Asianet Suvarna News Asianet Suvarna News

ಕ್ರಿಕೆಟ್‌ ಕಾಮೆಂಟರಿಗೆ ಹೋಲ್ಡಿಂಗ್‌ ವಿದಾಯ; ಶುಭ ಕೋರಿದ ತೆಂಡುಲ್ಕರ್..!

* ಕ್ರಿಕೆಟ್‌ ವೀಕ್ಷಕ ವಿವರಣೆಗೆ ನಿವೃತ್ತಿ ಘೋಷಿಸಿದ ದಿಗ್ಗಜ ಬೌಲರ್ ಮೈಕಲ್‌ ಹೋಲ್ಡಿಂಗ್‌

* 20 ವರ್ಷಗಳಿಂದ ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದ ಹೋಲ್ಡಿಂಗ್

* 1975ರಿಂದ 1987ರ ನಡುವೆ ವಿಂಡೀಸ್‌ ಪರ 60 ಟೆಸ್ಟ್‌, 120 ಏಕದಿನ ಪಂದ್ಯಗಳನ್ನು ಆಡಿದ್ದಾರೆ

Legendary Cricketer Michael Holding Announces Retirement From Commentary kvn
Author
London, First Published Sep 17, 2021, 9:02 AM IST
  • Facebook
  • Twitter
  • Whatsapp

ನವದೆಹಲಿ(ಸೆ.17): ವೆಸ್ಟ್‌ ಇಂಡೀಸ್‌ನ ಮಾಜಿ ದಿಗ್ಗಜ ಕ್ರಿಕೆಟಿಗ ಮೈಕಲ್‌ ಹೋಲ್ಡಿಂಗ್‌ ಅವರು ಕ್ರಿಕೆಟ್‌ ವೀಕ್ಷಕ ವಿವರಣೆಗೆ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 20 ವರ್ಷಗಳಿಂದ ಅವರು ಸ್ಕೈಸ್ಪೋರ್ಟ್ಸ್‌ ಕಾಮೆಂಟರಿ ಪ್ಯಾನೆಲ್‌ನ ಸದಸ್ಯರಾಗಿದ್ದರು.

66 ವರ್ಷದ ಹೋಲ್ಡಿಂಗ್‌ ಅವರು 1988ರಲ್ಲಿ ವೀಕ್ಷಕ ವಿವರಣೆ ಆರಂಭಿಸಿದ್ದರು. ದೂರದೃಷ್ಟಿ ಹಾಗೂ ಒಳನೋಟಗಳ ಕಾಮೆಂಟರಿ ಮೂಲಕವೇ ಅವರು ಪ್ರಸಿದ್ಧಿ ಪಡೆದಿದ್ದರು. ಇತ್ತೀಚಿಗೆ ನಡೆದ ಭಾರತ-ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಯಲ್ಲೂ ವೀಕ್ಷಕ ವಿವರಣೆ ನೀಡಿದ್ದರು. ಇದು ಅವರ ವೃತ್ತಿಜೀವನದ ಕೊನೆಯ ವೀಕ್ಷಕ ವಿವರಣೆ ಆಗಿತ್ತು.

1975ರಿಂದ 1987ರ ನಡುವೆ ಅವರು ವಿಂಡೀಸ್‌ ಪರ 60 ಟೆಸ್ಟ್‌, 120 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದ್ಭುತ ಕ್ರಿಕೆಟ್‌ ಬದುಕಿನ ಬಳಿಕ ವೀಕ್ಷಕ ವಿವರಣೆಗಾರರಾಗಿ ಬದಲಾದ ಅವರು ನೇರ, ನಿಷ್ಠುರ ಕಾಮೆಂಟರಿಗಳ ಮೂಲಕವೇ ಕ್ರಿಕೆಟ್‌ ಅಭಿಮಾನಗಳ ನಡುವೆ ಖ್ಯಾತಿ ಗಳಿಸಿದ್ದರು.

ವಿಶ್ವಕಪ್ ಬಳಿಕ ನಾಯಕತ್ವಕ್ಕೆ ಗುಡ್ ಬೈ.. ವಿಚಾರ ತಿಳಿಸಿದ ವಿರಾಟ್ ಕೊಹ್ಲಿ!

ಕಾಮೆಂಟರಿ ವೃತ್ತಿಜೀವನಕ್ಕೆ ವಿದಾಯ ಹೇಳಿದ ಹೋಲ್ಡಿಂಗ್ಸ್‌ ಅವರಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಮೈಕೆಲ್ ವಾನ್‌, ಇಯಾನ್‌ ಬಿಷಪ್ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. ನಿಮ್ಮ ಧ್ವನಿಯನ್ನು ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಮಿಸ್‌ ಮಾಡಿಕೊಳ್ಳಲಿದ್ದಾರೆ. ನಿಮ್ಮ ವಸ್ತುನಿಷ್ಠ ಹಾಗೂ ಸಮತೋಲಿತ ಕ್ರಿಕೆಟ್‌ ವಿಶ್ಲೇಷಣೆ ನನಗೆ ತುಂಬಾ ಇಷ್ಟವಾಗುತ್ತಿತ್ತು ಎಂದು ತೆಂಡುಲ್ಕರ್ ಟ್ವೀಟ್‌ ಮಾಡಿದ್ದಾರೆ.

ಹೋಲ್ಡಿಂಗ್‌ ಅವರೊಬ್ಬ ದಿಗ್ಗಜ ಬೌಲರ್. ಕಾಮೆಂಟೇಟರ್, ಜತೆಗಾರ. ಅದೇ ರೀತಿ ಅತ್ಯುತ್ತಮ ವೀಕ್ಷಕ ವಿವರಣೆಗಾರ. ಅವರನ್ನು ಕಾಮೆಂಟರಿ ಬಾಕ್ಸ್‌ನಲ್ಲಿ ನಾವೆಲ್ಲಾ ಮಿಸ್‌ ಮಾಡಿಕೊಳ್ಳಲಿದ್ದೇವೆ. ಅವರ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಇಂಗ್ಲೆಂಡ್ ಮಾಜಿ ನಾಯಕ ವಾನ್ ಟ್ವೀಟ್ ಮಾಡಿದ್ದಾರೆ.
 

Follow Us:
Download App:
  • android
  • ios