ನವದೆಹಲಿ[ಅ.08]: ಭಾರತ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟ್ಸ್ ಮನ್ ಹಾಗೂ ವಾಯು ಸೇನೆಯ ಗ್ರೂಫ್ ಕ್ಯಾಪ್ಟನ್ ಸಚಿನ್ ತೆಂಡುಲ್ಕರ್, 87ನೇ ವಾಯುಸೇನಾ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ. 

ವಾಯುಸೇನಾ ದಿನ: ಬನ್ನಿ ನಾವೆಲ್ಲರೂ ಧೀರ ಯೋಧರ ಸ್ಮರಿಸೋಣ

ಘಾಜಿಯಾಬಾದ್’ನ ಹಿಂಡೊನ್ ಏರ್ ಫೋರ್ಸ್ ಸ್ಟೇಷನ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಬದೌರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸಚಿನ್ ತೆಂಡುಲ್ಕರ್ ಪೆರೇಡ್ ನಡೆಸುವ ಮೂಲಕ ಗಮನ ಸೆಳೆದರು. 

ಹಿಂಡೊನ್ ಏರ್ ಬೇಸ್’ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಿಗ್ ಬಿಷೋನ್ ಏರ್’ಕ್ರಾಫ್ಟ್’ನಲ್ಲಿ ಹಾರಾಟ ನಡೆಸಿದರು. ಇದೇ ವರ್ಷದ ಫೆಬ್ರವರಿ 26ರಂದು ಬಾಲಾಕೋಟ್ ಮೇಲೆ ನಡೆದ ಏರ್ ಸ್ಟ್ರೈಕ್’ನಲ್ಲಿ ಅಭಿನಂದನ್ ಪಾಲ್ಗೊಂಡಿದ್ದರು.

ವಾಯು ಸೇನಾ ದಿನಾಚರಣೆಗೆ ಎಲ್ಲರಿಗೂ ಶುಭ ಕೋರುತ್ತೇನೆ. ದೇಶವನ್ನು ಸುರಕ್ಷಿತವಾಗಿ ಕಾಪಾಡುತ್ತಿರುವ ಪ್ರತಿಯೊಬ್ಬ ಸೈನಿಕನಿಗೂ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಸ್ಥ ಹಾಗೂ ಸ್ವಚ್ಚ ಭಾರತ್ ಯೋಜನೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಕಂಡು ಭಾರತ ಎಂದೆಂದಿಗೂ ಆರೋಗ್ಯಪೂರ್ಣ, ಸ್ವಚ್ಚ ಹಾಗೂ ಸುರಕ್ಷತೆಯಿಂದ ಕೂಡಿರಲಿ ಎಂದು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 

ಸಚಿನ್ ತೆಂಡುಲ್ಕರ್’ಗೆ ಪತ್ನಿ ಅಂಜಲಿ ತೆಂಡುಲ್ಕರ್ ಸಾಥ್ ನೀಡಿದ್ದರು. ಕಳೆದ ವರ್ಷವೂ 87ನೇ ವಾಯುಸೇನಾ ದಿನಾಚರಣೆಯಲ್ಲಿ ಸಚಿನ್ ತೆಂಡುಲ್ಕರ್ ಪಾಲ್ಗೊಂಡಿದ್ದರು. 

ವಾಯುಸೇನಾ ದಿನಾಚರಣೆ: ಪ್ರದರ್ಶನದಲ್ಲಿ ಯುದ್ಧ ವಿಮಾನಗಳೇ ಆಕರ್ಷಣೆ!

ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್’ಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಸಚಿನ್ ತೆಂಡುಲ್ಕರ್ 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಹಲವಾರು ಕ್ರಿಕೆಟ್ ದಾಖಲೆಗಳ ಒಡೆಯ ಎನಿಸಿರುವ ಸಚಿನ್ 200 ಟೆಸ್ಟ್ ಪಂದ್ಯಗಳಲ್ಲಿ 15,921 ಹಾಗೂ 463 ಟೆಸ್ಟ್ ಪಂದ್ಯಗಳಲ್ಲಿ 18,426 ರನ್ ಬಾರಿಸಿದ್ದಾರೆ. 

ಸಚಿನ್ ತೆಂಡುಲ್ಕರ್ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ತಮ್ಮ ಕಟ್ಟ ಕಡೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್’ಮನ್ ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 100 ಶತಕ ಸಿಡಿಸಿದ ಏಕೈಕ ಬ್ಯಾಟ್ಸ್’ಮನ್ ಎನ್ನುವ ಗೌರವಕ್ಕೂ ಭಾಜನರಾಗಿದ್ದಾರೆ. 2013ರಲ್ಲಿ ಭಾರತ ರತ್ನ ಗೌರವಕ್ಕೂ ಸಚಿನ್ ಪಾತ್ರರಾಗಿದ್ದಾರು. ಈ ಮೂಲಕ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು.