ಐಸಿಸಿ ರ‍್ಯಾಂಕಿಂಗ್ ಪದ್ಧತಿ ಕಸದ ತೊಟ್ಟಿ: ವಾನ್
ಐಸಿಸಿ ರ‍್ಯಾಂಕಿಂಗ್ ಪ್ರಕಟಣೆಗಾಗಿ ಕ್ರಿಕೆಟಿಗರು ಕಾಯುತ್ತಾರೆ. ಯಾವ ಸ್ಥಾನದಲ್ಲಿದ್ದೇನೆ, ಯಾವ ರೀತಿ ಪ್ರದರ್ಶನ ನೀಡಬೇಕು ಅನ್ನೋ ಕುತೂಹಲಕ್ಕೆ ರ‍್ಯಾಂಕಿಂಗ್ ಉತ್ತರ ನೀಡಲಿದೆ. ಆದರೆ ಇದೇ ರ‍್ಯಾಂಕಿಂಗ್ ಪದ್ದತಿಯನ್ನ ಇಂಗ್ಲೆಂಡ್ ಮಾಜಿ ನಾಯಕ ವಾನ್ ವ್ಯಂಗ್ಯವಾಡಿದ್ದಾರೆ.
ಮೆಲ್ಬರ್ನ್(ಡಿ.27): ಮಹತ್ವದ ಸರಣಿ, ವರ್ಷಾಂತ್ಯ ಸೇರಿದಂತೆ ಪ್ರಮುಖ ಘಟ್ಟಗಳಲ್ಲಿ ಐಸಿಸಿ ಕ್ರಿಕೆಟ್ ರ‍್ಯಾಂಕಿಂಗ್ ಪ್ರಕಟಿಸುತ್ತದೆ. ಕ್ರಿಕೆಟಿಗರು ಅಗ್ರಸ್ಥಾನಕ್ಕೇರಲು ಕಠಿಣ ಪ್ರಯತ್ನ ನಡೆಸುತ್ತಾರೆ. ಇಷ್ಟೇ ಅಲ್ಲ ಐಸಿಸಿ ರ‍್ಯಾಂಕಿಂಗ್‌ಗಾಗಿ ಕಾಯುತ್ತಾರೆ. ಆದರೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಐಸಿಸಿ ರ‍್ಯಾಂಕಿಂಗ್ ಪದ್ದತಿಯನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ICC ಏಕದಿನ ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಕೊಹ್ಲಿ, ಬುಮ್ರಾ
ಐಸಿಸಿ ರಾರಯಂಕಿಂಗ್ ಪದ್ಧತಿಯೇ ಒಂದು ಕಸದ ತೊಟ್ಟಿಯಂತಾಗಿದೆ ಎಂದು ಮೈಕೆಲ್ ವಾನ್ ತೀವ್ರವಾದ ಪದಗಳಿಂದ ಲೇವಡಿ ಮಾಡಿದ್ದಾರೆ. ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ ವೀಕ್ಷಕ ವಿವರಣೆಗಾರರಾಗಿ ಗುರುತಿಸಿಕೊಂಡಿರುವ ಮೈಕೆಲ್ ವಾನ್, ವೈಯಕ್ತಿಕವಾಗಿ ನಾನು ಐಸಿಸಿ ರಾರಯಂಕಿಂಗ್ ಪದ್ಧತಿಯನ್ನು ವಿರೋಧಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿಗೆ ಬಡ್ತಿ!
ನನ್ನ ಪ್ರಕಾರ ಅದೊಂದು ಕಸದ ತೊಟ್ಟಿಇದ್ದಂತೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಕಳೆದ 2 ವರ್ಷದಲ್ಲಿ ಪಂದ್ಯಗಳನ್ನೇ ಗೆಲ್ಲದೇ 2 ಮತ್ತು 4ನೇ ಸ್ಥಾನದಲ್ಲಿವೆ. ಇದು ಹೇಗೆ ಸಾಧ್ಯವಾಗುತ್ತದೆ ಎನ್ನುವುದು ಅರ್ಥವಾಗುವುದಿಲ್ಲ ಎಂದಿರುವುದಾಗಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.