IPL Retention ಚಾಂಪಿಯನ್ ಗುಜರಾತ್ ಟೈಟಾನ್ಸ್‌ನಿಂದ ಜೇಸನ್ ರಾಯ್ ಸೇರಿ 6 ಕ್ರಿಕೆಟಿಗರ ಬಿಡುಗಡೆ!
ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಸೇರಿದಂತೆ 6 ಕ್ರಿಕೆಟಿಗರ ತಂಡದಿಂದ ಬಿಡುಗಡೆ ಮಾಡಿದೆ. ತಂಡದಲ್ಲಿ ಉಳಿದುಕೊಂಡ ಹಾಗೂ ರಿಲೀಸ್ ಮಾಡಿದ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ.
ಅಹಮ್ಮದಾಬಾದ್(ನ.15): ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಇದೀಗ ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಗುಜರಾತ್ ಟೈಟಾನ್ಸ್ ತಂಡ ಮುಂದಾಗಿದೆ. ಆದರೆ ಗುಜರಾತ್ ಟೈಟಾನ್ಸ್ ತಂಡ 6 ಕ್ರಿಕೆಟಿಗರ ಬಿಡುಗಡೆ ಮಾಡಿದೆ. ಇದರಲ್ಲಿ ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಕೂಡ ಸೇರಿದ್ದಾರೆ. ಇನ್ನು ಟೀಂ ಇಂಡಿಯಾ ವೇಗಿ ವರುಣ್ ಆರೋನ್, ಲ್ಯೂಕಿ ಫರ್ಗ್ಯೂಸನ್, ಡೋಮಿನಿಕ್ ಡ್ರಾಕ್ಸ್, ಗುರುಕೀರತ್ ಸಿಂಗ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಕೂಡ ತಂಡದಿಂದ ಬಿಡುಗಡೆ ಮಾಡಲಾಗಿದೆ.
ಗುಜರಾತ್ ಟೈಟಾನ್ಸ್ ತಂಡದಿಂದ ರಿಲೀಸ್ ಮಾಡಿದ ಆಟಗಾರರ ಪಟ್ಟಿ
ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್, ಲ್ಯೂಕಿ ಫರ್ಗ್ಯೂಸನ್, ಡೊಮಿನಿಕ್ ಡ್ರಾಕ್ಸ್, ಗುರುಕೀರತ್ ಸಿಂಗ್, ವರುಣ್ ಆರೋನ್
ತಂಡದಲ್ಲಿದ್ದ ಏಕೈಕ ಕನ್ನಡಿಗ ಅನೀಶ್ವರ್ ಸೇರಿ ಐವರ ಕೈಬಿಟ್ಟ ಆರ್‌ಸಿಬಿ!
ಟ್ರೇಡಿಂಗ್ ಮೂಲಕ ಖರೀದಿಸಿದ ಆಟಗಾರರ ಪಟ್ಟಿ
ಗುಜರಾತ್ ಟೈಟಾನ್ಸ್ ಟ್ರೇಡಿಂಗ್ ಮೂಲಕ ಯಾವುದೇ ಆಟಗಾರರನ್ನು ಖರೀದಿ ಮಾಡಿಲ್ಲ
ತಂಡದಲ್ಲಿ ಉಳಿದುಕೊಂಡಿರುವ ಆಟಗಾರರ ಪಟ್ಟಿ
ಹಾರ್ದಿಕ್ ಪಾಂಡ್ಯ(ನಾಯಕ), ಶುಬಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಾಹ, ಮಾಥ್ಯೂ ವೇಡ್, ರಶೀದ್ ಖಾನ್, ವರಾಹುಲ್ ಟಿವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಫ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ ಅಹಮ್ಮದ್
ಆಟಗಾರರ ರಿಲೀಸ್ ಬಳಿಕ ತಂಡದಲ್ಲಿನ ಬಾಕಿ ಹಣ
19.25 ಕೋಟಿ ರೂಪಾಯಿ
ಬಾಕಿ ಉಳಿದ ವಿದೇಶಿ ಆಟಾಗರರ ಕೋಟ
3
ಗುಜರಾತ್ ಟೈಟಾನ್ಸ್ ಆಟಗಾರರ ಬಿಡುಗಡೆಯಲ್ಲಿ ಜಾಣ್ಮೆ ತೋರಿದೆ. ಚೊಚ್ಚಲ ಐಪಿಎಲ್ ಪ್ರವೇಶದಲ್ಲಿ ಪ್ರಶಸ್ತಿ ಗೆಲುವಿಗೆ ಕಾರಣರಾದ ಆಟಗಾರರನ್ನು ಗುಜರಾತ್ ಟೈಟಾನ್ಸ್ ಉಳಿಸಿಕೊಂಡಿದೆ. 6 ಆಟಗಾರರನ್ನು ರಿಲೀಸ್ ಮಾಡಿದೆ. ಆದರೆ ಕೋರ್ ತಂಡವನ್ನು ಉಳಿಸಿಕೊಳ್ಳುವಲ್ಲಿ ಗುಜರಾತ್ ಯಶಸ್ವಿಯಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಶೀದ್ ಖಾನ್, ಮೊಹಮ್ಮದ್ ಶಮಿ, ಶುಭಮನ್ ಗಿಲ್ ಸೇರಿದಂತೆ ಪ್ರಮುಖರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಗುಜರಾತ್ ಟೈಟಾನ್ಸ್ ಮೂವರು ವಿದೇಶಿ ಆಟಗಾರರನ್ನು ಮುಂಬರುವ ಮಿನಿ ಹರಾಜಿನಲ್ಲಿ ಖರೀದಿಸುವ ಅವಕಾಶವಿದೆ. ಇದರಿಂದ ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ.