ಜೋ ರೂಟ್ ಸೇರಿ 9 ಮಂದಿ ತಂಡದಿಂದ ಕೈಬಿಟ್ಟ ರಾಜಸ್ಥಾನ ರಾಯಲ್ಸ್, ಏಕೈಕ ಕನ್ನಡಿಗ ರೀಟೈನ್!

ಐಪಿಎಲ್ ಹರಾಜಿಗೆ ಸಜ್ಜಾಗಿರುವ ರಾಜಸ್ಥಾನ ರಾಯಲ್ಸ್ ಇದೀಗ 9 ಕ್ರಿಕೆಟಿಗರನ್ನ ತಂಡದಿಂದ ಕೈಬಿಟ್ಟಿದೆ. ಪ್ರಮುಖವಾಗಿ  ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಜೋ ರೂಟ್, ಕನ್ನಡಿಗ ಆಲ್ರೌಂಡರ್ ಸೇರಿದಂತೆ 9 ಕ್ರಿಕೆಟಿಗರನ್ನು ತಂಡ ಕೈಬಿಟ್ಟಿದೆ.
 

IPL 2024 Rajasthan Royals released and retain players list ahead of Auction ckm

ಜೈಪುರ(ನ.26) ಐಪಿಎಲ್ 2024ರ ಟೂರ್ನಿಯ ಹರಾಜಿಗೂ ಮುನ್ನ ಆಟಗಾರರ ರಿಲೀಸ್ ಹಾಗೂ ರಿಟೈನ್ ಮಾಡಿಕೊಳ್ಳಲು ಇಂದು ಕೊನೆಯ ದಿನ. ರಾಜಸ್ಥಾನ ರಾಯಲ್ಸ್ ಅಳೆದು ತೂಗಿ ಕೆಲ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದ್ದರೆ, 9 ಕ್ರಿಕೆಟಿಗರನ್ನು ತಂಡದಿಂದ ಕೈಬಿಟ್ಟಿದೆ.  ಮುಂಬರವು ಐಪಿಎಲ್ ಟೂರ್ನಿಯಿಂದ ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಅಲಭ್ಯ ಎಂದು ಘೋಷಿಸಿದ್ದಾರೆ. ಇದರ ಜೊತೆಗೆ ಕನ್ನಡಿಗ ಸ್ಪಿನ್ನರ್ ಸೇರಿದಂತೆ 9 ಮಂದಿಯನ್ನು ರಾಜಸ್ಥಾನ ರಾಯಲ್ಸ್ ತಂಡ ಕೈಬಿಟ್ಟಿದೆ. 

ರಾಜಸ್ಥಾನ ರಾಯಲ್ಸ್ ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಜೋ ರೂಟ್, ಅಬ್ದುಲ್ ಬಸಿತ್, ಜೇಸನ್ ಹೋಲ್ಡರ್, ಅಕಾಶ್ ವಶಿಷ್ಠ್, ಕುಲದೀಪ್ ಯಾದವ್, ಒಬೆಡ್ ಮೆಕಾಯ್, ಮುರುಗನ್ ಅಶ್ವಿನ್, ಕೆಸಿ ಕಾರ್ಯಪ್ಪ, ಕೆಎಂ ಆಸಿಫ್

ಚೆನ್ನೈ ಸೂಪರ್ ಕಿಂಗ್ಸ್‌ ರೀಟೈನ್ & ರಿಲೀಸ್ ಆಟಗಾರರ ಪಟ್ಟಿ ಬಹಿರಂಗ; ಸ್ಟೋಕ್ಸ್‌ಗೆ ಹಾಲಿ ಚಾಂಪಿಯನ್ ಗೇಟ್‌ಪಾಸ್

9 ಕ್ರಿಕೆಟಿಗರ ತಂಡದಿಂದ ಕೈಬಿಟ್ಟಿರುವ ರಾಜಸ್ಥಾನ ರಾಯಲ್ಸ್ ಪ್ರಮುಖ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ನಾಯಕ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಸೇರಿದಂತೆ ಪ್ರಮುಖರನ್ನು ತಂಡ ಉಳಿಸಿಕೊಂಡಿದೆ.

ರಾಜಸ್ಥಾನ ರಾಯಲ್ಸ್ ತಂಡದಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿ
ಸಂಜು ಸ್ಯಾಮ್ಸನ್(ನಾಯಕ), ಜೋಸ್ ಬಟ್ಲರ್, ಶ್ರಿಮ್ರೊನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಡೊನ್ವೋನ್ ಫೆರಾರಿಯಾ, ಕುನಾಲ್ ರಾಥೋರ್, ಆರ್ ಅಶ್ವಿನ್, ಕುಲ್ದೀಪ್ ಸೇನ್, ನವದೀಪ್ ಸೈನಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ಶರ್ಮಾ, ಟ್ರೆಂಟ್ ಬೋಲ್ಟ್, ಯಜುವೇಂದ್ರ ಚಹಾಲ್, ಆ್ಯಡಮ್ ಜಂಪಾ 

ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಟ್ರೇಡ್ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡಿದ್ದಾರೆ.  ಕಳೆದ 2 ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಪಡಿಕ್ಕಲ್‌, ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗಿದ್ದರು. ಮುಂದಿನ ತಿಂಗಳು ನಡೆಯಲಿರುವ ಆಟಗಾರರ ಹರಾಜಿಗೂ ಮುನ್ನ ಪಡಿಕ್ಕಲ್‌ರನ್ನು ಲಖನೌ ತಂಡಕ್ಕೆ ಬಿಟ್ಟುಕೊಟ್ಟಿರುವ ರಾಜಸ್ಥಾನ, ಲಖನೌ ತಂಡದಲ್ಲಿದ್ದ ವೇಗಿ ಆವೇಶ್‌ ಖಾನ್‌ರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. 2022ರ ಹರಾಜಿನಲ್ಲಿ ಆವೇಶ್‌ರನ್ನು ಲಖನೌ 10 ಕೋಟಿ ರು.ಗೆ ಖರೀದಿಸಿತ್ತು. ಪಡಿಕ್ಕಲ್‌ಗೆ ರಾಜಸ್ಥಾನ 7.75 ಕೋಟಿ ರು. ನೀಡಿತ್ತು.

2024ರ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಸ್ಟಾರ್ ಪ್ಲೇಯರ್ ಔಟ್ ..!

ಐಪಿಎಲ್ 2024ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಯುವ ಕ್ರಿಕೆಟಿಗರ ಮೇಲೆ ಕಣ್ಣಿಟ್ಟಿದೆ. ಸಂಜು ಸ್ಯಾಮನ್ಸ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಕಳೆದೆರಡು ಆವೃತ್ತಿಯಲ್ಲಿ ದಿಟ್ಟ ಪ್ರದರ್ಶನದ ಮೂಲಕ ಗಮನಸೆಳೆದಿದೆ. ಇದೀಗ ತಂಡದಲ್ಲಿ ಕೆಲ ಅಸಮತೋಲ ಸರಿಪಡಿಸಿ ಮತ್ತಷ್ಟು ಬಲಿಷ್ಠ ತಂಡ ಕಟ್ಟಲು ಮುಂದಾಗಿದೆ.

Latest Videos
Follow Us:
Download App:
  • android
  • ios