ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಭರ್ಜರಿ ಪ್ರದರ್ಶನರಾಜಸ್ಥಾನ ವಿರುದ್ದ ಮೊದಲ ದಿನವೇ ಮೇಲುಗೈ ಸಾಧಿಸಿದ ರಾಜ್ಯ ತಂಡರಾಜಸ್ಥಾನ ಎದುರು ಬೌಲಿಂಗ್‌ನಲ್ಲಿ ಮಿಂಚಿದ ಕರ್ನಾಟಕದ ವೇಗಿಗಳು

ಬೆಂಗಳೂರು(ಜ.11): 2022-23ರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ 5ನೇ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನ ವಿರುದ್ಧ ಮೊದಲ ದಿನ ಮೇಲುಗೈ ಸಾಧಿಸಿದೆ. ರಾಜಸ್ಥಾನವನ್ನು ಮೊದಲ ಇನ್ನಿಂಗ್‌್ಸನಲ್ಲಿ 129ಕ್ಕೆ ನಿಯಂತ್ರಿಸಿದ ರಾಜ್ಯ ತಂಡ ದಿನದಾಟದಂತ್ಯಕ್ಕೆ 2 ವಿಕೆಟ್‌ಗೆ 106 ರನ್‌ ಗಳಿಸಿದ್ದು, ಕೇವಲ 23 ರನ್‌ ಹಿನ್ನಡೆಯಲ್ಲಿದೆ.

ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ರಾಜಸ್ಥಾನ ಬ್ಯಾಟರ್‌ಗಳನ್ನು ರಾಜ್ಯದ ವೇಗಿಗಳು ಇನ್ನಿಲ್ಲದಂತೆ ಕಾಡಿದರು. ಪಂದ್ಯದ 2ನೇ ಎಸೆತದಲ್ಲೇ ವಿಕೆಟ್‌ ಕಳೆದುಕೊಂಡ ರಾಜಸ್ಥಾನ ಬಳಿಕ ಯಾವುದೇ ಹಂತದಲ್ಲೂ ಚೇತರಿಸಿಕೊಳ್ಳಲಿಲ್ಲ. ಕುನಾಲ್‌ ಸಿಂಗ್‌(33), 18 ವರ್ಷದ ಕರಣ್‌ ಲಾಂಬಾ(31) ಕೊಂಚ ಪ್ರತಿರೋಧ ತೋರಿದರೂ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯದಂತೆ ಕಾಪಾಡಲು ಸಾಧ್ಯವಾಗಲಿಲ್ಲ. ರಾಜ್ಯದ ಪರ ವೈಶಾಖ್‌ ಹಾಗೂ ಕೌಶಿಕ್‌ ತಲಾ 4 ಹಾಗೂ ವಿದ್ವತ್‌ ಕಾವೇರಪ್ಪ 2 ವಿಕೆಟ್‌ ಕಿತ್ತರು.

IND vs SL ಸಾಕಾಗಲಿಲ್ಲ ದಸೂನ್ ಹೋರಾಟ, ಗೆಲುವಿನೊಂದಿಗೆ ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!

ಬಳಿಕ ಇನ್ನಿಂಗ್‌್ಸ ಆರಂಭಿಸಿದ ರಾಜ್ಯಕ್ಕೆ ಮಯಾಂಕ್‌ ಅಗರ್‌ವಾಲ್‌ ಆಸರೆಯಾದರು. ಆರ್‌.ಸಮಥ್‌ರ್‍(08), ಅನುಭವಿ ದೇವದತ್‌ ಪಡಿಕ್ಕಲ್‌(32) ಬೇಗನೇ ನಿರ್ಗಮಿಸಿದರೂ ಮಯಾಂಕ್‌ ಅಜೇಯ 49 ರನ್‌ ಸಿಡಿಸಿದ್ದು, ನಿಕಿನ್‌ ಜೋಸ್‌(10) ಜೊತೆ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅನಿಕೇತ್‌ ಚೌಧರಿ 2 ವಿಕೆಟ್‌ ಕಿತ್ತರು.

ಸ್ಕೋರ್‌: ರಾಜಸ್ಥಾನ 129/10 (ಕುನಾಲ್‌ 33, ಕರಣ್‌ 31, ಕೌಶಿಕ್‌ 4-37, ವೈಶಾಖ್‌ 4-50), ಕರ್ನಾಟಕ 106/2 (ಮಯಾಂಕ್‌ 49*, ಪಡಿಕ್ಕಲ್‌ 32, ಅನಿಕೇತ್‌ 2-40)

ಮಯಾಂಕ್‌ 3000 ರನ್‌: ರಾಜ್ಯದ 22ನೇ ಬ್ಯಾಟರ್‌

ಮಯಾಂಕ್‌ ರಣಜಿ ಟ್ರೋಫಿಯಲ್ಲಿ 3000 ರನ್‌ ಪೂರ್ತಿಗೊಳಿಸಿದರು. ಅವರು 43 ಪಂದ್ಯಗಳ 73 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದರು. ಈ ಸಾಧನೆ ಮಾಡಿದ ಕರ್ನಾಟಕದ 22ನೇ ಬ್ಯಾಟರ್‌ ಎನಿಸಿಕೊಂಡರು. ವೇಗವಾಗಿ ಈ ಮೈಲಿಗಲ್ಲು ತಲುಪಿದ ಬ್ಯಾಟರ್‌ಗಳ ಪೈಕಿ 9ನೇ ಸ್ಥಾನಕ್ಕೇರಿದರು.

ರಣಜಿಯಲ್ಲಿ ಮೊದಲ ಬಾರಿ 3 ಮಹಿಳಾ ಅಂಪೈರ್‌ಗಳು!

ನವದೆಹಲಿ: 88 ವರ್ಷಗಳ ಇತಿಹಾಸವಿರುವ ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಮೂವರು ಮಹಿಳೆಯರು ಅಂಪೈರ್‌ಗಳಾಗಿ ಕಾರ‍್ಯನಿರ್ವಹಿಸಿದರು. ಡæಲ್ಲಿಯ ಗಾಯತ್ರಿ ವೇಣುಗೋಪಾಲನ್‌ ಜಮ್ಶೇಡ್‌ಪುರದಲ್ಲಿ ಆರಂಭಗೊಂಡ ಜಾರ್ಖಂಡ್‌-ಛತ್ತೀಸ್‌ಗಢ ನಡುವಿನ ಪಂದ್ಯಕ್ಕೆ ಅಂಪೈರ್‌ ಆದರೆ, ಚೆನ್ನೈನ ಜನನಿ ನಾರಾಯಣನ್‌ ರೈಲ್ವೇಸ್‌-ತ್ರಿಪುರಾ ಪಂದ್ಯದಲ್ಲಿ ಕಾರ‍್ಯನಿರ್ವಹಿಸಿದರು. ಮುಂಬೈನ ವೃಂದಾ ರಾಥಿ ಗೋವಾ-ಪಾಂಡಿಚೇರಿ ನಡುವಿನ ಪಂದ್ಯಕ್ಕೆ ಅಂಪೈರ್‌ ಆಗಿ ಸೇವೆ ಸಲ್ಲಿಸಿದರು. ಈ ಪೈಕಿ ವೃಂದಾ ಹಾಗೂ ಜನನಿ ಈ ಮೊದಲು 2018ರಲ್ಲಿ ಐಸಿಸಿ ಅಂಪೈ​ರ್‍ಸ್ ಪ್ಯಾನಲ್‌ನಲ್ಲಿದ್ದರು. ವೇಣುಗೋಪಾಲ್‌ ಅವರು ಈ ಮೊದಲು ರಣಜಿ ಟ್ರೋಫಿಯಲ್ಲಿ ಮೀಸಲು ಅಂಪೈರ್‌ ಆಗಿ ಸ್ಥಾನ ಪಡೆದಿದ್ದರು.

ಅಂಧರ ಮಹಿಳೆಯರ ಟಿ20: ರಾಜ್ಯಕ್ಕೆ ಸತತ 2ನೇ ಜಯ

ಬೆಂಗಳೂರು: 3ನೇ ಆವೃತ್ತಿಯ ರಾಷ್ಟ್ರೀಯ ಅಂಧ ಮಹಿಳೆಯರ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಮಂಗಳವಾರ ಮಧ್ಯಪ್ರದೇಶ ವಿರುದ್ಧ ರಾಜ್ಯ ತಂಡ 29 ರನ್‌ಗಳಿಂದ ಜಯಗಳಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿತು. ಗಂಗಾ 68 ಎಸೆತಗಳಲ್ಲಿ 74 ರನ್‌ ಸಿಡಿಸಿದರು. 

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮಧ್ಯಪ್ರದೇಶ 20 ಓವರಲ್ಲಿ 6 ವಿಕೆಟ್‌ಗೆ 129 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಸುಶ್ಮಾ ಪಟೇಲ್‌(50) ಹೋರಾಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ತಂಡದ ಐವರು ಬ್ಯಾಟರ್‌ಗಳು ರನ್‌ಔಟ್‌ ಆದರು. ಆರಂಭಿಕ ಪಂದ್ಯದಲ್ಲಿ ಪಶ್ಚಿಮ ಬಂಗಾಳ ವಿರುದ್ಧ ರಾಜ್ಯ ತಂಡ ಬುಧವಾರ ಗುಜರಾತ್‌ ವಿರುದ್ಧ ಸೆಣಸಾಡಲಿದೆ.