Asianet Suvarna News Asianet Suvarna News

IPL retention: ವಾರ್ನರ್, ರಶೀದ್ ರಿಲೀಸ್, ವಿಲಿಯಮ್ಸನ್ ಸೇರಿ SRH ಮೂವರ ರಿಟೈನ್!

  • ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಗಳಿಗೆ ಬೇಸರ
  • ವಾರ್ನರ್, ರಶೀದ್ ಖಾನ್ ಕೈಬಿಟ್ಟ ಹೈದರಾಬಾದ್
  • ನಾಯಕ ಕೇನ್ ವಿಲಿಯಮ್ಸನ್ ಸೇರಿ ಮೂವರ ರಿಟೈನ್
IPL retention Kane Williamson to samad SRH retained 3 Full list of players ahead of IPL auction ckm
Author
Bengaluru, First Published Dec 1, 2021, 12:50 AM IST

ಹೈದರಾಬಾದ್(ಡಿ.01): ಐಪಿಎಲ್(IPL) ಹರಾಜಿಗೂ ಮುನ್ನ 8 ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟಿಸಿದೆ. ರಿಟೈನ್ ಪಟ್ಟಿ(IPL retention) ಬಿಡುಗಡೆಗೊಂಡ ಬಳಿಕ ಸನ್‌ರೈಸರ್ಸ್ ಹೈದರಾಬಾದ್(sunrisers hyderabad) ತಂಡದ ಅಭಿಮಾನಿಗಳು ಹೆಚ್ಚು ಬೇಸರದಲ್ಲಿದ್ದಾರೆ. ಕಾರಣ ತಂಡಕ್ಕೆ ಚಾಂಪಿಯನ್ ಪ್ರಶಸ್ತಿ ತಂದುಕೊಟ್ಟ ಡೇವಿಡ್ ವಾರ್ನರ್ ಹಾಗೂ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೈಬಿಡಲಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಸೇರಿ ಮೂವರ ರಿಟೈನ್ ಮಾಡಿಕೊಂಡಿದೆ.

ಸನ್‌ರೈಸರ್ಸ್ ಹೈದರಾಬಾದ್ ರಿಟೈನ್ ಮಾಡಿಕೊಂಡ ಪ್ಲೇಯರ್ಸ್:
ಕೇನ್ ವಿಲಿಯಮ್ಸನ್, 14 ಕೋಟಿ ರೂಪಾಯಿ
ಅಬ್ದುಲ್ ಸಮಾದ್, 4 ಕೋಟಿ ರೂಪಾಯಿ
ಉಮ್ರಾನ್ ಮಲಿಕ್, 4 ಕೋಟಿ ರೂಪಾಯಿ

IPL retention: ನಾಯಕ, ಮಾಜಿ ನಾಯಕ ಔಟ್, ವರುಣ್, ವೆಂಕಟೇಶ್ ಸೇರಿ ನಾಲ್ವರ ಉಳಿಸಿಕೊಂಡ KKR!

ಉಮ್ರಾನ್ ಮಲಿಕ್(Umran Malik) 2021ರ ಐಪಿಎಲ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು. 150ರ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಅಬ್ದುಲ್ ಸಮಾದ್( Abdul Samad) ಕಳೆದ ಐಪಿಎಲ್ ಟೂರ್ನಿಯಲ್ಲಿ 111 ರನ್ ಸಿಡಿಸಿದ್ದಾರೆ. ಸಮಾದ್ ಆಲ್ರೌಂಡರ್ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಇನ್ನು ನಾಯಕ ಕೇನ್ ವಿಲಿಯಮ್ಸನ್(Kane Williamson) ಕಳೆದ ಐಪಿಎಲ್ ಟೂರ್ನಿಯಲ್ಲಿ 248 ರನ್ ಸಿಡಿಸಿದ್ದಾರೆ. ಈ ಮೂವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ರಿಟೈನ್ ಮಾಡಿಕೊಂಡಿದೆ,

ಆಟಗಾರರ ಆಯ್ಕೆ, ರಿಲೀಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್(SRH) ಹೆಚ್ಚಿನ ಹಣ ಪೋಲು ಮಾಡದೆ ಉತ್ತಮ ಆಟಗಾರರ ಖರೀದಿ ಮಾಡುವುದರಲ್ಲಿ ಅನುಮಾನವಿಲ್ಲ. ಕಾರಣ ಈ ಹಿಂದಿನ ಎಲ್ಲಾ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಉತ್ತಮ ಆಟಗಾರರ ಖರೀದಿ ಮಾಡಿದೆ. ಇದೀಗ ಈ ಬಾರಿಯೂ ಗರಿಷ್ಠ ಮೊತ್ತ ಅಂದರೆ 68 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ. 

IPL retention: ಜಡೇಜಾಗೆ 16 ಕೋಟಿ, ಧೋನಿಗೆ 12 ಕೋಟಿ ನಾಲ್ವರ ಉಳಿಸಿಕೊಂಡ ಸಿಎಸ್‌ಕೆ!

ಸನ್ ರೈಸರ್ಸ್ ಕೈಬಿಟ್ಟ ಆಟಗಾರರ ಪಟ್ಟಿ:
ಡೇವಿಡ್ ವಾರ್ನರ್, ರಶೀದ್ ಖಾನ್, ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋ, ವೃದ್ಧಿಮಾನ್ ಸಾಗ, ಶ್ರೀವತ್ಸ ಗೋಸ್ವಾಮಿ, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಶೇಷ್ ಶರ್ಮಾ, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಖಲೀಲ್ ಅಹಮ್ಮದ್, ಟಿ ನಟರಾಜನ್, ಬಸಿಲ್ ಥಂಪಿ, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಜೇಸನ್ ರಾಯ್, ಜೆ ಸುಚಿತ್, ಜೇಸನ್ ಹೋಲ್ಡರ್, ವಿರಾಟ್ ಸಿಂಗ್, ಶೆರ್ಪಾನೆ ರುಥ್‌ಫೋರ್ಡ್, ಮುಜೀಬ್ ಯುಆರ್ ರಹಮಾನ್, ಕೇದಾರ್ ಜಾದವ್, ಪ್ರಿಯಾಂ ಗರ್ಗ್

ಸುದೀರ್ಘ ವರ್ಷಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ಕನ್ನಡಿದ ಮನೀಶ್ ಪಾಂಡೆ ಕೂಡ ರಿಲೀಸ್ ಮಾಡಲಾಗಿದೆ. ಮತ್ತೊರ್ವ ಕನ್ನಡಿಗೆ ಜೆ ಸುಚಿತ್ ಕೂಡ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತ ಸ್ಟಾರ್ ಪ್ಲೇಯರ್ಸ್ ಆಗಿದ್ದ ಜಾನಿ ಬೈರ್‌ಸ್ಟೋ, ಭುವನೇಶ್ವರ್ ಕುಮಾರ್ ಪ್ರಮುಖ ಆಟಗಾರರು ಇದೀಗ ಹರಾಜಿನಲ್ಲಿನ ಪಾ್ಲ್ಗೊಳ್ಳಲಿದ್ದಾರೆ.

8 ಫ್ರಾಂಚೈಸಿಗಳು ರಿಲೀಸ್ ಮಾಡಿದ ಆಟಗಾರರ ಪಟ್ಟಿಯಿಂದ ಲಕ್ನೌ ಹಾಗೂ ಅಹಮ್ಮದಾಬಾದ್ ತಂಡ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಐಪಿಎಲ್ ಹರಾಜಿಗೂ ಮೊದಲೇ ಈ ಮೂವರು ಆಟಗಾರರ ಹೆಸರನ್ನು ಅಂತಿಮಗೊಳಿಸಬೇಕಿದೆ. ಈ ಮೂವರು ಆಟಗಾರರ ಪೈಕಿ ಇಬ್ಬರು ಭಾರತೀಯ ಆಟಗಾರರು ಹಾಗೂ ಓರ್ವ ವಿದೇಶಿ ಆಟಗಾರನನ್ನು ಹೊಸ ಎರಡು ತಂಡಗಳು ಹರಾಜಿಗೂ ಮೊದಲೇ ಖರೀದಿಸಲು ಅವಕಾಶವಿದೆ. ಇನ್ನುಳಿದ ಆಟಗಾರರು ಹರಾಜಿನ ಮೂಲಕ ಖರೀದಿಸಲು ಒಟ್ಟು 10 ತಂಡಗಳಿಗೆ ಅವಕಾಶವಿದೆ.

ಸನ್‌ರೈಸರ್ಸ್ ಹೈದಾರಾಬಾದ್ ಚಾಂಪಿಯನ್:

 2016, ಚೊಚ್ಚಲ ಪ್ರಶಸ್ತಿ

ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಒಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2016ರಲ್ಲಿ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಹೈದರಾಬಾದ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 

 

 

Follow Us:
Download App:
  • android
  • ios