Asianet Suvarna News Asianet Suvarna News

IPL retention: ಜಡೇಜಾಗೆ 16 ಕೋಟಿ, ಧೋನಿಗೆ 12 ಕೋಟಿ ರೂ, ನಾಲ್ವರ ಉಳಿಸಿಕೊಂಡ ಸಿಎಸ್‌ಕೆ!

  • ಹರಾಜಿಗೂ ಮುನ್ನ ನಾಲ್ವರು ಆಟಗಾರರ ಉಳಿಸಿಕೊಂಡ ಸಿಎಸ್‌ಕೆ
  • ರೈನಾ, ಡುಪ್ಲೆಸಿಸ್ ಸೇರಿ ಸ್ಟಾರ್ ಆಟಗಾರರ ಕೈಬಿಟ್ಟ ಚೆನ್ನೈ
  • ಚೆನ್ನೈ ಸೂಪರ್ ಕಿಂಗ್ಸ್ ರಿಟೈನ್ ಆಟಗಾರರ ಪಟ್ಟಿ ಇಲ್ಲಿದೆ
MS Dhoni to Ravindra Jadeja CSK retained 4 star players Full list ahead of IPL auction ckm
Author
Bengaluru, First Published Nov 30, 2021, 10:36 PM IST
  • Facebook
  • Twitter
  • Whatsapp

ಚೆನ್ನೈ(ನ.30):  ಐಪಿಎಲ್ 2022ರ(IPL 2022) ಟೂರ್ನಿಗೆ ಅಧಿಕೃತವಾಗಿ ಫ್ರಾಂಚೈಸಿಗಳ ತಯಾರಿ ಆರಂಭಗೊಂಡಿದೆ. ಐಪಿಎಲ್ 2022ರ ಮೆಘಾ ಹರಾಜಿಗೂ(IPL Auction) ಮುನ್ನ ತಂಡ ಯಾವ ಆಟಗಾರರನ್ನು ಉಳಿಸಲಿದೆ(retention) ಘೋಷಿಸಲು  ನವೆಂಬರ್ 30 ಕೊನೆಯ ದಿನವಾಗಿತ್ತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಅಳೆದು ತೂಗಿ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ(MS Dhoni), ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja), ಯುವ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್(Ruturaj Gaikwad) ಹಾಗೂ ವಿದೇಶಿ ಆಟಗಾರ ಮೊಯಿನ್ ಆಲಿಯನ್ನು(Moeen Ali) ತಂಡದಲ್ಲೇ ಉಳಿಸಿಕೊಂಡಿದೆ. ಇನ್ನುಳಿದ ಎಲ್ಲಾ ಆಟಗಾರರನ್ನು ಚೆನ್ನೈ ಸೂಪರ್ ಕಿಂಗ್ಸ್ ಕೈಬಿಟ್ಟಿದೆ. 

IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!

ಚೆನ್ನೈ ಉಳಿಸಿಕೊಂಡ ಆಟಗಾರರ ಪಟ್ಟಿ:
ರವೀಂದ್ರ ಜಡೇಜಾ ( 16 ಕೋಟಿ ರೂಪಾಯಿ)
ಎಂ.ಎಸ್.ಧೋನಿ( 12 ಕೋಟಿ ರೂಪಾಯಿ)
ಮೊಯಿನ್ ಆಲಿ( 8 ಕೋಟಿ ರೂಪಾಯಿ)
ರುತುರಾಜ್ ಗಾಯಕ್ವಾಡ್(6 ಕೋಟಿ ರೂಪಾಯಿ)

ಚೆನ್ನೈ ಸೂಪರ್ ಕಿಂಗ್ಸ್ ಬಳಿಕ ಇದೀಗ 48 ಕೋಟಿ ರೂಪಾಯಿ ಬಾಕಿ ಉಳಿದಿದೆ. 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಸುರೇಶ್ ರೈನಾ, ಫಾಫ್ ಡುಪ್ಲೆಸಿಸ್, ಅಂಬಾಟಿ ರಾಯುಡು, ಡ್ವೇನ್ ಬ್ರಾವೋ ಸೇರಿದಂತೆ ಪ್ರಮುಖ ಆಟಗಾರರನ್ನು ಕೈಬಿಟ್ಟಿದೆ. ಈ ತಿಂಗಳು ನಡೆಯಲಿರುವ ಹರಾಜಿನಲ್ಲಿ ಕೈಬಿಟ್ಟ ಆಟಗಾಗರರ ಬದಲು ಹೊಸ ಆಟಗಾರರನ್ನು ಖರೀದಿಸುವ ಸಾಧ್ಯತೆ ಹೆಚ್ಚು ಅನ್ನೋ ಮಾಹಿತಿಗಳು ಹೊರಬಿದ್ದಿವೆ.

IPL Retention: ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಮೇಜರ್ ಸರ್ಜರಿ, ಸಂಜು ಸೇರಿ ಮೂವರನ್ನು ಉಳಿಸಿಕೊಂಡ ಫ್ರಾಂಚೈಸಿ

ಚೆನ್ನೈ ಕೈಬಿಟ್ಟ ಆಟಗಾರರು:

ಸುರೇಶ್ ರೈನಾ, ಫಾಫ್ ಡುಪ್ಲೆಸಿಸ್, ಅಂಬಾಟಿ ರಾಯುಡು, ಕರಣ್ ಶರ್ಮಾ, ಇಮ್ರಾನ್ ತಾಹಿರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಲುಂಗಿ ಎನ್‌ಗಿಡಿ, ಕೆ ಗೌತಮ್, ಸ್ಯಾಮ್ ಕುರನ್, ಡೋಮಿನಿಕ್ ಡ್ರಾಕ್ಸ್, ರಾಬಿನ್ ಉತ್ತಪ್ಪ, ಜೋಶ್ ಹೇಜಲ್‌ವುಡ್, ಚೇತೇಶ್ವರ್ ಪೂಜಾರಾ, ಮಿಚೆಲ್ ಸ್ಯಾಂಟ್ನರ್, ಜಗದೀಶ್ ಎನ್, ಕೆಎಂ ಆಸಿಫ್, ಆರ್ ಕಿಶೋರ್ ಸಾಯಿ, ನಿಶಾಂತ್ ಹರಿ, ಹರಿಶಂಕರ್ ರೆಡ್ಡಿ ಹಾಗೂ ಭಗತ್ ವರ್ಮಾ, ಡ್ವೇನ್ ಬ್ರಾವೋ.

2022ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಕಣಕ್ಕಿಳಿಯುತ್ತಾರಾ, ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರಾ ಅನ್ನೋ ಚರ್ಚೆ ಭಾರಿ ಸದ್ದು ಮಾಡುತ್ತಿತ್ತು. ಇದೀಗ ಧೋನಿ ರಿಟೈನ್ ಮಾಡಿಕೊಳ್ಳುವ ಮೂಲಕ 2022ರ ಐಪಿಎಲ್ ಟೂರ್ನಿಯಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಅನ್ನೋದ ಖಚಿತವಾಗಿದೆ. 

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಮಾಡಿದ ಧೋನಿ, ಐಪಿಎಲ್ ಟೂರ್ನಿಯಲ್ಲಿ 220 ಪಂದ್ಯ ಆಡಿದ್ದಾರೆ. ಈ ಮೂಲಕ 4746 ರನ್ ಸಿಡಿಸಿದ್ದಾರೆ. 41.27 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಧೋನಿ ಸ್ಟ್ರೈಕ್ ರೇಟ್ 135.83. ಅರ್ಧಶತಕ ಸಂಖ್ಯೆ 23. 219 ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.

IPL retention: ಪಾಂಡ್ಯ ಬ್ರದರ್ಸ್ ಔಟ್, ರೋಹಿತ್ ಶರ್ಮಾ ಸೇರಿ ನಾಲ್ವರ ಉಳಿಸಿಕೊಂಡ ಮುಂಬೈ!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಲ್ರೌಂಡರ್ ಹಾಗೂ ಧೋನಿ ನಂಬಿಕಸ್ಥ ಪ್ಲೇಯರ್ ರವೀಂದ್ರ ಜಡೇಜಾ  200 ಪಂದ್ಯಗಳಿಂದ 2386 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 127 ವಿಕೆಟ್ ಕಬಳಿಸಿದ್ದಾರೆ.2 ಅರ್ಧಶತಕ ಸಿಡಿಸಿರುವ ಜಡೇಜಾ, 85 ಸಿಕ್ಸರ್ ಸಿಡಿಸಿದ್ದಾರೆ.

2021ರ ಐಪಿಎಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಆಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ರುತುರಾಜ್ ಗಾಯಕ್ವಾಡ್ ಆರಂಭ ಚೆನ್ನೈ ತಂಡಕ್ಕೆ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಹೀಗಾಗಿ ಈ ಇಬ್ಬರು ಆಟಾಗರರನ್ನು ಚೆನ್ನೈ ಉಳಿಸಿಕೊಂಡಿದೆ. ನಾಲ್ವರು ಆಟಗಾರರು ಜೊತೆಗೆ ಹರಾಜಿನಲ್ಲಿ ಹೊಸ ಆಟಗಾರರು ತಂಡ ಸೇರಿಕೊಳ್ಳಲಿದ್ದಾರೆ.
 

Follow Us:
Download App:
  • android
  • ios