ಮುಂಬೈ(ಏ.21):  14ನೇ ಆವೃತ್ತಿ ಐಪಿಎಲ್ ಟೂರ್ನಿ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹ್ಯಾಟ್ರಿಕ್ ಗೆಲುವು ಕಂಡಿದೆ. ಮತ್ತೆ ಮಿಂಚಿನ ದಾಳಿ ಸಂಘಟಿಸಿದ ದೀಪಕ್ ಚಹಾರ್ ಕೆಕೆಆರ್ ತಂಡಕ್ಕೆ ಶಾಕ್ ಮೇಲೆ ಶಾಕ್ ನೀಡಿದರು. ಆದರೆ ಅಂತಿಮ ಹಂತದಲ್ಲಿ ಪ್ಯಾಟ್ ಕಮಿನ್ಸ್ ಚೆನ್ನೈ ತಂಡಕ್ಕೆ ತಿರುಗೇಟು ನೀಡು ಪ್ರಯತ್ನ ಮಾಡಿದರು. ಆದರೆ ಕಮಿನ್ಸ್‌ಗೆ ಉತ್ತಮ ಸಾಥ್ ಸಿಗದ ಕಾರಣ ಕೆಕಆರ್ ರನ್‌ ಗಳಿಸಿತು. ಈ ಮೂಲಕ ಸಿಎಸ್‌ಕೆ ರನ್ ಗೆಲುವು ಕಂಡಿತು.

ಮೊದಲ ಪಂದ್ಯ ಸೋತಿದ್ದ ಸಿಎಸ್‌ಕೆ,  ನಂತರದ 3 ಪಂದ್ಯಗಳನ್ನು ಗೆದ್ದುಕೊಂಡಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ತನ್ನ ಬ್ಯಾಟಿಂಗ್ ವೈಫಲ್ಯ ಟೀಕಿಗೆ ಉತ್ತರ ನೀಡಿದೆ. 221 ರನ್ ಟಾರ್ಗೆಟ್ ಪಡೆದ ಕೆಕೆಆರ್ ಆರಂಭದಲ್ಲೇ ಬೆಚ್ಚಿ ಬಿದ್ದಿತು. ನಿತೀಶ್ ರಾಣಾ, ಶುಭ್‌ಮನ್ ಿಲ್, ರಾಹುಲ್ ತ್ರಿಪಾಠಿ ಹಾಗೂ ನಾಯಕ ಇಯಾನ್ ಮಾರ್ಗನ್ ಅಬ್ಬರಿಸಲೇ ಇಲ್ಲ.

ದೀಪಕ್ ಚಹಾರ್ ಹಾಗೂ ಲುಂಗಿ ಎನ್‌ಗಿಡಿ ದಾಳಿಗೆ ಕೆಕೆಆರ್ ತತ್ತರಿಸಿತು. ದಿನೇಶ್ ಕಾರ್ತಿಕ್ ಹಾಗೂ ಆ್ಯಂಡ್ರೆ ರಸೆಲ್ ಹೋರಾಟ ಕೆಕೆಆರ್ ತಂಡದಲ್ಲಿ ಗಲುವಿನ ಆಸ ಚಿಗುರಿಸಿತು. ರಸೆಲ್ 22 ಎಸೆತದಲ್ಲಿ 54 ರನ್ ಸಿಡಿಸಿದರೆ, ಕಾರ್ತಿಕ್ 24 ಎಸೆತದಲ್ಲಿ 40 ರನ್ ಸಿಡಿಸಿದರು. ಇವರ ನಿರ್ಗಮನದ ಬಳಿಕ ಪ್ಯಾಟ್ ಕಮಿನ್ಸ್ ಅಬ್ಬರ ಆರಂಭಗೊಂಡಿತು.

ಕಮಿನ್ಸ್‌ ಅಬ್ಬರಕ್ಕೆ ಸಿಎಸ್‌ಕೆ ಒಂದು ಕ್ಷಣ ಬೆಚ್ಚಿ ಬಿದ್ದಿತು. ಕಮಿನ್ಸ್ ಸಿಕ್ಸರ್ ಸುರಿಮಳೆಗೆ ಕೆಕೆಆರ್ ಗೆಲುವಿಗೆ ಅಂತಿಮ 10 ಎಸೆತದಲ್ಲಿ 22 ರನ್ ಅವಶ್ಯಕತೆ ಇತ್ತು. ಇದೇ ವೇಳೆ ವರುಣ ಚಕ್ರವರ್ತಿ ರನೌಟ್‌ಗೆ ಬಲಿಯಾದರು. 

ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಅಜೇಯ ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 9 ವಿಕೆಟ್ ನಷ್ಟಕ್ಕೆ ರನ್ ಸಿಡಿಸಿತು.