IPL Retention: ಹರಾಜಿಗೂ ಮುನ್ನ ಸ್ಪೋಟಕ ಬ್ಯಾಟರ್‌ನನ್ನೇ ಕೈಬಿಟ್ಟ ಪಂಜಾಬ್ ಕಿಂಗ್ಸ್..!
2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಭನುಕಾ ರಾಜಪಕ್ಸಾ, ಮೋಹಿತ್ ರಾಥೆ, ಬಲ್ತೇಜ್ ದಂಡ, ರಾಜ್ ಅಂಗದ್ ಭಾವ ಹಾಗೂ ಶಾರುಕ್ ಖಾನ್ ಅವರನ್ನು ರಿಲೀಸ್ ಮಾಡಿದೆ. ಈ ಪೈಕಿ ಶಾರುಕ್ ಖಾನ್ ಅವರನ್ನು ಕೈಬಿಟ್ಟಿದ್ದು ಪಂಜಾಬ್ ಪಾಲಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ.
ಬೆಂಗಳೂರು(ನ.26): ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ತಂಡವಾಗಿರುವ ಪಂಜಾಬ್ ಕಿಂಗ್ಸ್ ತಂಡವು ಸಾಕಷ್ಟು ಅಳೆದು ತೂಗಿ 5 ಆಟಗಾರರನ್ನು ರಿಲೀಸ್ ಮಾಡಿದೆ. ಈ ಪೈಕಿ ಲಂಕಾದ ಭನುಕಾ ರಾಜಪಕ್ಸಾ ಹಾಗೂ ಶಾರುಕ್ ಖಾನ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಈಗಾಗಲೇ ಹಲವಾರು ಪಂದ್ಯಗಳನ್ನು ಏಕಾಂಗಿಯಾಗಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗೆಲ್ಲಿಸಿದ್ದ ಶಾರುಕ್ ಖಾನ್ ಅವರನ್ನು ಕೈಬಿಟ್ಟಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಇದೀಗ ಶಾರುಕ್ ಖಾನ್ ಅವರನ್ನು ತಂಡದಿಂದ ರಿಲೀಸ್ ಮಾಡಿರುವುದರಿಂದ ಪಂಜಾಬ್ ಖಾತೆಗೆ 9 ಕೋಟಿ ರುಪಾಯಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಒಟ್ಟಾರೆಯಾಗಿ 5 ಆಟಗಾರರನ್ನು ರಿಲೀಸ್ ಮಾಡಿದ ಬಳಿಕ ಹರಾಜಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 24.1 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
IPL Retention ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ರಿಲೀಸ್ ಮಾಡಿದ ಆಟಗಾರರಿವರು..! ಕನ್ನಡಿಗ ಪಾಂಡೆಗಿಲ್ಲ ಸ್ಥಾನ
2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಭನುಕಾ ರಾಜಪಕ್ಸಾ, ಮೋಹಿತ್ ರಾಥೆ, ಬಲ್ತೇಜ್ ದಂಡ, ರಾಜ್ ಅಂಗದ್ ಭಾವ ಹಾಗೂ ಶಾರುಕ್ ಖಾನ್ ಅವರನ್ನು ರಿಲೀಸ್ ಮಾಡಿದೆ. ಈ ಪೈಕಿ ಶಾರುಕ್ ಖಾನ್ ಅವರನ್ನು ಕೈಬಿಟ್ಟಿದ್ದು ಪಂಜಾಬ್ ಪಾಲಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ.
ಇನ್ನು ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ(18.5 ಕೋಟಿ ರುಪಾಯಿ) ಎನಿಸಿಕೊಂಡಿರುವ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿದೆ. ಇನ್ನುಳಿದಂತೆ ನಾಯಕ ಶಿಖರ್ ಧವನ್, ಜಾನಿ ಬೇರ್‌ಸ್ಟೋವ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೋ ರಬಾಡ, ಸಿಕಂದರ್ ರಾಜಾ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿದೆ.
ಜೋ ರೂಟ್ ಸೇರಿ 9 ಮಂದಿ ತಂಡದಿಂದ ಕೈಬಿಟ್ಟ ರಾಜಸ್ಥಾನ ರಾಯಲ್ಸ್, ಏಕೈಕ ಕನ್ನಡಿಗ ರೀಟೈನ್!
ಪಂಜಾಬ್ ಕಿಂಗ್ಸ್ ರಿಲೀಸ್ ಮಾಡಿದ ಆಟಗಾರರಿವರು:
ಭನುಕಾ ರಾಜಪಕ್ಸಾ, ಮೋಹಿತ್ ರಾಥೆ, ಬಲ್ತೇಜ್ ದಂಡ, ರಾಜ್ ಅಂಗದ್ ಭಾವ ಹಾಗೂ ಶಾರುಕ್ ಖಾನ್
ಪಂಜಾಬ್ ಕಿಂಗ್ಸ್ ರೀಟೈನ್ ಮಾಡಿಕೊಂಡ ಆಟಗಾರರಿವರು:
ಶಿಖರ್ ಧವನ್, ಜಾನಿ ಬೇರ್‌ಸ್ಟೋವ್, ಜಿತೇಶ್ ಶರ್ಮಾ, ಪ್ರಭ್‌ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಹಪ್ರೀತ್ ಭಾಟಿಯಾ, ಅಥರ್ವ ಟೈಡೆ, ರಿಶಿ ಧವನ್, ಸ್ಯಾಮ್ ಕರ್ರನ್, ಸಿಕಂದರ್ ರಾಜ, ಲಿಯಾಮ್ ಲಿವಿಂಗ್‌ಸ್ಟೋನ್, ಗುರ್ನೂರ್ ಸಿಂಗ್ ಬ್ರಾರ್, ಶಿವಂ ಸಿಂಗ್, ರಾಹುಲ್ ಚಹರ್, ಆರ್ಶದೀಪ್ ಸಿಂಗ್, ಹಪ್ರೀತ್ ಬ್ರಾರ್, ವಿದ್ವತ್ ಕಾವೇರಪ್ಪ, ಕಗಿಸೋ ರಬಾಡ, ನೇಥನ್ ಎಲ್ಲಿಸ್