ಇರಾನಿ ಕಪ್ ಟೂರ್ನಿಯಲ್ಲಿ ಶೇಷ ಭಾರತ ಪಡೆಗೆ ಮೊದಲ ಇನಿಂಗ್ಸ್ ಮುನ್ನಡೆಮೊದಲ ಇನಿಂಗ್ಸ್‌ನಲ್ಲಿ ಮಧ್ಯ ಪ್ರದೇಶ ಎದುರು 190 ರನ್‌ಗಳ ಮುನ್ನಡೆ ಪಡೆದ ರೆಸ್ಟ್ ಆಫ್ ಇಂಡಿಯಾಮತ್ತೊಂದು ಶತಕದತ್ತ ಯಶಸ್ವಿ ಜೈಸ್ವಾಲ್ ದಾಪುಗಾಲು
ಗ್ವಾಲಿಯರ್(ಮಾ.04): ಮಧ್ಯಪ್ರದೇಶ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ(ರೆಸ್ಟ್ ಆಫ್ ಇಂಡಿಯಾ) ಬೃಹತ್ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್್ಸನಲ್ಲಿ 484 ರನ್ ಗಳಿಸಿದ್ದ ಶೇಷ ಭಾರತ, ಮಧ್ಯಪ್ರದೇಶವನ್ನು 294ಕ್ಕೆ ನಿಯಂತ್ರಿಸಿ 190 ರನ್ ಮುನ್ನಡೆ ಪಡೆಯಿತು. ಹಷ್‌ರ್ ಗವಾಲಿ 54 ರನ್‌ಗೆ ವಿಕೆಟ್ ಒಪ್ಪಿಸಿದ ಬಳಿಕ ಯಶ್ ದುಬೆ-ಶರನ್ಸ್ ಜೈನ್(66) ನಡುವೆ 6ನೇ ವಿಕೆಟ್ಗೆ 96 ರನ್ ಜೊತೆಯಾಟ ಮೂಡಿಬಂತು. ದುಬೆ 109 ರನ್ ಗಳಿಸಿ ಔಟಾದರು. ಪುಲ್ಕಿತ್ ನಾರಂಗ್ 4, ನವ್ದೀಪ್ ಸೈನಿ 3 ವಿಕೆಟ್ ಪಡೆದರು.
ಬಳಿಕ 2ನೇ ಇನ್ನಿಂಗ್‌್ಸ ಆರಂಭಿಸಿದ ಶೇಷ ಭಾರತ 3ನೇ ದಿನದಂತ್ಯಕ್ಕೆ 1 ವಿಕೆಟ್ಗೆ 85 ರನ್ ಗಳಿಸಿದ್ದು, ಒಟ್ಟು 275 ರನ್ ಮುನ್ನಡೆಯಲ್ಲಿದೆ. ನಾಯಕ ಮಯಾಂಕ್ ಅಗರ್ವಾಲ್(00) 2ನೇ ಇನ್ನಿಂಗ್್ಸನಲ್ಲೂ ವಿಫಲರಾದರು. ಯಶಸ್ವಿ ಜೈಸ್ವಾಲ್(53 ಎಸೆತಗಳಲ್ಲಿ 58), ಅಭಿಮನ್ಯು ಈಶ್ವರನ್(26) ಕ್ರೀಸ್ನಲ್ಲಿದ್ದಾರೆ.
ಶಸ್ತ್ರಚಿಕಿತ್ಸೆಗಾಗಿ ಬುಮ್ರಾ ನ್ಯೂಜಿಲೆಂಡ್‌ಗೆ ಪ್ರಯಾಣ?
ನವದೆಹಲಿ: ಬೆನ್ನು ನೋವಿನಿಂದಾಗಿ ಕಳೆದ 5 ತಿಂಗಳುಗಳಿಂದ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದಿರುವ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ತೆರಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನ್ಯೂಜಿಲೆಂಡ್ ಮಾಜಿ ವೇಗಿ ಶೇನ್ ಬಾಂಡ್, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಸೇರಿದಂತೆ ಪ್ರಮುಖ ಕ್ರಿಕೆಟಿಗರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ರೋವನ್ ಶೌಟೆನ್ ಅವರು ಬೂಮ್ರಾಗೂ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಬುಮ್ರಾ ಸರ್ಜರಿ ಬಳಿಕ ಸುಮಾರು 20-24 ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದಲೂ ಬುಮ್ರಾ ಹೊರಬೀಳುವ ಸಾಧ್ಯತೆ ಇದೆ.
ರಾಜ್ಯದ ಮಾಜಿ ಕ್ರಿಕೆಟಿಗ ಪಿ.ಎಸ್.ವಿಶ್ವನಾಥ್ ನಿಧನ
ಬೆಂಗಳೂರು: ರಾಜ್ಯದ ಮಾಜಿ ಕ್ರಿಕೆಟಿಗ, ಆಡಳಿತಗಾರ ಪಿ.ಎಸ್.ವಿಶ್ವನಾಥ್(96) ಅವರು ಶುಕ್ರವಾರ ನಿಧನರಾದರು. 1926ರಲ್ಲಿ ಜನಿಸಿದ್ದ ಅವರು, 1948-49ರಿಂದ 1957-58ರ ಅವಧಿಯಲ್ಲಿ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. ಬಳಿಕ ಮ್ಯಾಚ್ ರೆಫ್ರಿ, ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಬೆಂಗಳೂರು ಮುನ್ಸಿಪಾಲಿಟಿಯ ಮೊದಲ ಅಧ್ಯಕ್ಷ ಪುಟ್ಟಣ್ಣ ಚೆಟ್ಟಿಅವರ ಮೊಮ್ಮಗ. ವಿಶ್ವನಾಥ್‌ರ ನಿಧನಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
Ind vs Aus ಮೂರೇ ದಿನಕ್ಕೆ ಮುಗಿದ ಪಂದ್ಯದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ..!
2ನೇ ಏಕದಿನ: ಬಾಂಗ್ಲಾ ವಿರುದ್ಧ ಗೆದ್ದ ಇಂಗ್ಲೆಂಡ್
ಢಾಕಾ: ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 132 ರನ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಇಂಗ್ಲೆಂಡ್ ಜೇಸನ್ ರಾಯ್(124 ಎಸೆತಗಳಲ್ಲಿ 132ರ ಶತಕದ ನೆರವಿನಿಂದ 50 ಓವರಲ್ಲಿ 7 ವಿಕೆಟ್ಗೆ 326 ರನ್ ಕಲೆಹಾಕಿತು. ಬಟ್ಲರ್ 76, ಮೊಯೀನ್ ಅಲಿ 42, ಸ್ಯಾಮ್ ಕರ್ರನ್ 33 ರನ್ ಕೊಡುಗೆ ನೀಡಿದರು. ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾ 44.4 ಓವರ್ಗಳಲ್ಲಿ 194ಕ್ಕೆ ಆಲೌಟಾಯಿತು. ಶಕೀಬ್(58) ಹೊರತುಪಡಿಸಿ ಉಳಿದವರು ಮಿಂಚಲಿಲ್ಲ. ಕರ್ರನ್, ಆದಿಲ್ ರಶೀದ್ ತಲಾ 4 ವಿಕೆಟ್ ಕಿತ್ತರು.
