ಬೆಂಗಳೂರು(ಅ.23):  ಕೆಪಿಎಲ್‌ ಬೆಟ್ಟಿಂಗ್‌ ಪ್ರಕರಣದ ತನಿಖೆಯ ಬಿಸಿ ಬೆಳಗಾವಿ ತಂಡದ ನಂತರ ಇದೀಗ ಬಳ್ಳಾರಿ ಹಾಗೂ ಬಿಜಾಪುರ ತಂಡಕ್ಕೂ ತಟ್ಟಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬಳ್ಳಾರಿ ಟಸ್ಕರ್ಸ್‌ ತಂಡದ ಮಾಲಿಕ ಅರವಿಂದ ವೆಂಕಟೇಶ್‌ ರೆಡ್ಡಿ ಅವರನ್ನು ಮಂಗಳವಾರ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!

ಬಿಜಾಪುರ ಬುಲ್ಸ್‌ ತಂಡದ ಡ್ರಮ್ಮರ್‌ ಭವೇಶ್‌ ಬಾಫ್ನಾ, ಕೆಪಿಎಲ್‌ ಪಂದ್ಯಾವಳಿಯ ಮ್ಯಾಚ್‌ ಫಿಕ್ಸಿಂಗ್‌ಗಾಗಿ ಬಳ್ಳಾರಿ ಟಸ್ಕರ್ಸ್‌ನ ಬೌಲರ್‌ ಭವೇಶ್‌ ಗುಲೇಚಾರನ್ನು ಸಂಪರ್ಕಿಸಿದ್ದ. ಪ್ರತಿ ಓವರ್‌ಗೆ 10 ರನ್‌ ನೀಡಿದರೆ ಎರಡು ಲಕ್ಷ ರು. ಹಾಗೂ ಐಪಿಎಲ್‌ ಪಂದ್ಯಾವಳಿಯಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿದ್ದ.

ಇದನ್ನೂ ಓದಿ:ಕೆಪಿಎಲ್ ಬೆಟ್ಟಿಂಗ್: ಬೆಳಗಾವಿ ತಂಡದ ಮಾಲೀಕನ ಬಂಧನ 

ಮ್ಯಾಚ್‌ ಫಿಕ್ಸಿಂಗ್‌ ಕುರಿತು ಇಬ್ಬರ ಮಧ್ಯೆ ನಡೆದಿರುವ ಸಂಭಾಷಣೆ ಬಗ್ಗೆ ಬಳ್ಳಾರಿ ಟಸ್ಕರ್ಸ್‌ ತಂಡದ ಮಾಲಿಕನಿಗೆ ತಿಳಿದಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಆರೋಪಿ ಬಾಫ್ನಾ ಜತೆ ಹಲವು ಮಂದಿ ನಂಟು ಹೊಂದಿರುವ ಶಂಕೆ ಇದೆ. ಕೆಪಿಎಲ್‌ ಪಂದ್ಯಾವಳಿಯ ಎಲ್ಲ ತಂಡದ ಮಾಲಿಕರನ್ನು ವಿಚಾರಣೆ ನಡೆಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: KPL ಫಿಕ್ಸಿಂಗ್; ನಾಲ್ವರು ಕ್ರಿಕೆಟಿಗರಿಗೆ CCB ಸಮನ್ಸ್!

ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅರವಿಂದ ವೆಂಕಟೇಶ್‌ ರೆಡ್ಡಿ, ಮ್ಯಾಚ್‌ ಫಿಕ್ಸಿಂಗ್‌ಗೆ ಬೌಲರ್‌ ಗುಲೇಚಾರನ್ನು ಸಂಪರ್ಕಿಸಿರುವ ವಿಚಾರ ಗೊತ್ತಿಲ್ಲ. ಬಿಜಾಪುರ ಬುಲ್ಸ್‌ ತಂಡದ ಡ್ರಮ್ಮರ್‌ ಬಾಫ್ನಾ ಎಂಬುವನನ್ನು ಬಂಧಿಸಿದ ಬಳಿಕ ವಿಚಾರ ತಿಳಿಯಿತು. ಸಿಸಿಬಿ ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದು ಹೇಳಿದರು.