Andre Russell gifts 3 ಕೋಟಿ ರೂಪಾಯಿ ಮರ್ಸಿಡಿಸ್ ಬೆಂಜ್ ಕಾರು ಖರೀದಿಸಿದ ಆ್ಯಂಡ್ರೆ ರಸೆಲ್!

  • ಐಪಿಎಲ್ 2022 ಟೂರ್ನಿಯಲ್ಲಿ 12 ಕೋಟಿ ಸಂಭಾವನೆ ಪಡೆದ ರಸೆಲ್
  • ತಮಗೆ ಬೆಂಝ್ ಕಾರು ಗಿಫ್ಟ್ ಮಾಡಿದ ವೆಸ್ಟ್ ಇಂಡೀಸ್ ಆಲ್ರೌಂಡರ್
  • ಕ್ರಿಕೆಟಿಗರಿಂದ ರಸೆಲ್‌ಗೆ ಶುಭಾಶಯ, ರಸೆಲ್ ಖರೀದಿಸಿದ ಕಾರಿನ ವಿಶೇಷತೆ ಏನು?
KKR All rounder Andre Russell gifted himself a brand new Mercedes Benz AMG GT R car cricketer congratulate ckm

ಜಮೈಕಾ(ಜೂ.11): ವೆಸ್ಟ್ ಇಂಡೀಸ್ ಆಲ್ರೌಂಡರ್, ಕೋಲ್ಕತಾ ನೈಟ್ ರೈಡರ್ಸ್ ತಂಡ ಕೀ ಪ್ಲೇಯರ್ ಆ್ಯಂಡ್ರೆ ರಸೆಲ್ ಹೊಚ್ಚ ಹೊಸ ಮರ್ಸಿಡೀಸ್ ಬೆಂಜ್ AMG GT R ಕಾರು ಖರೀದಿಸಿ ತಮಗೆ ಗಿಫ್ಟ್ ಮಾಡಿದ್ದಾರೆ. ರಸೆಲ್ ಹಸಿರು ಬಣ್ಣದ ಮರ್ಸಿಡೀಸ್ ಬೆಂಜ್ AMG GT R ಕಾರಿನ ಬೆಲೆ 2.27 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). 

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದೆ. ಆದರೆ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಉತ್ತಮ ಪ್ರದರ್ಶನ ನೀಡಿದ್ದರು. ಕೋಲ್ಕತಾ ನೈಟ್ ರೈಡರ್ಸ್ ತಂಡ 2022 ಐಪಿಎಲ್ ಟೂರ್ನಿಗಾಗಿ ರಸೆಲ್ ರಿಟೈನ್ ಮಾಡಿಕೊಂಡಿತ್ತು. ಇದಕ್ಕಾಗಿ 12 ಕೋಟಿ ರೂಪಾಯಿ ನೀಡಿತ್ತು. ಇದೀಗ ಐಪಿಎಲ್ ಸಂಭಾವನೆಯಲ್ಲಿ ರಸೆಲ್ ಕಾರು ಖರೀದಿಸಿದ್ದಾರೆ.

IPL 2022 - KKR ತಂಡದ ಆಟಗಾರರ ಹಾಟ್‌ ಪತ್ನಿಯರು ಹಾಗೂ ಗರ್ಲ್‌ಫ್ರೆಂಡ್ಸ್‌!

ತಮ್ಮ ಹೊಸ ಕಾರು ಖರೀದಿ ಸಂತವನ್ನು ರಸೆಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಂಡೀಸ್ ಕ್ರಿಕೆಟಿಗರಾದ ಡರೆನ್ ಸ್ಯಾಮಿ, ಕ್ರಿಸ್ ಗೇಲ್,  ಭಾರತೀಯ ಕ್ರಿಕೆಟಿಗರಾದ ಸೂರ್ಯುಮಾರ್ ಯಾದವ್ ಸೇರಿದಂತೆ ಹಲವು ರಸೆಲ್‌ಗೆ ಶುಭಕೋರಿದ್ದಾರೆ.

ರಸೆಲ್ ಖರೀದಿಸಿದ ನೂತನ ಕಾರು ಅತ್ಯಂತ ಪವರ್‌ಫುಲ್ ಕಾರಾಗಿದೆ. 3982 cc , 8 ಸಿಲಿಂಡರ್ 4 ವೇಲ್ವ್ ಹಾಗೂ DOHC ಎಂಜಿನ್ ಹೊಂದಿದೆ. ಪೆಟ್ರೋಲ್ ಕಾರು ಇದಾಗಿದೆ. 7 ಸ್ಪೀಡ್ AMG ಸ್ಪೀಡ್‌ಶಿಫ್ಟ್ DCT ಟ್ರಾನ್ಸ್‌ಮಿಶನ್ ಹೊಂದಿದೆ. 469 bhp( @ 6000 rpm) ಪವರ್ ಹಾಗೂ 630 Nm (@ 1700 rpm) ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು 6 ಏರ್‌ಬ್ಯಾಗ್ ಹೊಂದಿದೆ. ಇನ್ನು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಹೊಂದಿದೆ.

 

 

ಐಪಿಎಲ್ 2022 ಟೂರ್ನಿಯಲ್ಲಿ  335 ರನ್ ಸಿಡಿಸಿದ ರಸೆಲ್ 17 ವಿಕೆಟ್ ಕಬಳಿಸಿದ್ದಾರೆ. ಏಕಾಂಗಿಯಾಗಿ ಕೆಲ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ ತಂಡದಿಂದ ಕಳೆದೊಂದು ವರ್ಷದಿಂದ ರಸೆಲ್ ದೂರ ಉಳಿದಿದ್ದಾರೆ. ಇಂಜುರಿ ಕಾರಣ ರಸೆಲ್ ತಂಡದಿಂದ ಹೊರಬಿದ್ದಿದ್ದರು. 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಪರ ಆಡಿದ್ದ ರಸೆಲ್ ಬಳಿಕ ಇದೀಗ 2022ರ ಟಿ20 ಟೂರ್ನಿಯಲ್ಲಿ ಪ್ರಮುಖ ಜವಬ್ದಾರಿ ನಿರ್ವಹಿಸಲಿದ್ದಾರೆ.

ಅಭಿಮಾನಿಗಳಿಗೆ ರಸೆಲ್ ಗುಡ್‌ನ್ಯೂಸ್, ಪೋಟೋದ ಹಿಂದಿನ ಸಂಭ್ರಮ

ಐಪಿಎಲ್ ಟೂರ್ನಿಯಲ್ಲಿ ದಾಖಲೆ ಬರೆದಿದ್ದ ರಸೆಲ್
ಆ್ಯಂಡ್ರೆ ರಸೆಲ್‌ 4 ಐಪಿಎಲ್‌ ಆವೃತ್ತಿಗಳಲ್ಲಿ 250ಕ್ಕೂ ಹೆಚ್ಚು ರನ್‌ ಗಳಿಸಿ, 10ಕ್ಕೂ ಹೆಚ್ಚು ವಿಕೆಟ್‌ ಕಿತ್ತ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಆವೃತ್ತಿಯಲ್ಲಿ  174.5 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದಕ್ಕೂ ಮೊದಲು ಅವರು 2015, 2018 ಹಾಗೂ 2019ರಲ್ಲಿ 250+ ರನ್‌ ಹಾಗೂ 10+ ವಿಕೆಟ್‌ ಸಾಧನೆ ಮಾಡಿದ್ದರು. ಜಾಕ್‌ ಕಾಲಿಸ್‌ 3 ಬಾರಿ (2010, 2012, 2013) ಈ ಸಾಧನೆ ಮಾಡಿದ್ದಾರೆ. ಇನ್ನು, ರಸೆಲ್‌ ಅವರು ಐಪಿಎಲ್‌ನಲ್ಲಿ ವೇಗದ 2000 ರನ್‌ ಗಳಿಸಿದ ದಾಖಲೆ ಬರೆದಿದ್ದಾರೆ. ಅವರು 81 ಇನ್ನಿಂಗ್ಸ್‌ಗಳಲ್ಲಿ ಕೇವಲ 1120 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

Latest Videos
Follow Us:
Download App:
  • android
  • ios