ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಅದೃಷ್ಠ ಪರೀಕ್ಷೆಗೆ ಸಜ್ಜಾಗಿದೆ. 15ನೇ ಐಪಿಎಲ್ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ KKR ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಬದಲಾವಣೆ ವಿವರ ಇಲ್ಲಿದೆ.

ಮುಂಬೈ(ಏ.21): ಐಪಿಎಲ್ ಟೂರ್ನಿ 15ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಹರ್ಭಜನ್ ಸಿಂಗ್ ಬದಲು ಕಮಲೇಶ್ ನಾಗರಕೋಟಿ ತಂಡ ಸೇರಿಕೊಂಡಿದ್ದಾರೆ.

Scroll to load tweet…

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ ಆಲ್ರೌಂಡರ್ ಡ್ವೇನ್ ಬ್ರಾವೋಗೆ ವಿಶ್ರಾಂತಿ ನೀಡಲಾಗಿದೆ. ಬ್ರಾವೋ ಬದಲು ಎನ್‌ಗಿಡಿ ತಂಡ ಸೇರಿಕೊಂಡಿದ್ದಾರೆ.

Scroll to load tweet…
Scroll to load tweet…

ಚೆನ್ನೈ ಸೂಪರ್ ಕಿಂಗ್ಸ್ ಸತತ 2 ಗೆಲುವು ಕಾಣೋ ಮೂಲಕ ಆತ್ಮವಿಶ್ವಾಸದಲ್ಲಿದೆ. ಇದೀಗ ಕೆಕೆಆರ್ ವಿರುದ್ಧವೂ ಗೆಲವು ಸಾಧಿಸಿ ಹ್ಯಾಟ್ರಿಕ್ ಕನಸು ನನಸು ಮಾಡಲು ಸಜ್ಜಾಗಿದೆ. ಇತ್ತ ಕೆಕಆರ್ ಆಡಿದ 3 ಪಂದ್ಯದಲ್ಲಿ ಕೇವಲ 1 ಗೆಲುವು ಕಂಡಿದೆ. ಹೀಗಾಗಿ ಕೆಕಆರ್ ಭರ್ಜರಿ ಕಮ್‌ಬ್ಯಾಕ್‌ ಎದರುನೋಡುತ್ತಿದೆ.