ಟಿ-20 ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ರಿಂದ ಶ್ರೇಯಸ್ ಅಯ್ಯರ್ ವಹಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ, ಆ ಇಬ್ಬರಿಂದ ಪಡೆದ ಅಮೂಲ್ಯ ಮಾರ್ಗದರ್ಶನವು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಶ್ರೇಯಸ್ ಬಹಿರಂಗಪಡಿಸಿದ್ದಾರೆ. ಅವರು ಯಾರು ಗೊತ್ತಾ?

ಕಳೆದ ಬಾರಿ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಸೂರ್ಯಕುಮಾರ ಬದಲಿಗೆ ಶ್ರೇಯಸ್‌ ಅವರಿಗೆ ಟೀಮ್‌ ಇಂಡಿಯಾ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಇದೀಗ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಶ್ರೇಯಸ್ ಪ್ರಮುಖ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ, ಇಲ್ಲಿ ಶ್ರೇಯಸ್ ರೋಹಿತ್‌ ಹಾಗೂ ಸೂರ್ಯಕುಮಾರ ಹೆಸರು ಉಲ್ಲೇಖ ಮಾಡಿದ್ದಾದರೂ ಏಕೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಸಿದ ಸೂರ್ಯ ಫಾರ್ಮ!

ಈ ಹಿಂದೆ ತಂಡವನ್ನು ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಶ್ರೇಯಸ್ ಅವರಿಗೆ ಟೀಮ್ ಇಂಡಿಯಾದ ಜವಾಬ್ದಾರಿ ನೀಡಲಾಯಿತು. ಸೂರ್ಯಕುಮಾರ್ ಅವರ ಬ್ಯಾಟಿಂಗ್ ಫಾರ್ಮ್ ಕುಸಿತ ಮತ್ತು ಆಯ್ಕೆ ಸಮಿತಿಯ ದೀರ್ಘಾವಧಿಯ ಪ್ರಾಜೆಕ್ಟ್ ಗಮನದಲ್ಲಿಟ್ಟುಕೊಂಡು ಈ ನಾಯಕತ್ವ ಬದಲಾವಣೆ ಮಾಡಲಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ. ಆದ್ದರಿಂದ ತಂಡದಲ್ಲಿ ಹೊಸ ಮುಖಗಳ ಉದಯವಾಗಲಿರುವುದು ಈಗ ಖಚಿತವಾಗಿದೆ.

ಶ್ರೇಯಸ್‌ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪ್ರವಾಸಕ್ಕೆ ಹೊರಡುವ ಮೊದಲು ಹೊಸ ಬದಲಾವಣೆಗಳೊಂದಿಗೆ ನಾಯಕತ್ವ ವಹಿಸಿಕೊಳ್ಳುತ್ತಿರುವ ಶ್ರೇಯಸ್ ಅಯ್ಯರ್, ಮಾಜಿ ಟಿ20 ನಾಯಕರಾದ ಸೂರ್ಯಕುಮಾರ್ ಯಾದವ್ ಹಾಗೂ ಹಿಟ್‌ ಮ್ಯಾನ್ ರೋಹಿತ್ ಶರ್ಮಾ ಕುರಿತು ಅಚ್ಚರಿ ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ. ಅದೇನು ಎಂದು ನೋಡೋಣ ಬನ್ನಿ.

ಸಂದರ್ಶನದಲ್ಲಿ ಶ್ರೇಯಸ್‌ ಹೇಳಿದ್ದಿಷ್ಟೇ!

ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಶ್ರೇಯಸ್ ಅಯ್ಯರ್, ದೇಶೀಯ ಕ್ರಿಕೆಟ್‌ನೊಂದಿಗೆ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಬಹಳ ನಿಕಟ ಸಂಪರ್ಕ ಹೊಂದಿದ್ದೇನೆ. ಅಲ್ಲದೇ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ತಮಗೆ ಅಮೂಲ್ಯ ಮಾರ್ಗದರ್ಶನ ನೀಡಿದ್ದರು ಎಂದು ಹೇಳುವ ಮೂಲಕ ಶ್ರೇಯಸ್ ಹೇಳಿಕೊಂಡಿದ್ದಾರೆ.

ರೋಹಿತ್‌ ಕುರಿತು ಹೇಳಿದ್ದೇನು?

ತಂಡದ ನಿರ್ವಹಣೆ ಹೇಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ವಿಭಿನ್ನ ಕಷ್ಟಕರ ಸಂದರ್ಭಗಳಲ್ಲಿ ಆಟಗಾರರ ಮನಸ್ಥಿತಿ ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಸೂರ್ಯ ಮತ್ತು ರೋಹಿತ್ ಬಹಳ ಮುಖ್ಯ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾರ್ಗದರ್ಶನ ನನ್ನ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡಿದೆ ಎಂದು ಶ್ರೇಯಸ್ ಅಯ್ಯರ್‌ ಹೇಳಿದ್ದಾರೆ.

ನವೋಧ್ಯಾಯದ ಆರಂಭ!

ಗೌತಮ್ ಗಂಭೀರ್ ಅವರ ಪಾತ್ರವನ್ನು ಉಲ್ಲೇಖಿಸಿ ಮಾತನಾಡಿದ ಶ್ರೇಯಸ್, ನಾವು ಈ ಹಿಂದೆ ವಿಶ್ವ ಚಾಂಪಿಯನ್ ಆಗಿದ್ದೆವೆ, ಅದೂ ನಿಜ. ಆದರೆ ಈಗ ಹೊಸ ಅಧ್ಯಾಯ ಆರಂಭವಾಗುತ್ತಿದೆ. ನನ್ನ ನಾಯಕತ್ವದಲ್ಲಿ, ನಾವು ಮತ್ತೊಮ್ಮೆ 'ಶೂನ್ಯ'ದಿಂದ ಪ್ರಾರಂಭಿಸಿ ಯಶ ಗಳಿಸುತ್ತೇವೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಭಾರತ ಹೇಗೆ ಪ್ರದರ್ಶನ ತೋರಲಿದೆ ಎನ್ನುವುದರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿವೆ.