ರಾಷ್ಟ್ರೀಯ ಮಹಿಳಾ ಏಕದಿನ: ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ | ಮುಷ್ತಾಕ್‌ ಅಲಿ: ಕ್ವಾರ್ಟರ್‌ಗೆ ಕರ್ನಾಟಕ!

*ಮಹಿಳಾ ಏಕದಿನ; ಕ್ವಾರ್ಟರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಜಯ
*ಮುಷ್ತಾಕ್‌ ಅಲಿ:  ಪ್ರಿ ಕ್ವಾರ್ಟರಲ್ಲಿ ಸೌರಾಷ್ಟ್ರ ವಿರುದ್ಧ 2 ವಿಕೆಟ್‌ ಜಯ
*ಗುರುವಾರ ಕ್ವಾರ್ಟರ್‌ನಲ್ಲಿ ಬೆಂಗಾಲ್‌ ವಿರುದ್ಧ ಸೆಣಸಾಟ

Karnataka to face Punjab in semifinal in Women's Senior One Day Trophy mnj

ಬೆಂಗಳೂರು(ನ.17): ರಾಷ್ಟ್ರೀಯ ಮಹಿಳಾ ಏಕದಿನ (Women's Senior One Day Trophy)  ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ರಾಜ್ಯ ತಂಡ ಮಧ್ಯಪ್ರದೇಶ (Madhya Pradesh) ವಿರುದ್ಧ 5 ವಿಕೆಟ್‌ ಗೆಲುವು ಸಾಧಿಸಿತು. ನ.18ರಂದು ಸೆಮಿಫೈನಲ್‌ನಲ್ಲಿ (Semifinal) ಪಂಜಾಬ್‌ (Punjab) ವಿರುದ್ಧ ಸೆಣಸಲಿದೆ.

ಗೆಲ್ಲಲು 170 ರನ್‌ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ಆರಂಭಿಕ ಆಟಗಾರ್ತಿ ಶುಭಾ ಸತೀಶ್‌ (Shubha satish), ಮಧ್ಯಮ ಕ್ರಮಾಂಕದಲ್ಲಿ ಪ್ರತ್ಯೂಷಾ ಕುಮಾರ್‌ (pratyusha kumar) ನೆರವಾದರು. ಶುಭಾ 43 ರನ್‌ ಗಳಿಸಿ ಔಟಾದರೆ, ಪ್ರತ್ಯೂಷಾ 58 ಎಸೆತಗಳಲ್ಲಿ 45 ರನ್‌ ಗಳಿಸಿ ಔಟಾಗದೆ ಉಳಿದರು. ದಿವ್ಯಾ ಜ್ಞಾನೇಂದ್ರ 28, ನಾಯಕಿ ವೇದಾ ಕೃಷ್ಣಮೂರ್ತಿ 17, ಚಲ್ಲೂರು ಪ್ರತ್ಯೂಷಾ ಔಟಾಗದೆ 15 ರನ್‌ ಕೊಡುಗೆ ನೀಡಿದರು. ಕರ್ನಾಟಕ 42.2 ಓವರಲ್ಲಿ ಗುರಿ ತಲುಪಿತು.

India Vs New Zealand: ಇಂದಿನಿಂದ ದ್ರಾವಿಡ್‌-ರೋಹಿತ್‌ ಯುಗ ಆರಂಭ!

ಇದಕ್ಕೂ ಮುನ್ನ ಮಳೆಯಿಂದಾಗಿ ಪಂದ್ಯವನ್ನು ತಲಾ 48 ಓವರ್‌ಗೆ ಇಳಿಸಲಾಗಿತ್ತು. ಮಧ್ಯಪ್ರದೇಶ 9 ವಿಕೆಟ್‌ಗೆ 169 ರನ್‌ ಕಲೆಹಾಕಿತು. ನಾಯಕಿ ಪೂಜಾ ವಸ್ತ್ರಾಕರ್‌ 40, ಸೌಮ್ಯ ತಿವಾರಿ 45 ರನ್‌ ಗಳಿಸಿದರು. ರಾಜ್ಯದ ಪರ ಚಂದು, ಸಿ. ಪ್ರತ್ಯೂಷಾ, ಶ್ರೇಯಾಂಕಾ ಪಾಟೀಲ್‌ ತಲಾ 2 ವಿಕೆಟ್‌ ಕಿತ್ತರು.

ನವದೆಹಲಿ(ನ.17): ಚೊಚ್ಚಲ ಪಂದ್ಯದಲ್ಲೇ ಅಭಿನವ್‌ ಮನೋಹರ್‌ ಮಿಂಚಿನ ಆಟದ ನೆರವಿನಿಂದ ಕರ್ನಾಟಕ ತಂಡ (Karnataka Team) ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ (Syed Mushtaq Ali Trophy) ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ಸೌರಾಷ್ಟ್ರ (Sourashtra) ವಿರುದ್ಧದ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ರಾಜ್ಯ ತಂಡ 2 ವಿಕೆಟ್‌ ರೋಚಕ ಗೆಲುವು ಸಾಧಿಸಿತು. ನ.18ರಂದು ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ (Quarter Final) ರಾಜ್ಯ ತಂಡ ಬೆಂಗಾಲ್‌ (Bengal) ವಿರುದ್ಧ ಆಡಲಿದೆ.

India vs New zealand; ಕ್ರಿಕೆಟಿಗರು ಯಂತ್ರಗಳಲ್ಲ, ವಿಶ್ರಾಂತಿ ಬೇಕೆ ಬೇಕು; ನಾಯಕ ರೋಹಿತ್ ಹೇಳಿಕೆ ಸಂಚಲನ!

ಗೆಲ್ಲಲು 146 ರನ್‌ ಗುರಿ ಬೆನ್ನತ್ತಿದ ಕರ್ನಾಟಕ, 34 ರನ್‌ ಗಳಿಸುವಷ್ಟರಲ್ಲಿ ನಾಯಕ ಮನೀಶ್‌ ಪಾಂಡೆ (Manish Pandey), ಕರುಣ್‌ ನಾಯರ್‌ (Karun Nayar) ಸೇರಿ 3 ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಆಟಗಾರ ರೋಹನ್‌ ಕದಂ 33 ರನ್‌ಗಳ ಕೊಡುಗೆ ನೀಡಿದರೆ, ಅನಿರುದ್ಧ ಜೋಶಿ 13 ರನ್‌ ಗಳಿಸಿದರು. ರಾಜ್ಯದ ಪರ ಮೊದಲ ಬಾರಿಗೆ ಆಡಿದ ಅಭಿನವ್‌, 49 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 70 ರನ್‌ ಸಿಡಿಸಿ ಔಟಾಗದೆ ಉಳಿದರು. ಕೊನೆ ಓವರಲ್ಲಿ ಕರ್ನಾಟಕಕ್ಕೆ ಗೆಲ್ಲಲು 5 ರನ್‌ ಬೇಕಿತ್ತು. ಓವರ್‌ನ 5ನೇ ಎಸೆತದಲ್ಲಿ ಅಭಿನವ್‌ ಸಿಕ್ಸರ್‌ ಸಿಡಿಸಿ ಗೆಲುವು ತಂದುಕೊಟ್ಟರು. ನಾಯಕ ಉನಾದ್ಕತ್‌ 4 ವಿಕೆಟ್‌ ಕಿತ್ತು ಗಮನ ಸೆಳೆದರು.

ಮೊದಲು ಬ್ಯಾಟ್‌ ಮಾಡಿದ ಸೌರಾಷ್ಟ್ರ 7 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿತು. ಶೆಲ್ಡನ್‌ ಜಾಕ್ಸನ್‌(50) ಟೂರ್ನಿಯಲ್ಲಿ ಸತತ 4ನೇ ಅರ್ಧಶತಕ ಬಾರಿಸಿದರು. ಕರ್ನಾಟಕ ಪರ ಕೆ.ಸಿ.ಕರಿಯಪ್ಪ ವೈಶಾಕ್‌, ಕೌಶಿಕ್‌ ತಲಾ 2 ವಿಕೆಟ್‌ ಕಬಳಿಸಿದರು.

ಸ್ಕೋರ್‌:

ಸೌರಾಷ್ಟ್ರ 20 ಓವರಲ್ಲಿ 145/7(ಜಾಕ್ಸನ್‌ 50, ವೈಶಾಕ್‌ 2-19, ಕರಿಯಪ್ಪ 2-23),

ಕರ್ನಾಟಕ 19.5 ಓವರಲ್ಲಿ 150​/8(ಅಭಿನವ್‌ 70*, ರೋಹನ್‌ 33, ಉನಾದ್ಕತ್‌ 4-22)

Latest Videos
Follow Us:
Download App:
  • android
  • ios