ಸ್ಟೀವ್ ಸ್ಮಿತ್ ಔಟ್, ಸಂಜು ಸ್ಯಾಮ್ಸನ್‌ಗೆ ನಾಯಕತ್ವ ನೀಡಿದ ರಾಜಸ್ಥಾನ ರಾಯಲ್ಸ್!
2021ರ ಐಪಿಎಲ್ ಟೂರ್ನಿಗೆ ರಾಜಸ್ಥಾನ ರಾಯಲ್ಸ್ ಮಹತ್ತರ ಬದಲಾವಣೆ ಮಾಡಿದೆ. ಆಟಗಾರರ ಹರಾಜಿಗೂ ಮುನ್ನ ರಿಟೈನ್ ಹಾಗೂ ರಿಲೀಸ್ ಮಾಡಿದ ಪ್ಲೇಯರ್ಸ್ ಲಿಸ್ಟ್ ಪ್ರಕಟಿಸಿದ ರಾಜಸ್ಥಾನ ಹಲವು ಅಚ್ಚರಿಗಳನ್ನು ನೀಡಿದೆ. ತಂಡದ ನಾಯಕ ಸ್ಟೀವ್ ಸ್ಮಿತ್‌ಗೆ ಗೇಟ್ ಪಾಸ್ ನೀಡಿರುವ ರಾಜಸ್ಥಾನ ಸಂಜು ಸ್ಯಾಮ್ಸನ್‌ಗೆ ನಾಯಕ ಸ್ಥಾನ ನೀಡಿದೆ.
ರಾಜಸ್ಥಾನ ರಾಯಲ್ಸ್ ಮುಂಬರುವ ಐಪಿಎಲ್ ಟೂರ್ನಿಗೆ ಭರ್ಜರಿ ತಯಾರಿ ಆರಂಭಿಸಿದೆ. ಪ್ರತಿ ಆವೃತ್ತಿಗಳಂತೆ ಈ ಬಾರಿಯೂ ತಂಡದಲ್ಲಿ ಹಲವು ಬದಲಾವಣೆ ಮಾಡಿದೆ.
2020ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ಸ್ಟೀವ್ ಸ್ಮಿತ್‌ರನ್ನು ತಂಡ ಕೈಬಿಟ್ಟಿದೆ. ಟ್ವಿಟರ್ ಮೂಲಕ ಸ್ಮಿತ್‌ಗೆ ಧನ್ಯವಾದ ಹೇಳಿದೆ.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ನೂತನ ನಾಯಕನ ಆಯ್ಕೆ ಮಾಡಲಾಗಿದೆ. 2021ರಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಪ್ರಮುಖ ಬದಲಾವಣೆ ರಾಜಸ್ಥಾನ ತಂಡದ ಹುರುಪು ಹೆಚ್ಚಿಸಿದೆ.
2020ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಡೋ ಮೂಲಕ ಭಾರಿ ನಿರಾಸೆ ಅನುಭವಿಸಿತ್ತು.
ಕಳೆದ ಆವೃತ್ತಿಯಲ್ಲಿ ಸ್ಟೀವ್ ಸ್ಮಿತ್ 14 ಪಂದ್ಯಗಳಿಂದ 311 ರನ್ ಸಿಡಿಸಿದ್ದರು. ನಾಯಕ ಸೇರಿದಂತೆ ರಾಜಸ್ಥಾನ ರಾಯಲ್ಸ್ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು.
ಅದ್ಭುತ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್, ರಾಜಸ್ಥಾನ ತಂಡದ ಹೊಸ ಭರವಸೆಯಾಗಿ ಮಿಂಚಿದ್ದರು. ಇದೀಗ ಯುವ ಕ್ರಿಕೆಟಿಗ ಸಂಜುಗೆ ನಾಯಕತ್ವ ನೀಡೋ ಮೂಲಕ ಮುಂಬರುವ ಐಪಿಎಲ್ ಟೂರ್ನಿಗೆ ರಾಜಸ್ಥಾನ ಭರ್ಜರಿಯಾಗಿ ತಯಾರಿ ಆರಂಭಿಸಿದೆ.