ಅಹಮ್ಮದಾಬಾದ್(ಮಾ.12): ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದೆ. 125 ರನ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಯಾವುದೇ ಆತಂಕವಿಲ್ಲದೆ ಗುರಿ ತಲುಪಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೃಗಾಲಯ ಆರಂಭಿಸಲು ಕೊಹ್ಲಿ ಬಳಿ ಹಲವು ಡಕ್ ಇದೆ: ಟ್ರೋಲ್ ಆದ ನಾಯಕ!

ಟೀಂ ಇಂಡಿಯಾ ನೀಡಿದ 125 ರನ್ ಟಾರ್ಗೆಟ್ ಇಂಗ್ಲೆಂಡ್‌ಗೆ ಯಾವುದೇ ಹಂತದಲ್ಲಿ ಸವಾಲು ಎನಿಸಲಿಲ್ಲ.ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಆರಂಭಕ್ಕೆ ಟೀಂ ಇಂಡಿಯಾ ಬಳಿ ಉತ್ತರವಿರಲಿಲ್ಲ. ಮೊದಲ ವಿಕೆಟ್‌ಗೆ ಈ ಜೋಡಿ 72 ರನ್ ಸಿಡಿಸಿತು. ಬಟ್ಲರ್ 28 ರನ್ ಸಿಡಿಸಿ ಔಟಾದರು.

ದಿಟ್ಟ ಹೋರಾಟ ನೀಡಿದ ಜೇಸನ್ ರಾಯ್ 49 ರನ್ ಸಿಡಿಸಿ ಔಟಾದರು. ಆರಂಭಿಕರ ಪತನದ ಬಳಿಕ ಡೇವಿಡ್ ಮಲನ್, ಜಾನಿ ಬೈರ್‌ಸ್ಟೋ ಜೊತೆಯಾಟ ಇಂಗ್ಲೆಂಡ್ ಗೆಲುವಿನ ಹಾದಿ ಸುಗಮಗೊಳಿಸಿತು. 15.3 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಗುರಿ ತಲುಪಿತು. 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ.