ಇಂದಿನಿಂದ ಇರಾನಿ ಕಪ್ ಟೂರ್ನಿಯಲ್ಲಿ ಶೇಷ ಭಾರತ-ಸೌರಾಷ್ಟ್ರ ನಡುವೆ ಕಾದಾಟಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಶೇಷ ಭಾರತ ಭರ್ಜರಿ ಆರಂಭ5 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡ ಸೌರಾಷ್ಟ್ರ

ರಾಜ್‌ಕೋಟ್‌(ಅ.01): ಇರಾನಿ ಕಪ್‌ ಟೂರ್ನಿಯಲ್ಲಿ ಶೇಷ ಭಾರತದ ಎದುರು ಮೊದಲು ಬ್ಯಾಟಿಂಗ್ ಮಾಡಲಿಳಿದ ಸೌರಾಷ್ಟ್ರ ತಂಡವು ಆರಂಭಿಕ ಆಘಾತ ಅನುಭವಿಸಿದೆ. ಎಡಗೈ ವೇಗಿ ಮುಕೇಶ್ ಕುಮಾರ್ ಮಾರಕ ದಾಳಿಗೆ ತತ್ತರಿಸಿದ ಸೌರಾಷ್ಟ್ರ ತಂಡವು 5 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಆರಂಭಿಕ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ 6 ಓವರ್ ಅಂತ್ಯದ ವೇಳೆಗೆ ಸೌರಾಷ್ಟ್ರ ತಂಡವು 4 ವಿಕೆಟ್ ಕಳೆದುಕೊಂಡು ಕೇವಲ 12 ರನ್‌ಗಳನ್ನು ಗಳಿಸಿದೆ.

ಇಲ್ಲಿನ ರಾಜ್‌ಕೋಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ಹನುಮ ವಿಹಾರಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ರೆಸ್ಟ್‌ ಆಫ್ ಇಂಡಿಯಾದ ಬೌಲರ್‌ಗಳು ಯಶಸ್ವಿಯಾದರು. ಆರಂಭಿಕ ಬ್ಯಾಟರ್ ಹಾರ್ವಿಕ್ ದೇಸಾಯಿ ಶೂನ್ಯ ಸುತ್ತಿದರೆ, ವಿಕೆಟ್ ಕೀಪರ್ ಬ್ಯಾಟರ್ ಸ್ನೆಹ್ ಪಟೇಲ್ ಶೂನ್ಯ ಸುತ್ತಿದರು. ಇನ್ನು ಚಿರಾಗ್ ಜಾನಿ ಖಾತೆ ತೆರೆಯುವ ಮುನ್ನವೇ ಮುಕೇಶ್‌ಗೆ ಮೂರನೇ ಬಲಿಯಾದರು. ಇನ್ನು ಚೇತೇಶ್ವರ್ ಪೂಜಾರ ಕೂಡಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ಅದ್ಯ ಶೆಲ್ಡನ್‌ ಜಾಕ್ಸನ್‌ ಹಾಗೂ ಅರ್ಪಿತ್ ವಸುವಾಡ ಕ್ರೀಸ್‌ನಲ್ಲಿದ್ದಾರೆ.

ಭಾರತ ತಂಡಕ್ಕೆ ಕಾಲಿಡಲು ಎದುರು ನೋಡುತ್ತಿರುವ ಯುವ ಕ್ರಿಕೆಟಿಗರು, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಕಾತರಿಸುತ್ತಿರುವ ಬ್ಯಾಟರ್‌ಗಳಾದ ಚೇತೇಶ್ವರ್‌ ಪೂಜಾರ, ಮಯಾಂಕ್‌ ಅಗರ್‌ವಾಲ್‌ ಶನಿವಾರದಿಂದ ಆರಂಭವಾದ ಇರಾನಿ ಟ್ರೋಫಿ ಪ್ರಥಮ ದರ್ಜೆ ಪಂದ್ಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. 2019-20ರ ರಣಜಿ ಚಾಂಪಿಯನ್‌ ಹಾಗೂ ಶೇಷ ಭಾರತ(ರೆಸ್ಟ್‌ ಆಫ್‌ ಇಂಡಿಯಾ) ನಡುವಿನ ಪಂದ್ಯಕ್ಕೆ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ(ಎಸ್‌ಸಿಎ) ಕ್ರೀಡಾಂಗಣ ಆತಿಥ್ಯ ವಹಿಸಿದೆ.

Scroll to load tweet…

ಮುಂಬರುವ ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸೌರಾಷ್ಟ್ರದ ಚೇತೇಶ್ವರ್‌ ಪೂಜಾರ ಎದುರು ನೋಡುತ್ತಿದ್ದ ಪೂಜಾರ, ಆರಂಭಿಕ ವೈಫಲ್ಯ ಅನುಭವಿಸಿದ್ದಾರೆ. ಕುಲ್ದೀಪ್ ಯಾದವ್‌ ಎಸೆತದಲ್ಲಿ ಹನುಮ ವಿಹಾರಿಗೆ ಕ್ಯಾಚಿತ್ತು ಪೂಜಾರ ಪೆವಿಲಿಯನ್ ಸೇರಿದ್ದಾರೆ. ಪೂಜಾರ ಕೇವಲ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಸೌರಾಷ್ಟ್ರ ತಂಡಕ್ಕೆ ತಮ್ಮ ತವರು ಮೈದಾನದಲ್ಲಿ ಶೇಷ ಭಾರತದ ವೇಗಿಗಳಾದ ಉಮ್ರಾನ್‌ ಮಲಿಕ್‌, ಕುಲ್ದೀಪ್‌ ಸೆನ್‌, ಮುಕೇಶ್ ಕುಮಾರ್, ಸ್ಪಿನ್ನರ್‌ಗಳಾದ ಜಯಂತ್ ಯಾದವ್ ಹಾಗೂ ಸೌರಭ್‌ ಕುಮಾರ್‌ರಿಂದ ಪ್ರಬಲ ಪೈಪೋಟಿ ಎದುರಾಗಲಿದೆ.

ICC T20 World Cup: 'ಮೊಹಮ್ಮದ್ ಶಮಿ ಪವರ್‌ ಪ್ಲೇನಲ್ಲೇ ವಿಕೆಟ್‌ ಕಬಳಿಸಬಲ್ಲರು'

ಮತ್ತೊಂದೆಡೆ ಶೇಷ ಭಾರತ ತಂಡದಲ್ಲಿ ಐವರು ತಜ್ಞ ಆರಂಭಿಕರಿದ್ದು ತಂಡದ ಆಯ್ಕೆಯಲ್ಲಿ ಗೊಂದಲವಾಗಲಿದೆ. ಭಾರತ ‘ಎ’ ತಂಡದ ಆರಂಭಿಕರಾದ ಪ್ರಿಯಾಂಕ್‌ ಪಾಂಚಾಲ್‌, ಅಭಿಮನ್ಯು ಈಶ್ವರನ್‌ ಇತ್ತೀಚೆಗೆ ನ್ಯೂಜಿಲೆಂಡ್‌ ‘ಎ’ ವಿರುದ್ಧ ಉತ್ತಮ ಆಟವಾಡಿದ್ದರು. ದುಲೀಪ್‌ ಟ್ರೋಫಿಯಲ್ಲಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್‌, ಭಾರತ ಟೆಸ್ಟ್‌ ತಂಡದ ಆರಂಭಿಕ ಮಯಾಂಕ್‌ ಅಗರ್‌ವಾಲ್‌ ಹಾಗೂ ಪಾದಾರ್ಪಣಾ ಋುತುವಿನಲ್ಲೇ ಕೇವಲ 5 ಪ್ರಥಮ ದರ್ಜೆ ಪಂದ್ಯಗಳಲ್ಲಿ 770 ರನ್‌ ಗಳಿಸಿರುವ ಯಶ್‌ ಧುಳ್‌ ನಡುವೆ ಪೈಪೋಟಿ ಇದೆ. ಹನುಮ ವಿಹಾರಿ ಹಾಗೂ ಸರ್ಫರಾಜ್‌ ಖಾನ್‌ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಸೌರಾಷ್ಟ್ರ ಬೌಲಿಂಗ್‌ ಪಡೆಯನ್ನು ಜಯದೇವ್‌ ಉನಾದ್ಕತ್‌ ಮುನ್ನಡೆಸಲಿದ್ದು, ಚೇತನ್‌ ಸಕಾರಿಯಾ ಮೇಲೂ ನಿರೀಕ್ಷೆ ಇದೆ.