ಟಿ20 ವಿಶ್ವಕಪ್ ರದ್ಧಾದರೆ ಐಪಿಎಲ್: BCCI ಹೊಸ ಪ್ಲಾನ್..!

ಐಪಿಎಲ್ ಟೂರ್ನಿ ಸದ್ಯ ಕೊರೋನಾ ವೈರಸ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಐಪಿಎಲ್ ಆಯೋಜನೆಯ ಹೊಸ ಸಾಧ್ಯತೆಗಳನ್ನು ಬಿಸಿಸಿಐ ಲೆಕ್ಕಾಚಾರ ಹಾಕುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

IPL can happen in October if T20 World Cup is postponed Says BCCI Officials

ನವದೆಹಲಿ(ಏ.01): ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಟೂರ್ನಿಯನ್ನು ಐಸಿಸಿ ಮುಂದೂಡಿದರೆ ಆ ಅವಧಿಯಲ್ಲಿ ಐಪಿಎಲ್‌ ನಡೆಸುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 

ಕೊರೋನಾ ಎಫೆಕ್ಟ್: 2020ರ ಐಪಿಎಲ್‌ ಟೂರ್ನಿ ರದ್ದು?

‘ಆಸ್ಪ್ರೇಲಿಯಾ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ 6 ತಿಂಗಳ ನಿರ್ಬಂಧ ಹೇರುವ ಚಿಂತನೆ ನಡೆಸುತ್ತಿದೆ. ಹೀಗಾದಲ್ಲಿ ವಿಶ್ವಕಪ್‌ ಆಯೋಜಿಸುವುದು ಕಷ್ಟ. ವಿಶ್ವಕಪ್‌ ಮುಂದೂಡಿದರೆ ಐಪಿಎಲ್‌ ಆಯೋಜಿಸಲು ಅನುಕೂಲವಾಗಲಿದೆ’ ಎಂದು ಅಧಿಕಾರಿ ಹೇಳಿದ್ದಾರೆ. ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿರುವ ಏಷ್ಯಾಕಪ್‌ ರದ್ದುಗೊಳಿಸಿ ಆ ಸಮಯದಲ್ಲಿ ಐಪಿಎಲ್‌ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. 

ಜೀವನ ಸಹಜ ಸ್ಥಿತಿಗೆ ಬರಲಿ, ಆಮೇಲೆ ಐಪಿಎಲ್‌ ಎಂದ ಹಿಟ್‌ಮ್ಯಾನ್

13ನ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೊರೋನಾ ವೈರಸ್ ಕಂಠಕವಾಗಿ ಪರಿಣಮಿಸಿದೆ. ಮಾರ್ಚ್ 29ರಿಂದ ಆರಂಭವಾಗಬೇಕಿದ್ದ 2020ರ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಏಪ್ರಿಲ್ 15ರಿಂದಲೂ ಆರಂಭವಾಗುವುದು ಅನುಮಾನ ಎನಿಸಿದೆ.

Latest Videos
Follow Us:
Download App:
  • android
  • ios