ಬೆಂಗಳೂರು(ಡಿ.14): ಮಹಿಳಾ ಕ್ರಿಕೆಟ್‌ ಜನಪ್ರಿಯಗೊಳ್ಳುತ್ತಿದ್ದು, ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ ಹಾಗೂ ಕರ್ನಾಟಕ ಅಂಧರ ಕ್ರಿಕೆಟ್‌ ಸಂಸ್ಥೆ ಜಂಟಿಯಾಗಿ ಇದೇ ಮೊದಲ ಬಾರಿಗೆ ಅಂಧ ಮಹಿಳೆಯರ ರಾಷ್ಟ್ರೀಯ ಟೂರ್ನಿಯನ್ನು ಆಯೋಜಿಸುತ್ತಿದೆ. ಡಿ.16ರಿಂದ 19ರ ವರೆಗೆ ದೆಹಲಿಯಲ್ಲಿ ಟೂರ್ನಿ ನಡೆಯಲಿದ್ದು, ಕರ್ನಾಟಕ, ದೆಹಲಿ, ಒಡಿಶಾ, ಜಾರ್ಖಂಡ್‌, ಮಹಾರಾಷ್ಟ್ರ, ಕೇರಳ ಮತ್ತು ಬಂಗಾಳ ತಂಡಗಳು ಸೆಣಸಲಿವೆ. ಶುಕ್ರವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಯಿತು.

ಇದನ್ನೂ ಓದಿ: ಅಂಧರ ಕ್ರಿಕೆ​ಟ್‌: ರಾಜ್ಯ​ದ ಸುನಿಲ್‌ ಭಾರತ ತಂಡದ ನಾಯ​ಕ

ಕರ್ನಾಟಕ ತಂಡ: 
ಜಯಲಕ್ಷ್ಮಿ, ಕಾವ್ಯ, ದೀಪಿಕಾ, ನೇತ್ರಾವತಿ, ರೇಣುಕಾ, ಸುನಿತಾ, ಅನಿತಾ, ಶಿಲ್ಪಾ, ಭೂಮಿಕಾ, ರಾಜೇಶ್ವರಿ, ಆಶಾ, ವರ್ಷಾ, ವಿಜಯಲಕ್ಷ್ಮಿ

ಕರ್ನಾಟಕ ಅಂಧರ ಮಹಿಳಾ ತಂಡ ಆಯ್ಕೆಗೆ ಬೆಂಗಳೂರಿನಲ್ಲಿ 6 ಕ್ಯಾಂಪ್ ನಡೆಸಲಾಗಿತ್ತು. 85 ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಪಾಲ್ಗೊಂಡಿದ್ದ ಈ ಕ್ಯಾಂಪ್‌ನಿಂದ 28 ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಶಾರ್ಟ್ ಲಿಸ್ಟ್ ಆಟಗಾರರಿಂದ 14 ಮಹಿಳಾ ಆಟಗಾರ್ತಿಯರು ಇದೀಗ ಆಯ್ಕೆಯಾಗಿದ್ದಾರೆ. 

ಇದನ್ನೂ ಓದಿ:  ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್ ಅವಾರ್ಡ್ ಸಮಾರಂಭ- ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್!.

ಕರ್ನಾಟಕ ತಂಡ ಪ್ರಕಟಣೆಗೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಛೆ ಅಧ್ಯಕ್ಷ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ, ಕರ್ನಾಟಕ ಮಹಿಳಾ ತಂಡದ ಮಾಜಿ ನಾಯಕ ಮಮತಾ ಮಾಬೆನ್ ಹಾಜರಿದ್ದರು.