ಪಂಜಾಬ್(ಜ.20):  ಕೆಎಲ್ ರಾಹುಲ್ ನಾಯಕತ್ವ, ಅನಿಲ್ ಕುಂಬ್ಳೆ ಮಾರ್ಗದರ್ಶನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಳೆದ ಆವೃತ್ತಿಯಲ್ಲಿ ಉತ್ತಮ ಹೋರಾಟ ನೀಡಿದರೂ ಅದೃಷ್ಟ ಕೈಕೊಟ್ಟಿತ್ತು. ಕೆಲ ಪಂದ್ಯಗಳನ್ನು ಸೂಪರ್ ಓವರ್‌ನಲ್ಲಿ ಸೋತರೆ, ಮತ್ತೆ ಕೆಲ ಪಂದ್ಯಗಳಲ್ಲಿ ವಿರೋಚಿತ ಸೋಲು ಕಂಡಿತ್ತು. ಆದರೆ ಈ ಬಾರಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾಗಿದೆ.

ಕೊಹ್ಲಿ, ಎಬಿಡಿ, ಪಡಿಕ್ಕಲ್; 12 ಆಟಗಾರರ ಉಳಿಸಿಕೊಂಡು, 10 ಮಂದಿಗೆ ಗೇಟ್‌ಪಾಸ್ ನೀಡಿದ RCB!

2021ರ ಐಪಿಎಲ್ ಟೂರ್ನಿಗೆ ಪಂಜಾಬ್ ತಂಡ 16 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಕೊಕ್ ನೀಡಲಾಗಿದೆ.  ಇನ್ನು ತಂಡದಿಂದ ಹೊರಬಿದ್ದ ಆಟಗಾರರಲ್ಲಿ ಕರುಣ್ ನಾಯರ್ ಹಾಗೂ ಕೆ ಗೌತಮ್ ಇಬ್ಬರು ಕನ್ನಡಿಗರು ಸೇರಿದ್ದಾರೆ. 

ಸ್ಟೀವ್ ಸ್ಮಿತ್‌ ಔಟ್, ಸಂಜು ಸ್ಯಾಮ್ಸನ್‌ಗೆ ನಾಯಕತ್ವ ನೀಡಿದ ರಾಜಸ್ಥಾನ ರಾಯಲ್ಸ್!

ಉಳಿಸಿಕೊಂಡ ಆಟಗಾರರು: ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮನ್ದೀಪ್ ಸಿಂಗ್, ಸರ್ಫಾರಾಜ್ ಖಾನ್, ದೀಪಕ್ ಹೂಡ, ಪ್ರಭಾಸಿಮ್ರನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡನ್, ದರ್ಶನ್ ನಾಲ್ಕಂಡೆ, ರವಿ ಬಿಶ್ನೋಯಿ, ಮುರುಗನ್ ಅಶ್ವಿನ್, ಅರ್ಶದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಇಶಾನ್ ಪೊರೆಲ್

ಬಿಡುಗಡೆ ಮಾಡಿದ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಹರ್ಡಸ್ ವಿಲ್ಜೊನ್, ಜಗದೀಶ್ ಸುಚಿತ್, ಮುಜೀಪ್ ಯುಆರ್ ರಹಮಾನ್, ಶೆಲ್ಡಾನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೆ ಗೌತಮ್, ತಜಿಂದರ್ ಸಿಂಗ್