ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ನಾಯಕ, 35 ವರ್ಷಗಳ ಬಳಿಕ ವೇಗಿಗೆ ಸಾರಥ್ಯ!

  • ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್
  • ರೋಹಿತ್ ಅಲಭ್ಯತೆಯಿಂದ ಬುಮ್ರಾಗೆ ನಾಯಕತ್ವ
  • 35 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ವೇಗಿ ನಾಯಕ
Jasprit Bumrah to lead  TeamIndia in fifth Test Match against England Rishabh Pant named wise captain ckm

ಎಡ್ಜ್‌ಬಾಸ್ಟನ್(ಜೂ.30):  ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಆದರೆ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗಿದೆ. ರೋಹಿತ್ ಶರ್ಮಾ ಅಲಭ್ಯತೆಯಿಂದ ಟೆಸ್ಟ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದಾರೆ. ಬಿಸಿಸಿಐ ಬುಮ್ರಾಗೆ ನಾಯಕತ್ವ ನೀಡಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಬುಮ್ರಾ ನಾಯಕ ಅನ್ನೋ ಮಾತುಗಳು ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಇದೀಗ ಅಧಿಕೃತಗೊಂಡಿದೆ. ರಿಷಬ್ ಪಂತ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಬುಮ್ರಾ ಆಯ್ಕೆಯಿಂದ 35 ವರ್ಷಗಳ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ವೇಗಿಯೊಬ್ಬರು ನಾಯಕರಾಗಿದ್ದಾರೆ.

Ind vs Eng ವಿರಾಟ್ ಕೊಹ್ಲಿ ಟ್ವೀಟ್​ಗೆ ಫೋಟೋ ಜರ್ನಲಿಸ್ಟ್​ ಥ್ಯಾಕ್ಸ್ ಹೇಳಿದ್ದೇಕೆ..?

1987ರಲ್ಲಿ ಕಪಿಲ್ ದೇವ್ ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಈ ಬಳಿಕ ಟೆಸ್ಟ್ ತಂಡಕ್ಕೆ ವೇಗಿ ನಾಯಕರಾಗಿಲ್ಲ. ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ನಾಯಕಾಗಿ ಮಿಂಚಿದ್ದರು. ಆದರೆ ವೇಗಿಗೆ ನಾಯಕತ್ವ ಸಿಕ್ಕಿರಲಿಲ್ಲ. ಇದೀಗ 35 ವರ್ಷಗಳ ಬಳಿಕ ವೇಗಿ ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ತಂಡ:
ಜಸ್ಪ್ರೀತ್ ಬುಮ್ರಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ಉಪನಾಯಕ) (WK), ಕೆಎಸ್ ಭರತ್ (WK), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್

ದಿಢೀರ್‌ ರದ್ದುಗೊಂಡಿದ್ದ 5ನೇ ಪಂದ್ಯ!
ಓವಲ್‌ನಲ್ಲಿ ನಡೆದಿದ್ದ 4ನೇ ಟೆಸ್ಟ್‌ ಪಂದ್ಯದ ವೇಳೆ ತಂಡದ ಕೋಚ್‌ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಬ್ಯಾಟಿಂಗ್‌ ಕೋಚ್‌ ಶ್ರೀಧರ್‌, ಫಿಸಿಯೋ ಸೇರಿದಂತೆ ಹಲವರಿಗೆ ಕೋವಿಡ್‌ ತಗುಲಿತ್ತು. ಮತ್ತಷ್ಟುಆಟಗಾರರಿಗೆ ಕೋವಿಡ್‌ ತಗುಲಬಹುದು ಎಂಬ ಆತಂಕದಿಂದ ಟೀಂ ಇಂಡಿಯಾ ಆಟಗಾರರು ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಕೊನೆ ಪಂದ್ಯವನ್ನು ಆಡಲು ಹಿಂದೇಟು ಹಾಕಿದ್ದರು. ಮೊದಲು ಭಾರತ ತಂಡ ಪಂದ್ಯವನ್ನು ಬಿಟ್ಟುಕೊಡಲು ಒಪ್ಪಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಘೋಷಿಸಿದ್ದರೂ, ಕೆಲ ಹೊತ್ತಿನ ಬಳಿಕ ಪಂದ್ಯ ರದ್ದುಗೊಳಿಸಲಾಗಿದೆ, ಮುಂದಿನ ದಿನಗಳಲ್ಲಿ ಪಂದ್ಯ ನಡೆಸಲಾಗುವುದು ಎಂದು ತಿಳಿಸಿತ್ತು.

ಇಂಗ್ಲೆಂಡ್ ಎದುರು 5ನೇ ಟೆಸ್ಟ್ ಗೆಲ್ಲೋದಿರಲಿ, ಡ್ರಾ ಮಾಡಿಕೊಂಡರೆ ಅದೇ ದೊಡ್ಡ ಸಾಧನೆ..!

ಬರ್ಮಿಂಗ್‌ಹ್ಯಾಮ್‌: 15 ವರ್ಷಗಳ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಕಾತರದಲ್ಲಿರುವ ಟೀಂ ಇಂಡಿಯಾ, ಜುಲೈ 1ರಿಂದ ಆರಂಭವಾಗಲಿರುವ ಮರು ನಿಗದಿಯಾದ ಏಕೈಕ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿದೆ. ಹೈವೋಲ್ಟೇಜ್‌ ಪಂದ್ಯಕ್ಕೆ ಈಗಾಗಲೇ ದೀರ್ಘ ಅಭ್ಯಾಸದಲ್ಲಿ ನಿರತರಾಗಿರುವ ಭಾರತೀಯ ಆಟಗಾರರು ಆಂಗ್ಲರನ್ನು ಅವರದೇ ನೆಲದಲ್ಲಿ ಬಗ್ಗುಬಡಿದು ಸರಣಿ ಕೈವಶಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಭಾರತ ತಂಡ ಇಂಗ್ಲೆಂಡ್‌ನಲ್ಲಿ 1971ರಲ್ಲಿ ಮೊದಲ ಬಾರಿ ಟೆಸ್ಟ್‌ ಸರಣಿ ಗೆದ್ದಿದ್ದರೆ, 2ನೇ ಟೆಸ್ಟ್‌ ಸರಣಿ ಜಯ ಒಲಿದಿದ್ದು 1986ರಲ್ಲಿ. ಬಳಿಕ 2007ರಲ್ಲಿ ಪಟೌಡಿ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆ ಬಾರಿ ಭಾರತ ಸರಣಿ ಗೆದ್ದಿತ್ತು. 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಗೆದ್ದಿದ್ದ ಟೀಂ ಇಂಡಿಯಾ, ಬಳಿಕ 3 ಬಾರಿ(2011, 2014 ಹಾಗೂ 2018) ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿದ್ದರೂ ಗೆಲ್ಲಲು ಸಾಧ್ಯವಾಗಿಲ್ಲ. ಆ ಬಳಿಕ ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿತ್ತು. ಸರಣಿಯಲ್ಲಿ ನಡೆದಿದ್ದ 4 ಪಂದ್ಯಗಳಲ್ಲಿ ಪ್ರವಾಸಿ ಭಾರತ 2-1ರಿಂದ ಮುಂದಿದ್ದರೂ ಕೊನೆ ಟೆಸ್ಟ್‌ ಪಂದ್ಯ ನಡೆಯದಿದ್ದರಿಂದ ಸರಣಿ ಭಾರತಕ್ಕೆ ಒಲಿದಿರಲಿಲ್ಲ.
 

Latest Videos
Follow Us:
Download App:
  • android
  • ios