ಮುಂಬೈ(ಜು.28): ಕೊರೋನಾ ವೈರಸ್ ಕಾರಣ ಮಾರ್ಚ್ 29ಕ್ಕೆ ನಡೆಯಬೇಕಿದ್ದ ಐಪಿಎಲ್ ಟೂರ್ನಿಗೆ ಇದೀಗ ವೇದಿಕೆ ರೆಡಿಯಾಗುತ್ತಿದೆ. ಸೆಪ್ಬೆಂಬರ್ 19 ರಿಂದ ಐಪಿಎಲ್ 2020 ಆರಂಭಗೊಳ್ಳುತ್ತಿದೆ. ದುಬೈನಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಇದೀಗ ಆಗಸ್ಟ್ 2 ರಂದು ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಸಭೆ ಸೇರುತ್ತಿದೆ. ಐಪಿಎಲ್ ವೇಳಾಪಟ್ಟಿ ಸೇರಿದಂತೆ ಹಲವು ಪ್ರಮುಖ ವಿಚಾರಗಳಿಗೆ ಅಂತಿಮ ರೂಪ ಸಿಗಲಿದೆ.

ಯುಎಇಯಲ್ಲಿ ಐಪಿಎಲ್‌ ಆಯೋಜನೆಗೆ ಬಿಸಿಸಿಐ ಪತ್ರ

ಐಪಿಎಲ್ ವೇಳಾಪಟ್ಟಿ ಕುರಿತು ಈಗಾಗಲೇ 8 ಫ್ರಾಂಚೈಸಿ ಜೊತೆಗೆ ಬಿಸಿಸಿಐ ಮೊದಲ ಸುತ್ತಿನ ಮಾತುಕತೆ ನಡೆಸಿದೆ. ಇದೀಗ ಆಗಸ್ಟ್ 2ರ ಸಭೆಯಲ್ಲಿ ವೇಳಾಪಟ್ಟಿ ಅಂತಿಮಗೊಳ್ಳಲಿದೆ. ಉದ್ಘಾಟನಾ ಪಂದ್ಯ, ಕ್ರೀಡಾಂಗಣ, ಪಂದ್ಯದ ಸಮಯ ಸೇರಿದಂತೆ ಎಲ್ಲವೂ ಅಂತಿಮವಾಗಲಿದೆ. ಆಟಗಾರರ ಕ್ವಾರಂಟೈನ್ ಅವದಿ, ದುಬೈನಲ್ಲಿ ಜಾರಿ ಮಾಡಿರುವ ಕೊರೋನಾ ವೈರಸ್ ನಿಯಂತ್ರಮ ಮಾರ್ಗಸೂಚಿಗಳ ಕುರಿತು ಚರ್ಚೆ ನೆಡೆಸಲಾಗುತ್ತದೆ.

IPL 2020 ಆರಂಭದ ದಿನಾಂಕ ಖಚಿತ ಪಡಿಸಿದ ಬ್ರಿಜೇಶ್ ಪಟೇಲ್...

ಆಟಗಾರರರ ಕ್ವಾರಂಟೈನ್ ಅವಧಿ ಕಡಿಮೆ ಮಾಡಲು ಬಿಸಿಸಿಐ ಮನವಿ ಮಾಡಲಿದೆ. ಆಟಗಾರರ ಸುರಕ್ಷತೆ, ಆಯೋಜನೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಲಿದೆ ಎಮಿರೈಟ್ಸ್ ಕ್ರಿಕೆಟ್ ಬೋರ್ಡ್(ದುಬೈ)ಗೆ ಬಿಸಿಸಿಐ ಅಧಿಕೃತ ಪತ್ರ ಬರೆದಿದೆ. ಐಪಿಎಲ್ ಆಯೋಜನೆಗೆ ಕುರಿತು ಪತ್ರದಲ್ಲಿ ಹೇಳಲಾಗಿದೆ. ಈ ಕುರಿತು ಎಮಿರೈಟ್ಸ್ ಕ್ರಿಕೆಟ್ ಬೋರ್ಡ್ ಈಗಾಗಲೇ ಸ್ಪಷ್ಟಪಡಿಸಿದೆ.