಟ್ಟು ರಕ್ತದಾನ ಮಾಡಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮನವಿ ಮಾಡಿದ್ದಾರೆ. ‘ನಮಗೆಲ್ಲ ಜೀವ ಉಳಿಸುವ ಶಕ್ತಿ ಇದೆ. ಅದನ್ನು ಬಳಸೋಣ’ ಎಂದು ರಕ್ತದಾನ ಮಾಡಿದ ಬಳಿಕ ಕರೆ ನೀಡಿದರು.

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

ಮುಂಬೈನಲ್ಲಿ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿದ ಸಚಿನ್ ತೆಂಡುಲ್ಕರ್, ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ರಕ್ತದ ಲಭ್ಯತೆ ಸೇರಿದಂತೆ ರಕ್ತದಾನ ಮಹತ್ವವನ್ನು ಸಚಿನ್‌ ತಿಳಿಹೇಳಿದರು. ಇತ್ತೀಚೆಗಷ್ಟೇ ತಮ್ಮ ಸಂಬಂಧಿಕರೊಬ್ಬರಿಗೆ ರಕ್ತದ ಅಗತ್ಯವಿತ್ತು ಎಂದು ತಮ್ಮ ವಿಡಿಯೋ ಮೂಲಕ ರಕ್ತದಾನದ ಜಾಗೃತಿ ಮೂಡಿಸಿದ್ದಾರೆ.

ಭಾರತದಲ್ಲಿ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡು ಸಚಿನ್ ತೆಂಡುಲ್ಕರ್ ಟೀಂ ಇಂಡಿಯಾ ಪರ 200 ಟೆಸ್ಟ್ ಹಾಗೂ 463 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 15,921 ಹಾಗೂ 18,426 ರನ್‌ ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನ್ನುವ ಅಪರೂಪದ ದಾಖಲೆಗೂ ಸಚಿನ್ ಭಾಜನಾರಗಿದ್ದಾರೆ. ಇದಷ್ಟೇ ಅಲ್ಲದೇ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಾಗೂ ಏಕೈಕ ಕ್ರೀಡಾಪಟು ಎನ್ನುವ ಹಿರಿಮೆಯೂ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ.
 

Follow Us:
Download App:
  • android
  • ios