ಬೆಂಗಳೂರು(ಮಾ.25):  ಭಾರತೀಯರಿಗೆ ಹೊಸ ವರ್ಷವಾಗಿರುವ ಯುಗಾದಿ ಅತೀ ದೊಡ್ಡ ಹಬ್ಬ. ಕುಟುಂಬ ಸದಸ್ಯರೆಲ್ಲಾ ಸೇರಿ ಬೇವು ಬೆಲ್ಲ ಸವಿದು ಹೊಸ ವರ್ಷವನ್ನು ಬರಮಾಡಿಕೊಳ್ಳವ ಈ ಹಬ್ಬ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ವರ್ಷ ಯುಗಾದಿ ಹಬ್ಬಕ್ಕೆ ಕೊರೋನಾ ವೈರಸ್ ಅಡ್ಡ ಬಂದಿದೆ. ಭಾರತದಲ್ಲಿ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ 21 ದಿನ ಸಂಪೂರ್ಣ ಭಾರತ ಲಾಕ್‌ಡೌನ್ ಮಾಡಿದ್ದಾರೆ. ಯಾರೂ ಮನೆಯಿಂದ ಹೊರಬರದಂತೆ ಮನವಿ ಮಾಡಿದ್ದಾರೆ. ಇದರ ನಡುವೆ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಯುಗಾದಿ ಹಬ್ಬಕ್ಕೆ ಕನ್ನಡದಲ್ಲಿ ಟ್ವೀಟ್  ಮಾಡಿ ಶುಭಕೋರಿದ್ದಾರೆ.

ಮಂಕಡ್ ರನೌಟ್ ಮೂಲಕ ಅಭಿಮಾನಿಗಳಿಗೆ ಲಾಕ್‌‌ಡೌನ್‌ ಎಚ್ಚರಿಕೆ ನೀಡಿದ ಅಶ್ವಿನ್!

ಎಲ್ಲರೂ ಇಂದು ಫೋನ್ ಮೂಲಕ ಕುಟುಂಬ ಸದಸ್ಯರಿಗೆ ಶುಭಕೋರುತ್ತಿದ್ದಾರೆ. ಕಾರಣ ಯಾರೂ ಮನೆಯಿಂದ ಹೊರಬರುವಂತಿಲ್ಲ. ಆದೇಶ ದಿಕ್ಕರಿಸಿ ಹೊರಬರುತ್ತಿರುವ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಅನಿಲ್ ಕುಂಬ್ಳೆ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ದಯವಿಟ್ಟು ಲಾಕ್ ಡೌನನ್ನು ಸಂಪೂರ್ಣವಾಗಿ ಪಾಲಿಸಿ ಸುರಕ್ಷಿತವಾಗಿರಿ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. 

 

ಲಾಕ್‌ಡೌನ್ ಆದೇಶ  ಧಿಕ್ಕರಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಲಾಕ್‌ಡೌನ್ ಆದೇಶಕ್ಕಿಂತ ಮೊದಲೇ ಕರ್ನಾಟಕದಲ್ಲಿ ಮಾರ್ಚ್ 31ರ ವರೆಗೆ ಲಾಕ್ ಡೌನ್ ಆದೇಶ ನೀಡಲಾಗಿತ್ತು. ಆದರೆ ಹೆಚ್ಚಿನವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನರ ನಿರ್ಲಕ್ಷ್ಯದಿಂದ ಇದೀಗ ಸೋಂಕಿತರ ಸಂಖ್ಯೆ 42ಕ್ಕೇರಿಕೆಯಾಗಿದೆ. ಇನ್ನು ಭಾರತದಲ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ.