ಐಪಿಎಲ್ 2025ರ ಕಾಮೆಂಟರಿ ತಂಡದಿಂದ ಇರ್ಫಾನ್ ಪಠಾಣ್ ಅವರನ್ನು ಕೈಬಿಡಲಾಗಿದೆ. ಕೆಲವು ಆಟಗಾರರ ಬಗ್ಗೆ ವೈಯಕ್ತಿಕವಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಇದೀಗ ಇರ್ಫಾನ್ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

Irfan Pathan Excluded IPL 2025 Commentary Team: ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಸೀಸನ್‌ಗೆ ಕ್ರಿಕೆಟ್‌ ವಿಶ್ಲೇಷಕರ ಪಟ್ಟಿ ಎಲ್ಲರಿಗೂ ಅಚ್ಚರಿ ನೀಡಿದೆ. ಅದಕ್ಕೆ ಕಾರಣವೂ ಉಂಟು. ಕ್ರಿಕೆಟ್‌ ವಿಶ್ಲೇಷಕರಾಗಿ ಹೆಸರು ಮಾಡಿರುವ ಎಲ್ಲರ ಹೆಸರೂ ಕೂಡ ಅಂದಾಜು ಎರಡೂವರೆ ತಿಂಗಳು ಕಾಲ ನಡೆಯಲಿರುವ ವಿಶ್ವದ ಶ್ರೀಮಂತ ಟಿ20 ಲೀಗ್‌ನ ಪ್ಯಾನೆಲ್‌ನಲ್ಲಿದೆ. ಅದರೆ, ಅನುಭವಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರ ಹೆಸರು ಎಲ್ಲಿಯೂ ಕಂಡಿಲ್ಲ. ಹಿಂದಿ, ಇಂಗ್ಲೀಷ್‌ ಯಾವ ಭಾಷೆಯ ಕಾಮೆಂಟರಿ ಟೀಮ್‌ನಲ್ಲೂ ಅವರ ಹೆಸರಿಲ್ಲ.ಸಾಮಾನ್ಯವಾಗಿ ಹಿಂದಿ ಕಾಮೆಂಟರಿ ಟೀಮ್‌ನಲ್ಲಿ ಇರ್ಫಾನ್‌ ಪಠಾಣ್‌ ಇರುತ್ತಿದ್ದರು. ಆದರೆ, ಈ ಬಾರಿ ಹಿಂದಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ಪ್ರತಿ ಬಾರಿಯೂ ಇರುವ ಎಲ್ಲಾ ಹೆಸರುಗಳಿದ್ದವು, ಇರ್ಫಾನ್ ಅವರ ಹೆಸರನ್ನು ಮಾತ್ರವೇ ಕೈಬಿಡಲಾಗಿದೆ. ವರದಿಗಳ ಪ್ರಕಾ, ಕೆಲವು ಭಾರತೀಯ ಆಟಗಾರರ ವಿರುದ್ಧ ಕಾಮೆಂಟ್ ಮಾಡಿದ್ದಕ್ಕಾಗಿ ಇರ್ಫಾನ್ ಅವರನ್ನು ಕೈಬಿಡಲಾಗಿದೆ.

ಇದೇ ಕಾರಣಕ್ಕಾಗಿ ಇರ್ಫಾನ್‌ ಪಠಾಣ್‌ ಔಟ್‌: ವರದಿಗಳ ಪ್ರಕಾರ, ಅನೇಕ ಆಟಗಾರರು ಇರ್ಫಾನ್ ಉದ್ದೇಶಪೂರ್ವಕವಾಗಿ ತಮ್ಮ ಬಗ್ಗೆ ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಒಬ್ಬ ಆಟಗಾರ ಪಠಾಣ್ ಅವರ ಸಂಖ್ಯೆಯನ್ನು ಕೂಡ ಬ್ಲಾಕ್‌ ಮಾಡಿದ್ದಾರೆ ಎಂಬ ಊಹಾಪೋಹವೂ ಇದೆ. ಕಳೆದ 2 ವರ್ಷಗಳಿಂದ ಇರ್ಫಾನ್ ಪಠಾಣ್ ಕೆಲವು ಆಟಗಾರರ ವಿರುದ್ಧ ವೈಯಕ್ತಿಕವಾಗಿ ಕಾಮೆಂಟ್‌ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದು ಐಪಿಎಲ್‌ನ ಉನ್ನತ ಅಧಿಕಾರಿಗಳಿಗೆ ಇಷ್ಟವಾಗಲಿಲ್ಲ.

ಶಿಕ್ಷೆಯಾಗಿ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗುಳಿದ ಮೊದಲ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಲ್ಲ. ಇದಕ್ಕೂ ಮೊದಲು, ಭಾರತೀಯ ಕ್ರಿಕೆಟಿಗರಾದ ಸಂಜಯ್ ಮಂಜ್ರೇಕರ್ ಮತ್ತು ಕ್ರಿಕೆಟ್ ತಜ್ಞ ಹರ್ಷ ಭೋಗ್ಲೆ ವಿರುದ್ಧಇಂಥದ್ದೇ ದೂರುಗಳು ದಾಖಲಾಗಿದ್ದವು. 2020 ರಲ್ಲಿ, ಭಾರತ vs ದಕ್ಷಿಣ ಆಫ್ರಿಕಾ ಸರಣಿಯ ಮೊದಲು, ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿ ತಂಡದಿಂದ ವಜಾ ಮಾಡಿತ್ತು. 2019 ರಲ್ಲಿ, ಸೌರವ್ ಗಂಗೂಲಿ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಕ್ಕಾಗಿ ಹರ್ಷ ಭೋಗ್ಲೆ ಶಿಕ್ಷೆಯನ್ನು ಎದುರಿಸಬೇಕಾಯಿತು.

ಐಪಿಎಲ್ 2025 ನೋಡುವ ಮುನ್ನ ನಿಮಗೆ ಈ 5 ಹೊಸ ರೂಲ್ಸ್ ಗೊತ್ತಿರಲಿ!

ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಇರ್ಫಾನ್‌: ಐಪಿಎಲ್ 2025 ರ ಕಾಮೆಂಟರಿ ತಂಡದಿಂದ ತೆಗೆದುಹಾಕಲ್ಪಟ್ಟ ನಂತರ, ಇರ್ಫಾನ್ ಪಠಾಣ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವುದನ್ನು ದೃಢಪಡಿಸಿದರು. ಅವರು ತಮ್ಮ ಕಾರ್ಯಕ್ರಮಕ್ಕೆ 'ಸಿಧಿ ಬಾತ್ ವಿತ್ ಇರ್ಫಾನ್ ಪಠಾಣ್' ಎಂದು ಹೆಸರಿಸಿದ್ದಾರೆ. ಅಭಿಮಾನಿಗಳು ಸಾಧ್ಯವಾದಷ್ಟು ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.

ವೆಂಕಿಯಿಂದ ಕೊಹ್ಲಿವರೆಗೆ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಈ ಆಟಗಾರರ ಮೇಲೆ ಕಣ್ಣಿಡಿ!