ಮುಂಬೈ(ಮೇ.30): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಮುಂಬೈನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದರ ನಡುವೆ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಆಲ್ರೌಂಡರ್ ಅಕ್ಸರ್ ಪಟೇಲ್ ನಡುವಿನ ಇನ್‌ಸ್ಟಾಗ್ರಾಂ ಪ್ರತಿಕ್ರಿಯೆ ಇದೀಗ ಎಲ್ಲರ ಗಮನಸೆಳೆದಿದೆ. ಬುಮ್ರಾ ವೆಬ್ ಸೀರಿಸ್ ಮಿರ್ಜಾಪುರ್2 ಡೈಲಾಗ್ ಮೂಲಕ ನೀಡಿದ ಪ್ರತಿಕ್ರಿಯೆ ಭಾರಿ ಸದ್ದು ಮಾಡುತ್ತಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಡ್ರಾ/ ಟೈ ಆದ್ರೆ ಏನಾಗುತ್ತೆ? ಕುತೂಹಲಕ್ಕೆ ತೆರೆ ಎಳೆದ ಐಸಿಸಿ

ಜಸ್ಪ್ರೀತ್ ಬುಮ್ರಾ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ರಿಸೆಟ್ ಮೂಡ್ ಆನ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಕ್ಸರ್ ಪಟೇಲ್ ಸಹೀ ಹೇ( ಉತ್ತಮವಾಗಿ ಕಾಣುತ್ತೀರಿ) ಎಂದು ಪ್ರತಿಕ್ರಿಯಿಸಿದ್ದಾರೆ. ಅಕ್ಸರ್ ಪಟೇಲ್‌ಗೆ ಬುಮ್ರಾ ವೆಬ್ ಸೀರಿಸ್ ಡೈಲಾಗ್ ಮೂಲಕ ಉತ್ತರ ನೀಡಿದ್ದಾರೆ .

 

 
 
 
 
 
 
 
 
 
 
 
 
 
 
 

A post shared by jasprit bumrah (@jaspritb1)

ಯೇ ಬಿ ಟೀಕ್ ಹೈ(ಇದು ಕೂಡ ಒಕೆ) ಎಂದು ಮಿರ್ಜಾಪುರ್ 2 ವೆಬ್ ಸೀರಿಸ್‌ನ ಪ್ರಖ್ಯಾತ ಡೈಲಾಗ್ ಮೂಲಕ ಉತ್ತರ ನೀಡಿದ್ದಾರೆ. ಬುಮ್ರಾ ಉತ್ತರ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ವೆಬ್ ಸೀರಿಸ್ ಡೈಲಾಗ್ ಭಾರಿ ಜನಪ್ರಿಯವಾಗಿದೆ. ಸುಪ್ತ ಸಮಯದಲ್ಲಿ ಡೈಲಾಗ್ ಬಳಕೆ ಮಾಡಿದ ಬುಮ್ರಾ ಕಲೆಯನ್ನು ಶ್ಲಾಘಿಸಿದ್ದಾರೆ.

ಭಾರತ-ಕಿವೀಸ್‌ ಟೆಸ್ಟ್‌: ಒಂದು ಟಿಕೆಟ್‌ 2 ಲಕ್ಷ ರುಪಾಯಿಗೆ ಸೇಲ್‌!

ಸದ್ಯ ಬುಮ್ರಾ, ಆಕ್ಸರ್ ಪಟೇಲ್ ಸೇರಿದಂತೆ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಗಾಗಿ ಟೀಂ ಇಂಡಿಯಾ ಮುಂಬೈನಲ್ಲಿ ಬೀಡುಬಿಟ್ಟಿದೆ. ಪ್ರೊಟೋಕಾಲ್ ಪ್ರಕಾರ ಕ್ವಾರಂಟೈನ್‌ಗೆ ಒಳಗಾಗಿದೆ. ಜೂನ್ 2 ರಂದು ಟೀಂ ಇಂಡಿಯಾ ಇಂಗ್ಲೆಂಡ್ ಪ್ರಯಾಣ ಮಾಡಲಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಟೂರ್ನಿಯತ್ತ ಎಲ್ಲರ ಚಿತ್ತ ನೆಟ್ಟಿದೆ. 5 ಟೆಸ್ಟ್ ಪಂದ್ಯಗಳ ಸರಣಿ ಜೂನ್ 18 ರಂದು ಆರಂಭಗೊಳ್ಳಲಿದೆ.