Asianet Suvarna News Asianet Suvarna News

IND vs NZ Test; ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹೊಡೆತ, ಕೆಎಲ್ ರಾಹುಲ್ ಔಟ್!

  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ
  • ಗಾಯಗೊಂಡಿರುವ ಕೆಎಲ್ ರಾಹುಲ್ ಸರಣಿಯಿಂದ ಔಟ್
  • ರಾಹುಲ್ ಬದಲಿಗೆ ಸೂರ್ಯಕುಮಾರ್ ಯಾದವ್‌ಗೆ ಸ್ಥಾನ
KL Rahul ruled out of two match Test series against New Zealand due to injury Suryakumar Yadav replaced ckm
Author
Bengaluru, First Published Nov 23, 2021, 5:59 PM IST
  • Facebook
  • Twitter
  • Whatsapp

ಮುಂಬೈ(ನ.23): ಭಾರತ ಹಾಗೂ ನ್ಯೂಜಿಲೆಂಡ್(India vs New zealand) ನಡುವಿನ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿ(Test Series) ಮೇಲೆ ಕಣ್ಣಿಟ್ಟಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ತೀವ್ರ ಹಿನ್ನಡೆಯಾಗಿದೆ.  ನವೆಂಬರ್ 25 ರಿಂದು ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಆದರೆ ಸ್ನಾಯುಸೆಳೆತ ಕಾರಣ ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಕೆಎಲ್ ರಾಹುಲ್ ಬದಲು ಸೂರ್ಯಕುಮಾರ್ ಯಾದವ್ ತಂಡ ಸೇರಿಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕೆಎಲ್ ರಾಹುಲ್(KL Rahul) ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಕೆಎಲ್ ರಾಹುಲ್ ಟೂರ್ನಿಯಿಂದ ಹೊರಬಿದ್ದಿರುವುದು ಟೀಂ ಇಂಡಿಯಾಗೆ ಅತೀ ದೊಡ್ಡ ಆಘಾತವಾಗಿದೆ. ಕಾರಣ ಮೊದಲ ಟೆಸ್ಟ್ ಪಂದ್ಯದಿಂದ ನಾಯಕ ವಿರಾಟ್ ಕೊಹ್ಲಿಗೆ(Virat Kohli) ವಿಶ್ರಾಂತಿ ನೀಡಲಾಗಿದೆ. ಇತ್ತ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾಗೂ(Rohit Sharma) ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟ್ಸಮನ್ ಹಾಗೂ ಟಾಪ್ ಆರ್ಡರ್ ಸೇವೆ ಅಲಭ್ಯವಾಗಿದೆ.

Ind vs NZ Series: ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ರೋಹಿತ್ ಶರ್ಮಾ..!

ಟಿ20 ಸರಣಿ ಹಾಗೂ ಮೊದಲ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ, 2ನೇ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ರೋಹಿತ್ ಶರ್ಮಾಗೆ ಟೆಸ್ಟ್ ಸರಣಿಯಿಂದ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ.  ಕೆಎಲ್ ರಾಹುಲ್ ಇಂಜುರಿ(Injury) ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ರಾಹುಲ್ ಬೆಂಗಳೂರಿನಲ್ಲಿ(Bengaluru) ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಯಲ್ಲಿ ಚೇತರಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲ ಮುಂದಿನ ತಿಂಗಳು ನಡೆಯಲಿರುವ ಸೌತ್ ಆಫ್ರಿಕಾ(South Africa Series) ಸರಣಿಗೆ ತಯಾರಿ ನಡೆಸಲಿದ್ದಾರೆ. 

29 ವರ್ಷದ ಕೆಎಲ್ ರಾಹುಲ್ ಮೂರು ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ 40 ಟೆಸ್ಟ್ ಪಂದ್ಯದ ಮೂಲಕ 2321 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ಗರಿಷ್ಠ ರನ್ 199. 2016ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕರಿಯರ್ ಹೈಯೆಸ್ಟ್ ರನ್ ಸಿಡಿಸಿದ್ದಾರೆ. 

ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್(Suryakumar yadav) ಇದೀಗ ರಾಹುಲ್ ಬದಲು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ.  ನ್ಯೂಜಿಲೆಂಡ್ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಏಕದಿನ ಹಾಗೂ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ನಿಗದಿತ ಓವರ್ ಕ್ರಿಕೆಟ್ ಬ್ಯಾಟ್ಸ್‌ಮನ್ ಎಂದೇ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 

IND vs NZ T20: ಅಕ್ಸರ್ ಪಟೇಲ್ ಜಾದೂ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು!

77 ಪ್ರಥಮ ದರ್ಜೆ ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್ 5,326 ರನ್ ಕಲೆಹಾಕಿದ್ದಾರೆ. 44.01ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ 14 ಶತಕ ಹಾಗೂ 26 ಅರ್ಧಶತಕ ಸಿಡಿಸಿದ್ದಾರೆ.  ಮೀಡಿಯಂ ಪೇಸ್ ಆಫ್ ಬ್ರೇಕ್ ಬೌಲಿಂಗ್ ಮಾಡಬಲ್ಲ ಸೂರ್ಯಕುಮಾರ್ ಯಾದವ್ 24 ವಿಕೆಟ್ ಕಬಳಿಸಿದ್ದಾರೆ. 

ಕಾನ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ತಂಡ ಸೇರಿಕೊಳ್ಳಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. 

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ:
ಅಜಿಂಕ್ಯ ರಹಾನೆ(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರಾ(ಉಪ ನಾಯಕ), ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಾಹ, ಕೆಎಸ್ ಭರತ್, ರವಿಂದ್ರ ಜಡೇಜಾ, ಆರ್ ಅಶ್ವಿನ್,  ಅಕ್ಸರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಪ್ರಸಿದ್ಧ್ ಕೃಷ್ಣ

Follow Us:
Download App:
  • android
  • ios