ನವ​ದೆ​ಹ​ಲಿ(ನ.27) : ಡಿ.2 ರಿಂದ 8ರ ವರೆಗೆ ನಡೆ​ಯ​ಲಿ​ರುವ ನೇಪಾಳ ವಿರು​ದ್ಧದ ಸೀಮಿತ ಓವ​ರ್‌​ಗಳ ಸರ​ಣಿಗೆ ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎ​ಬಿ​ಐ) ಆಯ್ಕೆ ಸಮಿತಿ, 10 ರಾಜ್ಯ​ಗ​ಳಿಂದ 14 ಸದ​ಸ್ಯರ ಭಾರತ ತಂಡ​ವನ್ನು ಆಯ್ಕೆ ಮಾಡಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್ ಅವಾರ್ಡ್ ಸಮಾರಂಭ- ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್!

ಕರ್ನಾ​ಟ​ಕದ ಸುನಿಲ್‌ ರಮೇಶ್‌ರನ್ನು ಏಕ​ದಿನ ತಂಡದ ನಾಯ​ಕ​ರ​ನ್ನಾಗಿ ನೇಮಿ​ಸಿದೆ. ರಾಜ್ಯದ ಆಟ​ಗಾರರಾದ ಲೋಕೇಶ್‌, ಏಕ​ದಿನ ನಾಯಕ ಸುನಿಲ್‌, ಏಕದಿನ ಹಾಗೂ ಟಿ20 ಎರಡೂ ತಂಡ​ಗ​ಳಲ್ಲಿ ಸ್ಥಾನ ಪಡೆ​ದಿ​ದ್ದಾ​ರೆ. ಭಾರ​ತ ಅಂಧರ ಟಿ20 ನಾಯ​ಕ​ರಾಗಿ ಹರ್ಯಾ​ಣದ ದೀಪಕ್‌ ಮಲಿಕ್‌ ಆಯ್ಕೆ​ ಆಗಿದ್ದಾರೆ.

ಇದನ್ನೂ ಓದಿ:  ಅಂಧರ ಟಿ20: ಲಂಕಾ ವಿರುದ್ಧ ಭಾರತಕ್ಕೆ ಸರಣಿ!

ಡಿ.2ರಿಂದ 4ರ ವರೆಗೆ ಕಾನ್ಪು​ರ​ದಲ್ಲಿ 3 ಪಂದ್ಯ​ಗಳ ಏಕ​ದಿನ ಸರಣಿ ನಡೆ​ಯ​ಲಿದೆ. ಡಿ.6 ರಿಂದ 8ರ ವರೆಗೆ ಡೆಹ್ರಾ​ಡೂ​ನ್‌​ನಲ್ಲಿ 3 ಪಂದ್ಯ​ಗಳ ಟಿ20 ಸರಣಿ ನಡೆ​ಯ​ಲಿ​ದೆ.