ಇಂಗ್ಲೆಂಡ್‌ ತಂಡ ಟಿ20 ಕ್ರಿಕೆಟ್‌ನಲ್ಲಿ ಯಶಸ್ವಿ ಪ್ರದರ್ಶನ ತೋರಲು ಐಪಿಎಲ್‌ ಕಾರಣ ಎನ್ನುವುದನ್ನು ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌ ಬಹಿರಂಗ ಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲಂಡನ್(ಮಾ.13)‌: ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ತಂಡದ ಯಶಸ್ಸಿಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪ್ರಮುಖ ಕಾರಣ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ವ್ಯವಸ್ಥಾಪಕ ನಿರ್ದೇಶಕ, ಮಾಜಿ ಕ್ರಿಕೆಟಿಗ ಆಶ್ಲೆ ಜೈಲ್ಸ್‌ ಹೇಳಿದ್ದಾರೆ. 

ಐಪಿಎಲ್‌ನಲ್ಲಿ ಇಂಗ್ಲೆಂಡ್‌ ಆಟಗಾರರ ಪಾಲ್ಗೊಳ್ಳುವಿಕೆಯಿಂದಾಗಿಯೇ ಟಿ20ಯಲ್ಲಿ ಬಲಿಷ್ಠ ತಂಡ ಕಟ್ಟಲು ಇಸಿಬಿಗೆ ಸಾಧ್ಯವಾಗಿದ್ದು, ತಂಡ ವಿಶ್ವ ನಂ.1 ಸ್ಥಾನಕ್ಕೇರಲು ಐಪಿಎಲ್‌ ಅನುಭವವೇ ಕಾರಣ ಎಂದಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಇಂಗ್ಲೆಂಡ್‌ನ 12 ಆಟಗಾರರಿದ್ದು, ಈ ಪೈಕಿ ಬಹುತೇಕರು ಇಂಗ್ಲೆಂಡ್‌ ತಂಡದ ಕಾಯಂ ಸದಸ್ಯರಾಗಿದ್ದಾರೆ. ಜೋಸ್‌ ಬಟ್ಲರ್‌, ಇಯಾನ್‌ ಮೊರ್ಗನ್‌ ಸೇರಿ ಇನ್ನೂ ಅನೇಕ ಇಂಗ್ಲಿಷ್‌ ಆಟಗಾರರು ತಮ್ಮ ತಂಡದ ಯಶಸ್ಸಿಗೆ ಐಪಿಎಲ್‌ ಪ್ರಮುಖ ಕಾರಣ ಎಂದು ಈ ಹಿಂದೆ ಹಲವು ಬಾರಿ ಹೇಳಿದ ಉದಾಹರಣೆಗಳಿವೆ.

ಟೆಸ್ಟ್ ಅಬ್ಬರಕ್ಕೆ ಬ್ರೇಕ್; ಟಿ20ಯಲ್ಲಿ ಟೀಂ ಇಂಡಿಯಾಗೆ ಮೊದಲ ಆಘಾತ!

ಐಪಿಎಲ್‌ನಿಂದ ನಾವು ಸಾಕಷ್ಟು ಪ್ರಯೋಜನ ಪಡೆದುಕೊಂಡಿದ್ದೇವೆ. ಹೀಗಾಗಿ ನಾವು ಐಪಿಎಲ್‌ಗೆ ಧನ್ಯವಾದಗಳನ್ನು ಹೇಳಲೇಬೇಕು. ತಮ್ಮ ತಂಡವನ್ನು ಕಟ್ಟುವಲ್ಲಿ ಅದರಲ್ಲೂ 2019ರ ಐಪಿಎಲ್‌ ವಿಶ್ವಕಪ್‌ ಗೆಲುವಿನ ತಂಡ ಕಟ್ಟಲು ಐಪಿಎಲ್‌ ಸಾಕಷ್ಟು ನೆರವಾಗಿದೆ ಎಂದು ನಾಯಕ ಇಯಾನ್‌ ಮಾರ್ಗನ್‌ ಹೇಳಿದ್ದರು.