Asianet Suvarna News Asianet Suvarna News

IPL 2021: ಫೈನಲ್‌ಗೆ KKR ಲಗ್ಗೆ,ಬಹಳ ಖುಷಿಯಾಗ್ತಿದೆ ಎಂದ ಕ್ಯಾಪ್ಟನ್‌ ಮಾರ್ಗನ್‌!

-ನಾವು ಸುಲಭವಾದ ಗೆಲುವನ್ನು ನಿರೀಕ್ಷೀಸಿದ್ದೆವು : ಮಾರ್ಗನ್‌

-ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ

-ಡೆಲ್ಲಿ ಕ್ಯಾಪಿಟಲ್ಸ ಮಣಿಸಿ ಫೈನಲ್‌ ತಲುಪಿದ ಕೆಕೆಆರ್‌
 

KKR captain Morgan speaks about  IPL 2021 Finals with CSK
Author
Bengaluru, First Published Oct 14, 2021, 1:00 PM IST

ಶಾರ್ಜಾ(ಅ. 13) : ಬುಧವಾರ ನಡೆದ ಐಪಿಎಲ್‌ 2021 (IPL 2021) ಕ್ವಾಲಿಫೈಯರ್‌ 2 (Qaulifier 2) ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮಣಿಸಿ ಕೆಕೆಆರ್‌ (KKR) ಫೈನಲ್‌ ಪ್ರವೇಶಿಸಿದೆ. ನಾಳೆ (ಅ. 15) ನಡೆಯಲಿರುವ IPL 2021 ಫೈನಲ್‌ ಪಂದ್ಯಾವಳಿಯಲ್ಲಿ ಕೆಕೆಆರ್‌, ಸಿಎಸ್‌ಕೆ(CSK) ಜತೆ ಸೆಣಸಾಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್‌ ನಡುವಿನ ಪಂದ್ಯ ಕೊನೆ ಓವರ್‌ವರೆಗೂ ಕೂತೂಹಲ ಮೂಡಿಸಿತ್ತು. ಡೆಲ್ಲಿ ನೀಡಿದ 136 ರನ್‌ಗಳ ಟಾರ್ಗೆಟ್‌ ಬೆನ್ನು ಹತ್ತಿದ ಕೆಕೆಆರ್‌ ಮೂರು ವಿಕೆಟ್‌ಗಳ ಜಯ ಸಂಪಾದನೆಯೊಂದಿಗೆ ಫೈನಲ್‌ ಪ್ರವೇಶಿಸಿತು. ವೆಂಕಟೇಶ್‌ ಅಯ್ಯರ್‌(Venkatesh Iyer) ಹಾಗೂ ಶುಭಮನ್‌ ಗಿಲ್‌ರ (Shubhman Gill) 96 ರನ್‌ಗಳ ಜತೆಯಾಟ ಕೆಕೆಆರ್‌ಗೆ ಉತ್ತಮ ಆರಂಭ ನೀಡಿತ್ತು. ಆದರೆ ನಂತರ ಕಮ್‌ಬ್ಯಾಕ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕೆಕೆಆರ್‌ ತಂಡಕ್ಕೆ ಸೋಲಿನ ಸುಳಿಗೆ ಸಿಲುಕಿಸಿತು. ಕೊನೆಯ ಎರಡು ಎಸೆತಗಳಲ್ಲಿ ಆರು ರನ್‌ಗಳ ಅವಶ್ಯಕತೆ ಇದ್ದಾಗ ಸಿಕ್ಸರ್‌ ಸಿಡಿಸುವ ಮೂಲಕ ತ್ರಿಪಾಟಿ ಕೆಕೆಆರ್ ತಂಡಕ್ಕೆ ವಿಜಯದ ಹಾದಿ ತೋರಿಸಿದರು. 

ಐಪಿಎಲ್‌ ಎರಡು ಹೊಸ ತಂಡಗಳ ಖರೀದಿಗೆ ಭಾರೀ ಡಿಮ್ಯಾಂಡ್‌..!

ಪಂದ್ಯಾವಳಿ ನಂತರ ಮಾತನಾಡಿದ ಕೆಕೆಆರ್‌ ಕ್ಯಾಪ್ಟನ್‌ ಮಾರ್ಗನ್‌ (Eoin Morgan) ʼವೆಂಕಿ ಹಾಗೂ ಗಿಲ್‌ರ ಆರಂಭದ ಆಟದಿಂದ ನಮಗೆ ಗೆಲುವಿನ ಹಾದಿ ಸುಲಭವಾಗಬೇಕಿತ್ತು, ಆದರೆ ಅಷ್ಟರೊಳಗೆ ಕ್ರೀಡಾಂಗಣದಲ್ಲಿ ಇಬ್ಬನಿ ಆವರಿಸಿತ್ತು. ಆದರೆ ನಾವು  ಫೈನಲ್‌ ತಲುಪಿದ್ದೇವೆ, ಇದು ನಮಗೆ ಅತೀವ ಸಂತೋಷ ತಂದಿದೆ. ನಾವು ಸುಲಭವಾದ ಗೆಲುವನ್ನು ನಿರೀಕ್ಷಿಸಿದ್ದೆವು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ನಮಗೆ ಉತ್ತಮ ಪೈಪೋಟಿ ನೀಡಿದೆ. ಕೊನೆಯ ಓವರ್‌ನಲ್ಲಿ ಎರಡು ಎಸೆತಗಳಲ್ಲಿ ಆರು ರನ್‌ಗಳ ಅವಶ್ಯಕತೆ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಫೈನಲ್‌ನ ಹಾದಿ ಸುಲಭವಾಗಿಸಿತ್ತು ಅದರೆ ರಾಹುಲ್‌ ತ್ರಿಪಾಟಿ ಉತ್ತಮ ಪ್ರದರ್ಶನದಿಂದ ನಾವು ಗೆಲುವು ಸಾಧಿಸಿದೆವು. ಯುವ ಆಟಗಾರರು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದು ನಮ್ಮ ತಂಡಕ್ಕೆ ಉತ್ತಮ ಬೆಳವಣಿಗೆಯಾಗಿದೆ, ನಮ್ಮ ಸಿಬ್ಬಂದಿ ಕೂಡ ಈ ಹಿನ್ನೆಲೆಯಲ್ಲಿ ಯುವ ಆಟಗಾರರಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿದ್ದಾರೆʼಎಂದು ಹೇಳಿದರು.

IPL 2021; ರೋಚಕ ತಂಡದಲ್ಲಿ ಗೆದ್ದ ಕೆಕೆಆರ್‌ ಫೈನಲ್‌ಗೆ, ಡೆಲ್ಲಿ ಹುಡುಗರಿಗೆ ನಿರಾಸೆ

16ನೇ ಓವರ್‌ನ ಕೊನೆಯಲ್ಲಿ ಕೆಕೆಆರ್‌ 123 ರನ್ ಗಳಿಸಿ ಎರಡು ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕೆಕೆಆರ್‌ ತಂಡದ ಮತ್ತಷ್ಟು ವಿಕೆಟ್‌ ಕಬಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್  ಆಟದಲ್ಲಿ ಕಮ್‌ಬ್ಯಾಕ್ ಮಾಡಿತು. ಕೊನೆಯ ನಾಲ್ಕು ಓವರ್‌ಗಳಲ್ಲಿ 13 ರನ್‌ ಗಳ ಅವಶ್ಯಕತೆ ಇದ್ದಾಗ ಕೆಕೆಆರ್‌ನ ನಾಲ್ಕು ಬ್ಯಾಟ್ಸ್‌ಮನ್‌ಗಳು ಯಾವುದೇ ರನ್‌ ಗಳಿಸಿದೆ ಪೆವೆಲಿಯನ್‌ಗೆ ಮರುಳಿದರು. ಇದು ತಂಡವನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿತು. ಆದರೆ ಪಂದ್ಯದ ಕೊನೆ ಹಂತದಲ್ಲಿ ರವಿಚಂದ್ರನ್‌ ಅಶ್ವೀನ್‌ ಎಸೆತಕ್ಕೆ ರಾಹುಲ್ ತ್ರಿಪಾಟಿ ಸಿಡಿಸಿದ ಮನಮೋಹಕ ಸಿಕ್ಸರ್‌ ನೆರವಿನಿಂದ ಕೆಕೆಆರ್‌ ತಂಡ ಐಪಿಎಲ್‌ ಇತಿಹಾಸದಲ್ಲಿ ಮೂರನೇ ಬಾರಿ ಫೈನಲ್‌ ಪ್ರವೇಶಿಸಿತು. 2014ರ ಅವೃತ್ತಿಯ ಐಪಿಎಲ್‌ ನಂತರ  7 ವರ್ಷಗಳ ಬಳಿಕ ಕೆಕೆಆರ್‌‌ ಫೈನಲ್‌ ತಲುಪಿದೆ. ಶುಕ್ರವಾರ (ಅ. 15) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಐಪಿಎಲ್‌ 2021ರ (IPL 2021)  ಫೈನಲ್‌ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಫೈನಲ್‌ ತಲುಪಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಜತೆಗೆ ಕೆಕೆಆರ್‌ ಸೆಣಸಾಡಲಿದೆ. 

IPL 2021; ಸನ್‌ರೈಸರ್ಸ್‌ ವಿರುದ್ಧ ಬೇಸರ ಹೊರಹಾಕಿದ ಡೇವಿಡ್‌ ವಾರ್ನರ್..!

Follow Us:
Download App:
  • android
  • ios