ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಯೂಸುಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ರನೌಟ್ ವಿಚಾರವಾಗಿ ಮೈದಾನದಲ್ಲಿಯೇ ತಾಳ್ಮೆ ಕಳೆದುಕೊಂಡ ಅಪರೂಪದ ಘಟನೆ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಭಾರತೀಯ ಕ್ರಿಕೆಟ್‌ನ ರಾಮ ಲಕ್ಷ್ಮಣರಂತಿದ್ದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಜೋಡಿ ಹಲವಾರು ಬಾರಿ ಜತೆಯಾಗಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಮೈದಾನದೊಳಗೆ ಇದ್ದಾಗಲೂ ಹಾಗೂ ಮೈದಾನದಾಚೆ ಕೂಡಾ ಒಬ್ಬರಿಗೊಬ್ಬರು ಗೌರವಿಸಿಕೊಂಡೇ ಬಂದಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೀಗ ಈ ಇಬ್ಬರು ಕ್ರಿಕೆಟ್ ಸಹೋದರರು ವರ್ಲ್ಡ್ ಚಾಂಪಿಯನ್‌ಶಿಪ್ ಅಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಸೌಥ್ ಆಫ್ರಿಕಾ ಚಾಂಪಿಯನ್ಸ್ ಎದುರಿನ ಪಂದ್ಯದಲ್ಲಿ ಮೈದಾನದಲ್ಲಿಯೇ ತಾಳ್ಮೆ ಕಳೆದುಕೊಂಡ ಅಪರೂಪದ ಘಟನೆ ನಡೆದಿದೆ.
ಹೌದು, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಎದುರಿನ ಪಂದ್ಯದಲ್ಲಿ ಡೇಲ್ ಸ್ಟೇಯ್ನ್ ಎಸೆದ 19ನೇ ಓವರ್‌ನಲ್ಲಿ ಇರ್ಫಾನ್ ಪಠಾಣ್ ಲೋಪ್ಟೆಡ್ ಶಾಟ್ ಬಾರಿಸಿದರು. ಈ ವೇಳೆ ಎರಡನೇ ರನ್ ಕದಿಯುವ ಯತ್ನದಲ್ಲಿ ಇರ್ಫಾನ್ ಹಾಗೂ ಯೂಸುಫ್ ನಡುವೆ ಗೊಂದಲ ಉಂಟಾಗಿದ್ದರಿಂದ ಇರ್ಫಾನ್ ಪಠಾಣ್ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಲ್ಲ: ಬಿಸಿಸಿಐ ಖಡಕ್ ತೀರ್ಮಾನ..!
ಇರ್ಫಾನ್ ಪಠಾಣ್, ಅನಾಯಾಸವಾಗಿ ಎರಡನೇ ರನ್ ಕದಿಯುವ ಯತ್ನ ನಡೆಸಿದರು. ಆದರೆ ಯೂಸುಫ್ ಪಠಾಣ್ ಕೊಂಚ ತಡಬಡಾಯಿಸಿದ್ದರಿಂದ ಅನಾವಶ್ಯಕವಾಗಿ ಇರ್ಫಾನ್ ಪಠಾಣ್ ರನೌಟ್ ಆಗುವ ಮೂಲಕ ವಿಕೆಟ್ ಕೈಚೆಲ್ಲಿದರು. ಇರ್ಫಾನ್ ಪಠಾಣ್ ಔಟ್ ಆಗುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡು ಸಹೋದರ ಯೂಸುಫ್ ಪಠಾಣ್ ಅವರ ಮೇಲೆ ರೇಗಾಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆ ಹೊತ್ತಿಗಾಗಲೇ ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವು ಜಯಿಸಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಬಾರಿಸಿತ್ತು. ಇನ್ನು ಭಾರತ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಕನಿಷ್ಠ 153 ರನ್ ಬಾರಿಸಬೇಕಿತ್ತು. ಭಾರತ ತಂಡವು ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸುವ ಮೂಲಕ ಪಂದ್ಯ ಸೋತರೂ, ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಯಶಸ್ವಿಯಾಯಿತು.
ರಾಹುಲ್ ದ್ರಾವಿಡ್‌ಗೆ ಗಾಳ ಹಾಕಿದ ಈ ಐಪಿಎಲ್ ಫ್ರಾಂಚೈಸಿ..! ಆಫರ್ ಒಪ್ತಾರಾ 'ದಿ ವಾಲ್'..?
ದೊಡ್ಡ ಮೊತ್ತ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು 11.3 ಓವರ್‌ಗಳಲ್ಲಿ 77 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 5 ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆದರೆ ಕೊನೆಯಲ್ಲಿ ಯೂಸುಫ್ ಪಠಾಣ್ ಅಜೇಯ 54 ಹಾಗೂ ಇರ್ಫಾನ್ ಪಠಾಣ್ 35 ರನ್ ಸಿಡಸುವ ಮೂಲಕ ತಂಡ ಸೆಮೀಸ್‌ಗೆ ಅರ್ಹತೆ ಪಡೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
