ಮಹಾರಾಜ ಟ್ರೋಫಿ ಟಿ20 ಟೂರ್ನಿ ವೇಳಾಪಟ್ಟಿ ಪ್ರಕಟ; ಬೆಂಗ್ಳೂರು-ಗುಲ್ಬರ್ಗಾ ನಡುವೆ ಉದ್ಘಾಟನಾ ಪಂದ್ಯ

ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಆಗಸ್ಟ್13ರಂದು ಚಾಲನೆ
ಈ ಬಾರಿ 6 ತಂಡಗಳು ಪಾಲ್ಗೊಳ್ಳಲಿದ್ದು, ಲೀಗ್‌ ಹಂತದಲ್ಲಿ ಪ್ರತಿ ತಂಡಗಳು ತಲಾ 2 ಬಾರಿ ಮುಖಾಮುಖಿ
ಎಲ್ಲಾ ಪಂದ್ಯಗಳಿಗೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ 

KSCA Maharaja T20 Trophy 2023 start date announced kvn

ಬೆಂಗಳೂರು(ಆ.03): ಮುಂಬರುವ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಆ.13ರಂದು ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಲ್ಬರ್ಗಾ ಮಿಸ್ಟಿಕ್ಸ್‌ ಹಾಗೂ ಕಳೆದ ಬಾರಿ ರನ್ನರ್‌-ಅಪ್‌ ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಟೂರ್ನಿಯಲ್ಲಿ ಈ ಬಾರಿ 6 ತಂಡಗಳು ಪಾಲ್ಗೊಳ್ಳಲಿದ್ದು, ಲೀಗ್‌ ಹಂತದಲ್ಲಿ ಪ್ರತಿ ತಂಡಗಳು ತಲಾ 2 ಬಾರಿ ಮುಖಾಮುಖಿಯಾಗಲಿವೆ. ಮೊದಲ ದಿನ 2ನೇ ಪಂದ್ಯದಲ್ಲಿ ಹುಬ್ಬಳ್ಳಿ ಹಾಗೂ ಮೈಸೂರು ತಂಡಗಳು ಸೆಣಸಾಡಲಿವೆ. ಹೊಸ ತಂಡಗಳಾದ ಮಂಗಳೂರು ಡ್ರ್ಯಾಗನ್ಸ್‌ ಹಾಗೂ ಶಿವಮೊಗ್ಗ ಲಯನ್ಸ್‌ ಆಗಸ್ಟ್ 14ರಂದು ಅಭಿಯಾನ ಆರಂಭಿಸಲಿವೆ.

ಎಲ್ಲಾ ಪಂದ್ಯಗಳಿಗೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಪ್ರತಿ ದಿನ 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಮಧ್ಯಾಹ್ನ 1ಕ್ಕೆ, 2ನೇ ಪಂದ್ಯ ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ. ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಆ.28ರಂದು ಸೆಮೀಸ್‌ ಪಂದ್ಯಗಳು ನಡೆಯಲಿದ್ದು, ಫೈನಲ್‌ ಪಂದ್ಯ ಆ.29ಕ್ಕೆ ನಿಗದಿಯಾಗಿದೆ. ಪಂದ್ಯಗಳು ಸ್ಟಾರ್‌ಸ್ಪೋರ್ಟ್ಸ್‌ 2, ಸ್ಟಾರ್‌ಸ್ಪೋರ್ಟ್ಸ್‌ ಕನ್ನಡ ಹಾಗೂ ಫ್ಯಾನ್‌ಕೋಡ್‌ ಆ್ಯಪ್‌ನಲ್ಲಿ ನೇರಪ್ರಸಾರಗೊಳ್ಳಲಿವೆ.

Ind vs WI: ವಿಂಡೀಸ್‌ ಟಿ20 ಸರಣಿಗೆ ಟೀಂ ಇಂಡಿಯಾ ಸನ್ನದ್ಧ!

ಇಂದು ದಕ್ಷಿಣ-ಪೂರ್ವ ಫೈನಲ್‌

ಪುದುಚೇರಿ: ದೇವಧರ್‌ ಟ್ರೋಫಿ ಲಿಸ್ಟ್‌ ‘ಎ’ ಟೂರ್ನಿಯ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, ಗುರುವಾರ ದಕ್ಷಿಣ ವಲಯ ಹಾಗೂ ಪೂರ್ವ ವಲಯ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇತ್ತೀಚೆಗಷ್ಟೇ ದುಲೀಪ್‌ ಟ್ರೋಫಿ ಚಾಂಪಿಯನ್‌ ಆಗಿದ್ದ ಪಶ್ಚಿಮ ತಂಡ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಮಯಾಂಕ್ ಅಗರ್‌ವಾಲ್‌ ನಾಯಕತ್ವದ ಪಶ್ಚಿಮ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ತಂಡ ಈವರೆಗೆ 8 ಬಾರಿ ಚಾಂಪಿಯನ್‌ ಆಗಿದ್ದು, ಕೊನೆ ಬಾರಿ 2001-02ರಲ್ಲಿ ಪ್ರಶಸ್ತಿ ಗೆದ್ದಿತ್ತು. 2 ದಶಕಗಳ ಬಳಿಕ ಮತ್ತೆ ಚಾಂಪಿಯನ್‌ ಎನಿಸಿಕೊಳ್ಳಲು ತಂಡ ಕಾತರಿಸುತ್ತಿದೆ. ಮಯಾಂಕ್‌, ರೋಹನ್‌ ಕುನ್ನುಮ್ಮಾಲ್‌, ಸಾಯಿ ಸುದರ್ಶನ್‌ ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದು, ಬೌಲಿಂಗ್‌ ವಿಭಾಗ ಕೂಡಾ ಬಲಿಷ್ಠವಾಗಿದೆ.

World Cup 2023: ಅಕ್ಟೋಬರ್ 15ರ ಬದಲು ಈ ಡೇಟ್‌ಗೆ ಭಾರತ ಎದುರು ಆಡಲು ಒಪ್ಪಿಕೊಂಡ ಪಾಕಿಸ್ತಾನ..!

ಮತ್ತೊಂದೆಡೆ 5 ರಲ್ಲಿ 4 ಪಂದ್ಯ ಗೆದ್ದು ಫೈನಲ್‌ಗೇರಿರುವ ಪೂರ್ವ ತಂಡ 6 ಟ್ರೋಫಿ ಮೇಲೆ ಕಣ್ಣಿಟ್ಟಿದೆ. 2014-15ರಲ್ಲಿ ತಂಡ ಕೊನೆ ಬಾರಿ ಚಾಂಪಿಯನ್‌ ಆಗಿತ್ತು. ರಿಯಾನ್‌ ಪರಾಗ್‌ ಅಭೂವಪೂರ್ವ ಲಯದಲ್ಲಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಬಿಸಿಸಿಐ.ಟಿವಿ

ಮಹಿಳಾ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಬಿಸಿಸಿಐ ಬುಧವಾರ ಅರ್ಜಿ ಆಹ್ವಾನಿಸಿದೆ. ಸದ್ಯ ಭಾರತ ತಂಡಕ್ಕೆ ಕಳೆದ ಡಿಸೆಂಬರ್‌ನಿಂದ ಖಾಯಂ ಮುಖ್ಯ ಕೋಚ್‌ ಇಲ್ಲ. ಇದರ ಹೊರತಾಗಿಗೂ ಬಿಸಿಸಿಐ ಬೌಲಿಂಗ್ ಹಾಗೂ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಮಾತ್ರ ಸದ್ಯ ಅರ್ಜಿ ಆಹ್ವಾನಿಸಿದೆ. 2 ವರ್ಷದ ಅವಧಿಗೆ ಕೋಚ್‌ಗಳ ನೇಮಕ ಮಾಡಲಿದ್ದು, ಅರ್ಜಿ ಸಲ್ಲಿಕೆಗೆ ಆ.10ರ ಗಡುವು ವಿಧಿಸಿದೆ.

Ashes 2023: ಇಂಗ್ಲೆಂಡ್‌ನ 19, ಆಸೀಸ್‌ ತಂಡದ 10 ಅಂಕ ಕಡಿತ!

ಲಂಡನ್‌: ಆಸ್ಟ್ರೇಲಿಯಾ ವಿರುದ್ಧದ ತವರಿನ ಆ್ಯಷಸ್‌ ಸರಣಿಯಲ್ಲಿ 2-2 ಡ್ರಾಗೆ ತೃಪ್ತಿಪಟ್ಟುಕೊಂಡ ಇಂಗ್ಲೆಂಡ್‌, ಸರಣಿಯಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕಾಗಿ 2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕ ಪಟ್ಟಿಯಲ್ಲಿ 19 ಅಂಕಗಳನ್ನು ಕಳೆದುಕೊಂಡಿದೆ. ಇದೇ ವೇಳೆ ಆಸೀಸ್‌ ತಂಡ ಒಟ್ಟು 10 ಅಂಕಗಳನ್ನು ಕಳೆದುಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಶೇ.100 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದ್ದು, ಶೇ.66.67 ಗೆಲುವಿನ ಸರಾಸರಿ ಹೊಂದಿರುವ ಭಾರತ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ, ವಿಂಡೀಸ್‌, ಇಂಗ್ಲೆಂಡ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

Latest Videos
Follow Us:
Download App:
  • android
  • ios