Asianet Suvarna News Asianet Suvarna News

ವೇದಿಕೆಯಲ್ಲಿ ನವಜೋಡಿ ಜಸ್ಪ್ರೀತ್ ಬುಮ್ರಾ-ಸಂಜನಾ ಡ್ಯಾನ್ಸ್; ವಿಡಿಯೋ ವೈರಲ್!

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ನಿರೂಪಕಿ ಕಮ್ ಮಾಡೆಲ್ ಸಂಜನಾ ಗಣೇಶನ್ ವಿವಾಹವಾಗಿದ್ದಾರೆ. ಮದುವೆ ತುಂಬಾ ಸೀಕ್ರೆಟ್ ಆಗಿ ನಡೆದಿತ್ತು. ಇದೀಗ ಮದುವೆ ಫೋಟೋಗಳು, ವಿಡಿಯೋಗಳು ಬಹಿರಂಗವಾಗಿದೆ. ಇದರಲ್ಲಿ ವೇದಿಕೆಯಲ್ಲಿ ಬುಮ್ರಾ ಹಾಗೂ ಸಂಜನಾ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.

Jasprit Bumrah Dances With Wife Sanjana Ganesan in Sangeet Ceremony ckm
Author
Bengaluru, First Published Mar 16, 2021, 9:56 PM IST

ಗೋವಾ(ಮಾ.16):  ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದವೆ ದಿನದ ವರೆಗೂ ಬುಮ್ರಾ ಮದುವೆ ಕುರಿತು ಖಚಿತ ಮಾಹಿತಿ ಯಾರಿಂದಲೂ  ಬಂದಿರಲಿಲ್ಲ. ಮದುವೆ ಬಳಿಕ ಸ್ವತ ಬುಮ್ರಾ ಹಾಗೂ ಸಂಜನಾ ಸಾಮಾಜಿಕ ಜಾಲತಾಣ ಮೂಲಕ ಸಂತಸ ಹಂಚಿಕೊಂಡಿದ್ದರು.

 ಸಂಜನಾ ವರಿಸಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ; ಹೊಸ ಇನ್ನಿಂಗ್ಸ್‌ಗೆ ಕ್ರಿಕೆಟಿಗರ ಶುಭಾಶಯ!.

ಮದುವೆ ಸಮಾರಂಭಕ್ಕೂ ಕೆಲವೇ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮೊಬೈಲ್ ಫೋನ್ ನಿರ್ಬಂಧಿಸಲಾಗಿತ್ತು ಅನ್ನೋ ಮಾಹಿತಿಯೂ ಹೊರಬಿದ್ದಿತ್ತು. ಇದೀಗ ಬುಮ್ರಾ ಹಾಗೂ ಸಂಜನಾ ಮದುವೆ ಕುರಿತ  ವಿಡಿಯೋ ವೈರಲ್ ಆಗಿದೆ. ಬುಮ್ರಾ ಹಾಗೂ ಸಂಜನಾ ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದಾಗಿದ್ದು, ಅಭಿಮಾನಿಗಲು ಬುಮ್ರಾ ಡ್ಯಾನ್ಸ್‌ಗೆ ಫಿದಾ ಆಗಿದ್ದಾರೆ.

 

ಬುಮ್ರಾ ಡ್ಯಾನ್ಸ್‌ನಲ್ಲೂ ಬೌಲಿಂಗ್ ಶೈಲಿ ಕಾಣುತ್ತಿದೆ. ಫೂಟ್ ವರ್ಕ್ ಅದೆ ರೀತಿ ಇದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಜಸ್ಪ್ರೀತ್ ಬುಮ್ರಾ, ಮಾಡೆಲ್ ಹಾಗೂ ಸ್ಟಾರ್ ಸ್ಪೋರ್ಟ್ಸ್ ನಿರೂಪಕಿ ಸಂಜನಾ ಗಣೇಶನ್ ವಿವಾಹವಾಗಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಬುಮ್ರಾ ಹಾಗೂ ಸಂಜನಾ ಡೇಟ್ ಮಾಡುತ್ತಿದ್ದರು ಅನ್ನೋ ಮಾತುಗಳು ಕೇಳಿ ಬಂದಿದೆ. ಆದರೆ ಈ ಕುರಿತು ಬುಮ್ರಾ ಹಾಗೂ ಸಂಜನಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

Follow Us:
Download App:
  • android
  • ios