ನಾಯಕ ಫಾಫ್ ಡುಪ್ಲೆಸಿಸ್, ಸ್ಫೋಟಕ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ ಸೇರಿದಂತೆ ಪ್ರಮುಖ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡಿದೆ. ಆದರೆ ತಂಡದಲ್ಲಿದ್ದ ಏಕೈಕ ಕನ್ನಡಿಗ ಅನೀಶ್ವರ್ ಗೌತಮ್ ಸೇರಿ 5 ಆಟಗಾರರನ್ನು ಆರ್‌ಸಿಬಿ ಕೈಬಿಟ್ಟಿದೆ. ಆರ್‌ಸಿಬಿ ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಸಂಪೂರ್ಣ ಲಿಸ್ಟ್ ಇಲ್ಲಿದೆ.

ಬೆಂಗಳೂರು(ನ.15): ಐಪಿಎಲ್ 2023ರ ಟೂರ್ನಿಗೆ ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ತಂಡ ರೆಡಿ ಮಾಡಲು ಸಜ್ಜಾಗಿದೆ. ಡಿಸೆಂಬರ್ 23ರಂದು ನಡೆಯಲಿರುವ ಮಿನಿ ಹರಾಜಿಗೂ ಮುನ್ನ ತಂಡದಲ್ಲಿನ ಕೆಲ ಆಟಗಾರರನ್ನು ಕೈಬಿಟ್ಟಿದೆ. ಇದರ ಜೊತೆಗೆ ಪ್ರಮುಖ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ತಂಡದಲ್ಲಿದ್ದ ಏಕೈಕ ಕನ್ನಡಿಗ ಅನೀಶ್ವರ್ ಗೌತಮ್ ಸೇರಿದಂತೆ 5 ಪ್ರಮುಖ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದೆ. ರಿಲೀಸ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬಾಕಿ ಉಳಿದಿರುವ ಹಣ 8.75 ಕೋಟಿ ರೂಪಾಯಿ. 

ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ
ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲುವನಿಥ್ ಸಿಸೋಡಿಯಾ, ಶೆರ್ಫಾನೆ ರುದರ್‌ಫೋರ್ಡ್, ಜೇಸನ್ ಬೆಹ್ರನ್‌ಡ್ರಾಫ್

ಟೇಡಿಂಗ್ ಮೂಲಕ ಖರೀದಿಸಿದ ಆಟಗಾರರ ಪಟ್ಟಿ
ಆರ್‌ಸಿಬಿ ಈ ಬಾರಿ ಯಾರನ್ನೂ ಟ್ರೇಡ್ ಮೂಲಕ ಖರೀದಿಸಿಲ್ಲ

IPL Retention ಫ್ಯಾಬಿಯನ್ ಅಲೆನ್, ಉನದ್ಕಟ್ ಸೇರಿ 13 ಆಟಗಾರರ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಆರ್‌ಸಿಬಿ ಉಳಿಸಿಕೊಂಡ ಆಟಗಾರರ ಪಟ್ಟಿ
ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಸೂಯಾಂಶ್ ಪ್ರಬುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಗ್ಲನ್ಸ್ ಮ್ಯಾಕ್ಸ್‌ವೆಲ್, ವಾನಿಂಡು ಹಸರಂಗ, ಶಹಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲೆ, ಕರನ್ ಶರ್ಮಾ, ಮಹೀಪಾಲ್ ಲೊಮ್ರೊರ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್

ಬಾಕಿ ಉಳಿದಿರುವ ವಿದೇಶಿ ಆಟಗಾರರ ಕೋಟಾ
2

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಟ್ರೇಡಿಂಗ್ ಮೂಲಕ ಯಾರನ್ನು ಖರೀದಿಲ್ಲ. ಆದರೆ ತಂಡದಲ್ಲಿದ್ದ ವೇಗಿ ಜೇಸನ್ ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದಾರೆ. ಸದ್ಯ ಉಳಿದುಕೊಂಡಿರುವ ಆರ್‌ಸಿಬಿ ತಂಡ ಅನುಭವಿ ತಂಡವಾಗಿದೆ. ಆದರೆ ಟಾಪ್ ಆರ್ಡರ್ ನೆರವು ತಂಡಕ್ಕೆ ಅತೀ ಅವಶ್ಯಕತವಾಗಿದೆ. ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಪ್ರದರ್ಶನ ಆರ್‌ಸಿಬಿ ಫಲಿತಾಂಶದ ನೇರ ಪರಿಣಾಮ ಬೀರಲಿದೆ. ಇನ್ನು ಫಿನೀಶರ್ ದಿನೇಶ್ ಕಾರ್ತಿಕ್ ಮತ್ತೊಂದು ಆವೃತ್ತಿಯಲ್ಲಿ ಹೊಡಿಬಡಿ ಆಟಕ್ಕೆ ಸಜ್ಜಾಗಿದ್ದಾರೆ.

ಎಬಿಡಿ ಆರ್‌ಸಿಬಿ ಕೋಚ್‌?
 ದಿಗ್ಗಜ ಕ್ರಿಕೆಟಿಗ ಎಬಿ ಡಿ ವಿಲಿಯ​ರ್‍ಸ್ ಆರ್‌ಸಿಬಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಗುರುವಾರ ಬೆಂಗಳೂರಿಗೆ ಆಗಮಿಸಿದರು. ವಿಲಿಯ​ರ್‍ಸ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಡಿಯೋವನ್ನು ಆರ್‌ಸಿಬಿ ತನ್ನ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ‘ಮುಂದಿನ ವರ್ಷದ ಐಪಿಎಲ್‌ ಬಗ್ಗೆ ಮಾತನಾಡಲು ಬೆಂಗಳೂರಿಗೆ ಆಗಮಿಸಿದ್ದೇನೆ’ ಎಂದು ವಿಲಿಯ​ರ್‍ಸ್ ಹೇಳಿದ್ದಾರೆ. ಅವರು ತಂಡದ ಕೋಚ್‌ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಹಿಳಾ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಖರೀದಿ?
2023ರಲ್ಲಿ ಮಹಿಳಾ ಐಪಿಎಲ್‌ ಆರಂಭಗೊಳ್ಳಲಿದ್ದು, 5 ತಂಡಗಳು ಇರಲಿವೆ. ಈ ಪೈಕಿ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು(ಆರ್‌ಸಿಬಿ) ಸಹ ಇರಲಿದೆ ಎನ್ನಲಾಗಿದೆ. ಆರ್‌ಸಿಬಿ ಪುರುಷರ ತಂಡದ ಕ್ರಿಕೆಟ್‌ ನಿರ್ದೇಶಕ ಮೈಕ್‌ ಹೆಸನ್‌ ಸುಳಿವು ನೀಡಿದ್ದಾರೆ.