ಸೆಂಚೂರಿಯನ್‌(ಡಿ.27): ಇಂಗ್ಲೆಂಡ್‌ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್ಸನ್‌, ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರದಿಂದ ಇಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್‌ನಲ್ಲಿ ಆಡುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 150ನೇ ಪಂದ್ಯವನ್ನಾಡಿದರು. ಈ ಸಾಧನೆ ಮಾಡಿದ ಮೊದಲ ವೇಗಿ ಹಾಗೂ ಒಟ್ಟಾರೆ ವಿಶ್ವದ 9ನೇ ಕ್ರಿಕೆಟಿಗ ಎನಿಸಿದರು. 

ಇದನ್ನೂ ಓದಿ: ಐಸಿಸಿ ರ‍್ಯಾಂಕಿಂಗ್ ಪದ್ಧತಿ ಕಸದ ತೊಟ್ಟಿ: ವಾನ್‌

ಆ್ಯಂಡರ್ಸನ್‌ ಎಸೆದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ದ.ಆಫ್ರಿಕಾದ ಆರಂಭಿಕ ಡೀನ್‌ ಎಲ್ಗರ್‌ ಗೋಲ್ಡನ್‌ ಡಕೌಟ್‌ ಆದರು. ಮೊದಲ ಎಸೆತದಲ್ಲಿ ವಿಕೆಟ್‌ ಪಡೆಯುವ ಮೂಲಕ ಆ್ಯಂಡರ್ಸನ್‌ 150ನೇ ಟೆಸ್ಟ್‌ ಪಂದ್ಯವನ್ನು ವಿಶೇಷವಾಗಿಸಿಕೊಂಡರು.

ಇದನ್ನೂ ಓದಿ: ಹಿಂದು ಕನೇರಿಯಾಗೆ ಪಾಕ್‌ ಕ್ರಿಕೆಟ್‌ ತಂಡದಿಂದ ಧಾರ್ಮಿಕ ಕಿರುಕುಳ!

ವೇಗಿಗಳ ಆರ್ಭಟ:
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವೇಗದ ಬೌಲರ್‌ಗಳು ಮೊದಲ ದಿನವೇ ಆರ್ಭಟ ನಡೆಸಿದ್ದಾರೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ ಕ್ವಿಂಟನ್‌ ಡಿ ಕಾಕ್‌ (95) ಹೊರತಾಗಿಯೂ ಮೊದಲ ದಿನದಂತ್ಯಕ್ಕೆ 9 ವಿಕೆಟ್‌ಗೆ 277 ರನ್‌ಗಳಿಸಿದೆ. ಇಂಗ್ಲೆಂಡ್‌ ಪರ ಸ್ಯಾಮ್‌ ಕರ್ರನ್‌ 4, ಸ್ಟುವರ್ಟ್‌ ಬ್ರಾಡ್‌ 3, ಆ್ಯಂಡರ್ಸನ್‌, ಆರ್ಚರ್‌ ತಲಾ 1 ವಿಕೆಟ್‌ ಪಡೆದಿದ್ದಾರೆ.

ಸ್ಕೋರ್‌: ದಕ್ಷಿಣ ಆಫ್ರಿಕಾ 277/9
(ಮೊದಲ ದಿನದಂತ್ಯಕ್ಕೆ)