ಕೋಲ್ಕತಾ(ಡಿ.02): ಬಾಲಿವುಡ್‌ನ ಖ್ಯಾತ ನಟ ಶಾರುಕ್‌ ಖಾನ್‌, ಯುಎಸ್‌ ಟಿ20 ಲೀಗ್‌ನಲ್ಲಿ ಫ್ರಾಂಚೈಸಿ ಒಂದನ್ನು ಖರೀದಿಸಿದ್ದಾರೆ. 

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌)ನಲ್ಲಿ ಹಾಲಿ ಚಾಂಪಿಯನ್‌ ಆಗಿರುವ ಟ್ರಿನ್‌ಬಾಗೊ ನೈಟ್‌ ರೈಡರ್ಸ್‌ ತಂಡಕ್ಕೆ ಶಾರುಕ್‌ ಮಾಲೀಕರಾಗಿದ್ದಾರೆ. ಒಟ್ಟಾರೆ 3 ಟಿ20 ಲೀಗ್‌ಗಳಲ್ಲಿ ಫ್ರಾಂಚೈಸಿ ಹೊಂದಿದಂತಾಗಿದೆ. 

2022ರಲ್ಲಿ ಯುಎಸ್‌ ಉದ್ಘಾಟನಾ ಟಿ20 ಲೀಗ್‌ ಆರಂಭವಾಗಲಿದೆ. ಶಾರುಕ್‌, ಲಾಸ್‌ ಏಂಜಲೀಸ್‌ ಫ್ರಾಂಚೈಸಿಯಲ್ಲಿ ಖರೀದಿಸಿದ್ದಾರೆ. ‘ಲಾ ನೈಟ್‌ ರೈಡರ್ಸ್‌’ ಎಂಬುದು ಶಾರುಕ್‌ ಒಡೆತನದ ತಂಡದ ಹೆಸರಾಗಲಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಸಚಿನ್ ವಿಶ್ವದಾಖಲೆ ವಿರಾಟ್ ಪಾಲು..!

ಯುಎಸ್‌ ಟಿ20 ಲೀಗ್‌ನಲ್ಲಿ 6 ತಂಡಗಳು ಇರಲಿದ್ದು, ನ್ಯೂಯಾರ್ಕ್, ಸ್ಯಾನ್‌ಫ್ರಾನ್ಸಿಸ್ಕೋ, ವಾಷಿಂಗ್ಟನ್‌ ಡಿಸಿ, ಶಿಕಾಗೋ, ಡಲ್ಲಾಸ್‌ ಹಾಗೂ ಲಾಸ್‌ ಏಂಜಲೀಸ್‌ ನಗರಗಳನ್ನು ಪ್ರತಿನಿಧಿಸುವ ತಂಡಗಳು ಇರಲಿದೆ ಎನ್ನಲಾಗಿದೆ.