ಕಳೆದ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 16.25 ಕೋಟಿ ರುಪಾಯಿ ನೀಡಿ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಿತ್ತು. ಆದರೆ 32 ವರ್ಷದ ಸ್ಟೋಕ್ಸ್ ಸಿಎಸ್‌ಕೆ ಪರ ಕೆಲವೇ ಕೆಲವು ಪಂದ್ಯಗಳನ್ನಷ್ಟೇ ಆಡಿದ್ದರು. ಇದೀಗ ಸ್ಟೋಕ್ಸ್ ಅವರನ್ನು ಕೈಬಿಟ್ಟಿದ್ದರಿಂದ ಸಿಎಸ್‌ಕೆ ಖಾತೆಗೆ 16.25 ಕೋಟಿ ಸೇರ್ಪಡೆಯಾಗಿದೆ. 

ಬೆಂಗಳೂರು(ನ.26): 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜಿಗೂ ಮುನ್ನ ಐಪಿಎಲ್ ಕಮಿಟಿಯು ಆಟಗಾರರ ರೀಟೈನ್ & ರಿಲೀಸ್‌ಗೆ ಇಂದು ಕಡೆಯ ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಹಲವು ಆಟಗಾರರನ್ನು ಕೈಬಿಟ್ಟಿದೆ. ಈ ಪೈಕಿ 2024ರ ಐಪಿಎಲ್ ಟೂರ್ನಿಗೂ ಮುನ್ನ ತಾವು ಅಲಭ್ಯರಾಗುವುದಾಗಿ ಬೆನ್ ಸ್ಟೋಕ್ಸ್ ಈ ಮೊದಲೇ ತಿಳಿಸಿದ್ದರಿಂದ ಸಿಎಸ್‌ಕೆ ಫ್ರಾಂಚೈಸಿಯು ಇಂಗ್ಲೆಂಡ್ ಟೆಸ್ಟ್ ನಾಯಕನಿಗೆ ಗೇಟ್‌ಪಾಸ್ ನೀಡಿದೆ.

ಎಂ ಎಸ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ 2023ರ ಐಪಿಎಲ್ ಟ್ರೋಫಿ ಜಯಿಸುತ್ತಿದ್ದಂತೆಯೇ ಅನುಭವಿ ಕ್ರಿಕೆಟಿಗ ಅಂಬಟಿ ರಾಯುಡು ಐಪಿಎಲ್‌ಗೆ ವಿದಾಯ ಘೋಷಿಸಿದ್ದರು. ಹೀಗಾಗಿ ಅಂಬಟಿ ರಾಯುಡು ಹೊರಬಿದ್ದಿದ್ದಾರೆ. ಇದರ ಜತೆಗೆ ನೀಳಕಾಯದ ಕಿವೀಸ್ ವೇಗಿ ಕೈಲ್ ಜೇಮಿಸನ್, ದಕ್ಷಿಣ ಆಫ್ರಿಕಾದ ಸಿಸಾಂದ ಮಗಲಾ, ಆಕಾಶ್ ಸಿಂಗ್, ಬೆನ್ ಸ್ಟೋಕ್ಸ್‌, ದಕ್ಷಿಣ ಆಫ್ರಿಕಾದ ಡ್ವೇನ್ ಪ್ರಿಟೋರಿಯಸ್‌, ಸುಬ್ರಾಂಶು ಸೇನಾಪತಿ ಹಾಗೂ ಭಗತ್ ವರ್ಮಾ ಅವರನ್ನು ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರಿಲೀಸ್ ಮಾಡಿದೆ.

2024ರ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಸ್ಟಾರ್ ಪ್ಲೇಯರ್ ಔಟ್ ..!

ಕಳೆದ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬರೋಬ್ಬರಿ 16.25 ಕೋಟಿ ರುಪಾಯಿ ನೀಡಿ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಿತ್ತು. ಆದರೆ 32 ವರ್ಷದ ಸ್ಟೋಕ್ಸ್ ಸಿಎಸ್‌ಕೆ ಪರ ಕೆಲವೇ ಕೆಲವು ಪಂದ್ಯಗಳನ್ನಷ್ಟೇ ಆಡಿದ್ದರು. ಇದೀಗ ಸ್ಟೋಕ್ಸ್ ಅವರನ್ನು ಕೈಬಿಟ್ಟಿದ್ದರಿಂದ ಸಿಎಸ್‌ಕೆ ಖಾತೆಗೆ 16.25 ಕೋಟಿ ಸೇರ್ಪಡೆಯಾಗಿದೆ. 

Scroll to load tweet…
Scroll to load tweet…

2024ರ ಆಟಗಾರರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 8 ಆಟಗಾರರನ್ನು ಕೈಬಿಟ್ಟಿದ್ದರಿಂದ ಸಿಎಸ್‌ಕೆ ಫ್ರಾಂಚೈಸಿಯ ಖಾತೆಯಲ್ಲಿ 32.1 ಕೋಟಿ ರುಪಾಯಿ ಸೇರ್ಪಡೆಯಾಗಿದೆ. ಹೀಗಾಗಿ ಸಿಎಸ್‌ಕೆ ಮತ್ತೊಮ್ಮೆ ಹರಾಜಿನಲ್ಲಿ ಒಳ್ಳೆಯ ಆಟಗಾರರನ್ನು ಖರೀದಿಸಲು ಸಾಕಷ್ಟು ಹಣ ಉಳಿಸಿಕೊಂಡಂತೆ ಆಗಿದೆ

2024ರ ಐಪಿಎಲ್ ಆಟಗಾರರ ಹರಾಜು ನವೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಈ ಹರಾಜಿನಲ್ಲಿ 6 ಆಟಗಾರರನ್ನು ಖರೀದಿಸಲು ಅವಕಾಶವಿದ್ದು, ಈ ಪೈಕಿ 3 ವಿದೇಶಿ ಆಟಗಾರರನ್ನು ಖರೀದಿಸಲು ಅವಕಾಶವಿದೆ.

2024ರ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರೀಟೈನ್‌ ಮಾಡಿಕೊಂಡ ವಿವರ:

ಎಂ ಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಸಿಂಘ್ ಚೌಧರಿ, ಮತೀಶ ಚೌಧರಿ, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ದೀಪಕ್ ಚಹರ್.

ರಿಲೀಸ್ ಆದ ಆಟಗಾರರ ವಿವರ:
ಬೆನ್ ಸ್ಟೋಕ್ಸ್, ಕೈಲ್ ಜೇಮಿಸನ್, ಅಂಬಟಿ ರಾಯುಡು, ಸಿಸಾಂದ ಮಗಲಾ, ಆಕಾಶ್ ಸಿಂಗ್, ಡ್ವೇನ್ ಪ್ರಿಟೋರಿಯಸ್‌, ಸುಬ್ರಾಂಶು ಸೇನಾಪತಿ ಹಾಗೂ ಭಗತ್ ವರ್ಮಾ.